Previous ಬಸವೇಶ್ವರ ಪೂಜಾವ್ರತ ಅಧ್ಯಾಯ - ೪ ಲಿಂಗಾಯತ ಧರ್ಮದ ಲಾಂಛನಗಳು Next

ಬಸವೇಶ್ವರ ಪೂಜಾವ್ರತ ಅಧ್ಯಾಯ - ೫

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಅಧ್ಯಾಯ -೫, ಗುರು ಬಸವ ಲಿಂಗ ಮಂತ್ರ ಪಠಣ

ಒಂದೊಂದು ಮಂತ್ರವನ್ನು ಹೇಳುವಾಗ ಒಂದೊಂದು ಪುಷ್ಪ ಅಥವ ಪತ್ರೆಯನ್ನು ಏರಿಸಬೇಕು [ಹೂವಿನ ಅಭಾವವಿದ್ದಲ್ಲಿ ಅಕ್ಕಿಯ ಕಾಳನ್ನು ಬಳಸಬಹುದು] . ಒಬ್ಬರು ಕ್ರಿಯಾಮೂರ್ತಿಯಾಗಿ ಪೂರಾ ಮಂತ್ರವನ್ನು ಹೇಳಿದರೆ ಉಳಿದವರು ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಎಂದು ಹಿಮ್ಮೇಳದಲ್ಲಿ ನುಡಿಯಬೇಕು.

ಓಂ ಪ್ರಣವ ಸ್ವರೂಪಿ ಗುರು ಬಸವ ಲಿಂಗಾಯ ನಮಃ - ಓಂ ಶ್ರೀ ಗುರು ಬಸವಲಿಂಗಾಯ ನಮಃ
ಓಂ ಪ್ರಥಮ ಗಣಾಧೀಶ ಗುರು ಬಸವ ಲಿಂಗಾಯ ನಮಃ
ಓಂ ಗುರು ಸಾರ್ವಭೌಮ ಗುರು ಬಸವ ಲಿಂಗಾಯ ನಮಃ
ಓಂ ಆದಿ ಪೂಜಕ ಮಹಿಮ ಗುರು ಬಸವ ಲಿಂಗಾಯ ನಮಃ
ಓಂ ಶರಣಗಣ ಶಿಖಾಮಣಿ ಗುರು ಬಸವ ಲಿಂಗಾಯ ನಮಃ
ಓಂ ಮರಣಭಯದೂರಕ ಗುರು ಬಸವ ಲಿಂಗಾಯ ನಮಃ
ಓಂ ಕಾಮಿತಾರ್ಥ ಫಲದಾಯಕ ಗುರು ಬಸವ ಲಿಂಗಾಯ ನಮಃ
ಓಂ ಯುಕ್ತ ಜ್ಞಾನ ಸ್ವರೂಪ ಗುರು ಬಸವ ಲಿಂಗಾಯ ನಮಃ
ಓಂ ಶರಣಾಗತ ರಕ್ಷಕ ಗುರು ಬಸವ ಲಿಂಗಾಯ ನಮಃ
ಓಂ ಕರುಣಾದ್ರ್ರ ಹೃದಯಿ ಗುರು ಬಸವ ಲಿಂಗಾಯ ನಮಃ || ೧೦ ||

ಓಂ ಭಕ್ತಜನ ಹೃತ್ಕಮಲವಾಸಿ ಗುರು ಬಸವ ಲಿಂಗಾಯ ನಮಃ
ಓಂ ಮುಕ್ತಿದಾಯಕ ಮಹಾಗುರು ಗುರು ಬಸವ ಲಿಂಗಾಯ ನಮಃ
ಓಂ ಕೂಡಲಸಂಗಮ ಪುರಾಧೀಶ್ವರ ಗುರು ಬಸವ ಲಿಂಗಾಯ ನಮಃ
ಓಂ ಕಲ್ಯಾಣಪುರ ಅಧಿನಾಯಕ ಗುರು ಬಸವ ಲಿಂಗಾಯ ನಮಃ
ಓಂ ಭವರುಜೆಗೆ ಶ್ರೇಷ್ಠ ವೈದ್ಯ ಗುರು ಬಸವ ಲಿಂಗಾಯ ನಮಃ
ಓಂ ಶಿವಕಾರುಣ್ಯಧಾರಕ ಗುರು ಬಸವ ಲಿಂಗಾಯ ನಮಃ
ಓಂ ಪರುಷಪಾದ ಚಿದ್ರೂಪಿ ಗುರು ಬಸವ ಲಿಂಗಾಯ ನಮಃ
ಓಂ ಪರಮಗುರು ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಇಷ್ಟಲಿಂಗದಾತ ಮಹಾಗುರು ಗುರು ಬಸವ ಲಿಂಗಾಯ ನಮಃ
ಓಂ ಇಷ್ಟಲಿಂಗಧಾರಕ ಗುರು ಬಸವ ಲಿಂಗಾಯ ನಮಃ || ೨೦ ||

ಓಂ ಜಂಗಮಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಶ್ರೀಪುಂಡ್ರಾಂಕಿತ ಲಲಾಟ ಗುರು ಬಸವ ಲಿಂಗಾಯ ನಮಃ
ಓಂ ರುದ್ರಾಕ್ಷಧಾರಕ ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಮಂತ್ರವೇಧಿತ ಸಿದ್ದ ಗುರು ಬಸವ ಲಿಂಗಾಯ ನಮಃ
ಓಂ ದೋದಕ ವೇದ್ಯ ಗುರು ಬಸವ ಲಿಂಗಾಯ ನಮಃ
ಓಂ ಪ್ರಸಾದ ವೇಧಿತ ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಅಷ್ಟಾವರಣ ಶೋಭಿತ ಗುರು ಬಸವ ಲಿಂಗಾಯ ನಮಃ
ಓಂ ಏಕದೇವ ನಿಷ್ಠ ಲಿಂಗಾಚಾರಿ ಗುರು ಬಸವ ಲಿಂಗಾಯ ನಮಃ
ಓಂ ಕಾಯಕಯೋಗಿ ಸದಾಚಾರಿ ಗುರು ಬಸವ ಲಿಂಗಾಯ ನಮಃ
ಓಂ ಶ್ರೇಷ್ಠಸಮತಾವಾದಿ ಶಿವಾಚಾರಿ ಗುರುಬಸವ ಲಿಂಗಾಯ ನಮಃ || ೩೦ ||

ಓಂ ತತ್ತ್ವನಿಷ್ಠ ಗಣಾಚಾರಿ ಗುರು ಬಸವ ಲಿಂಗಾಯ ನಮಃ
ಓಂ ಸೇವಾವ್ರತ ಧಾರಿ ನೃತ್ಯಾಚಾರಿ ಗುರು ಬಸವ ಲಿಂಗಾಯ ನಮಃ
ಓಂ ಪಂಚಾಚಾರ ಪ್ರತಿಪಾದಕ ಗುರು ಬಸವ ಲಿಂಗಾಯ ನಮಃ
ಓಂ ಷಟಸ್ಥಲ ಪಥ ದ್ರಷ್ಟಾರ ಗುರು ಬಸವ ಲಿಂಗಾಯ ನಮಃ
ಓಂ ಭಕ್ತಸ್ಥಲ ವೇದ್ಯ ಗುರು ಬಸವ ಲಿಂಗಾಯ ನಮಃ
ಓಂ ಮಹೇಶ್ವರ ಸ್ಥಲ ಸಾಧಕ ಗುರು ಬಸವ ಲಿಂಗಾಯ ನಮಃ
ಓಂ ಪ್ರಸಾದ ಸಂಸಿದ್ಧ ಗುರು ಬಸವ ಲಿಂಗಾಯ ನಮಃ
ಓಂ ಪ್ರಾಣಲಿಂಗಿ ಸ್ಥಲ ಸಾಧಿತ ಗುರು ಬಸವ ಲಿಂಗಾಯ ನಮಃ
ಓಂ ಶರಣಸ್ಥಲ ಸಂಪನ್ನ ಗುರು ಬಸವ ಲಿಂಗಾಯ ನಮಃ || ೪೦ ||

ಓಂ ಐಕ್ಯಸ್ಥಲ ಪರಿಪೂರ್ಣ ಗುರು ಬಸವ ಲಿಂಗಾಯ ನಮಃ
ಓಂ ಮಹಾಭಕ್ತಸ್ಥಲ ಪರಿಣಿತ ಗುರು ಬಸವ ಲಿಂಗಾಯ ನಮಃ
ಓಂ ಷಟಸ್ಥಲ ಮಾರ್ಗ ಸಿದ್ಧ ಗುರುಬಸವ ಲಿಂಗಾಯ ನಮಃ
ಓಂ ಇಷ್ಟಲಿಂಗ ಯೋಗ ನಿರ್ಮಾಪಕ ಗುರು ಬಸವ ಲಿಂಗಾಯ ನಮಃ
ಓಂ ಪದಾರ್ಥತ್ಯಾಗಿ ನಿರ್ವಿಕಾರ ಗುರು ಬಸವ ಲಿಂಗಾಯ ನಮಃ
ಓಂ ಪ್ರಸಾದ ಭೋಗ ಸಂತೃಪ್ತ ಗುರು ಬಸವ ಲಿಂಗಾಯ ನಮಃ
ಓಂ ಲಿಂಗಾಂಗಯೋಗ ಸುಯಿಧಾನಿ ಗುರು ಬಸವ ಲಿಂಗಾಯ ನಮಃ
ಓಂ ಪೂರ್ಣಯೋಗ ಸಿದ್ಧ ಸಾರ್ವಭೌಮ ಗುರು ಬಸವ ಲಿಂಗಾಯ ನಮಃ
ಓಂ ಆನಂದ ಸ್ವರೂಪ ಗುರು ಬಸವ ಲಿಂಗಾಯ ನಮಃ
ಓಂ ಪರಮ ಕಾರಣಿಕ ಗುರು ಬಸವ ಲಿಂಗಾಯ ನಮಃ
ಓಂ ಮಂತ್ರಮಯ ಮೂರ್ತಿ ಗುರು ಬಸವ ಲಿಂಗಾಯ ನಮಃ || ೫೦ ||

ಓಂ ಬಸವಲಿಂಗ ನಾಮಾಂಕಿತ ಗುರು ಬಸವ ಲಿಂಗಾಯ ನಮಃ
ಓಂ ಅನುಭಾವ ರಸವಾರಿಧಿ ಗುರು ಬಸವ ಲಿಂಗಾಯ ನಮಃ
ಓಂ ದಾರ್ಶನಿಕ ಶ್ರೇಷ್ಠ ಗುರು ಬಸವ ಲಿಂಗಾಯ ನಮಃ
ಓಂ ಗಾನ ವಿಶಾರದ ನಾದಲೋಲ ಗುರು ಬಸವ ಲಿಂಗಾಯ ನಮಃ
ಓಂ ತತ್ತ್ವಜ್ಞಾನ ಶಿಖಾಮಣಿ ಗುರು ಬಸವ ಲಿಂಗಾಯ ನಮಃ
ಓಂ ಸೇಶ್ವರವಾದಿ ಆಸ್ತಿಕ ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಭಕ್ತಿಯೋಗಿ ಗುರು ಬಸವ ಲಿಂಗಾಯ ನಮಃ
ಓಂ ಜ್ಞಾನಯೋಗ ವೇದ್ಯ ಗುರು ಬಸವ ಲಿಂಗಾಯ ನಮಃ
ಓಂ ರಾಜಯೋಗ ತಿಲಕ ಗುರು ಬಸವ ಲಿಂಗಾಯ ನಮಃ
ಓಂ ಕುಂಡಲಿನಿಯೋಗ ಸಿದ್ಧ ಗುರು ಬಸವ ಲಿಂಗಾಯ ನಮಃ || ೬೦ ||

ಓಂ ಲಿಂಗದೇವ ಯೋಗ ಪರಿಪೂರ್ಣ ಗುರು ಬಸವ ಲಿಂಗಾಯ ನಮಃ
ಓಂ ಅಸಾಧ್ಯ ಸಾಧ್ಯ ಗುರು ಬಸವ ಲಿಂಗಾಯ ನಮಃ
ಓಂ ಅಭೇದ್ಯ ಭೇದ್ಯ ಗುರು ಬಸವ ಲಿಂಗಾಯ ನಮಃ
ಓಂ ಖಂಡ ಸಾಕ್ಷಾತ್ಕಾರಿ ಗುರು ಬಸವ ಲಿಂಗಾಯ ನಮಃ
ಓಂ ಅಖಂಡ ಸಾಕ್ಷಾತ್ಕಾರಿ ಗುರು ಬಸವ ಲಿಂಗಾಯ ನಮಃ
ಓಂ ಪರಿಪೂರ್ಣ ಸಾಕ್ಷಾತ್ಕಾರಿ ಗುರು ಬಸವ ಲಿಂಗಾಯ ನಮಃ
ಓಂ ನಿತ್ಯಲಿಂಗಾರ್ಚಕ ಗುರು ಬಸವ ಲಿಂಗಾಯ ನಮಃ
ಓಂ ಜಂಗಮ ದಾಸೋಹಿ ಗುರು ಬಸವ ಲಿಂಗಾಯ ನಮಃ
ಓಂ ಸರ್ವಾಂಗ ಲಿಂಗಮಯ ಗುರು ಬಸವ ಲಿಂಗಾಯ ನಮಃ
ಓಂ ಗರ್ವರಹಿತ ಶಿವಭಾವಸನ್ನಿಹಿತ ಗುರು ಬಸವ ಲಿಂಗಾಯ ನಮಃ || ೭೦ ||

ಓಂ ಲೋಕ ಹಿತಚಿಂತಕ ಪವಾಡ ಪುರುಷ ಗುರು ಬಸವ ಲಿಂಗಾಯ ನಮಃ
ಓಂ ಪಂಚಪುರುಷ ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಸತಿಹಿಡಿದು ವ್ರತಗೈದ ಸಂಸಾರಯೋಗಿ ಗುರು ಬಸವ ಲಿಂಗಾಯ ನಮಃ
ಓಂ ಪರಮವಿರಕ್ತ ಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಪರಮ ಪ್ರಸಾದಿ ಗುರು ಬಸವ ಲಿಂಗಾಯ ನಮಃ
ಓಂ ಪರಿಶುದ್ಧ ನೀತಿವಾದಿ ಗುರು ಬಸವ ಲಿಂಗಾಯ ನಮಃ
ಓಂ ಸ್ಥಿತಪ್ರಜ್ಞ ಮನಸ್ಕ ಗುರು ಬಸವ ಲಿಂಗಾಯ ನಮಃ
ಓಂ ಜೀವನ್ಮುಕ್ತ ಸ್ಥಿತಿ ಸಹಿತ ಗುರು ಬಸವ ಲಿಂಗಾಯ ನಮಃ
ಓಂ ಇಚ್ಛಾಮರಣ ಸಿದ್ಧ ಗುರು ಬಸವ ಲಿಂಗಾಯ ನಮಃ
ಓಂ ಜಂಗಮ ತತ್ತ್ವರೂಹಾರಿ ಗುರು ಬಸವ ಲಿಂಗಾಯ ನಮಃ || ೮೦ ||

ಓಂ ವಿರಕ್ತಮಾರ್ಗ ನಿರ್ಮಾಪಕ ಗುರು ಬಸವ ಲಿಂಗಾಯ ನಮಃ
ಓಂ ಶೂನ್ಯ ಪೀಠ ಸಂಸ್ಥಾಪಕ ಗುರು ಬಸವ ಲಿಂಗಾಯ ನಮಃ
ಓಂ ಸಮತಾ ತತ್ವ ಪ್ರತಿಪಾದಕ ಗುರು ಬಸವ ಲಿಂಗಾಯ ನಮಃ
ಓಂ ಸ್ತ್ರೀಕುಲೋದ್ಧಾರಕ ಮಹಾಗುರು ಗುರು ಬಸವ ಲಿಂಗಾಯ ನಮಃ
ಓಂ ಪತಿತೋದ್ಧಾರಕ ಮಾತೃಹೃದಯಿ ಗುರು ಬಸವ ಲಿಂಗಾಯ ನಮಃ
ಓಂ ದಲಿತೋದ್ಧಾರಕ ದಯಾಶೀಲ ಗುರು ಬಸವ ಲಿಂಗಾಯ ನಮಃ
ಓಂ ಮಹಾಮಾನವತಾವಾದಿ ಕಾರುಣ್ಯನಿಧಿ ಗುರು ಬಸವ ಲಿಂಗಾಯ ನಮಃ
ಓಂ ಸ್ವತಂತ್ರವಿಚಾರವಾದಿ ಧೀಮನ್ಮತಿ ಗುರು ಬಸವ ಲಿಂಗಾಯ ನಮಃ
ಓಂ ಶ್ರೇಷ್ಠ ರಾಜಕಾರಣ ಮುತ್ಸದ್ಧಿ ಗುರು ಬಸವ ಲಿಂಗಾಯ ನಮಃ
ಓಂ ಕ್ರಾಂತಿಪುರುಷ ಭ್ರಾಂತಿದೂರ ಗುರು ಬಸವ ಲಿಂಗಾಯ ನಮಃ || ೯೦ ||

ಓಂ ಶಾಂತಿದೂತ ಧರ್ಮಪಿತ ಗುರು ಬಸವ ಲಿಂಗಾಯ ನಮಃ
ಓಂ ಗಣಿತಶಾಸ್ತ್ರಪರಿಣತ ಗುರು ಬಸವ ಲಿಂಗಾಯ ನಮಃ
ಓಂ ಪುರಾತನ ಲಿಪಿತಜ್ಞ ಗುರು ಬಸವ ಲಿಂಗಾಯ ನಮಃ
ಓಂ ಉನ್ನತ ಅರ್ಥಶಾಸ್ತ್ರಜ್ಞ ಗುರು ಬಸವ ಲಿಂಗಾಯ ನಮಃ
ಓಂ ವಚನ ಸಾಹಿತ್ಯ ಸಾರ್ವಭೌಮ ಗುರು ಬಸವ ಲಿಂಗಾಯ ನಮಃ
ಓಂ ಸಾಹಿತಿಗಳ ಸ್ಪೂರ್ತಿಗಂಗೋತ್ರಿ ಗುರು ಬಸವ ಲಿಂಗಾಯ ನಮಃ
ಓಂ ಶರಣಸಮಾಜ ನಿರ್ಮಾಪಕ ಗುರು ಬಸವ ಲಿಂಗಾಯ ನಮಃ
ಓಂ ಶ್ರೇಷ್ಠಸಮಾಜ ಸುಧಾರಕ ಗುರು ಬಸವ ಲಿಂಗಾಯ ನಮಃ
ಓಂ ಅಹಿಂಸಾತತ್ತ್ವ ಪ್ರತಿಪಾದಕ ಗುರು ಬಸವ ಲಿಂಗಾಯ ನಮಃ
ಓಂ ಲಿಂಗಾಯತ ಧರ್ಮ ಸಂಸ್ಥಾಪಕ ಗುರು ಬಸವ ಲಿಂಗಾಯ ನಮಃ || ೧೦೦ ||

ಓಂ ಭಕ್ತಿಕಾಂಡದ ಮೂಲಿಗ ಗುರು ಬಸವ ಲಿಂಗಾಯ ನಮಃ
ಓಂ ಸ್ವಯಂಕೃತ ಸಹಜ ಗುರುಮೂರ್ತಿ ಗುರು ಬಸವ ಲಿಂಗಾಯ ನಮಃ
ಓಂ ಭಕ್ತ ಹೃದಯಾಬ್ಜ ಪೀಠ ನಿಲಯಂ ಗುರು ಬಸವ ಲಿಂಗಾಯ ನಮಃ
ಓಂ ಕಲ್ಯಾಣಗುಣ ಸಂಗಮ ಗುರು ಬಸವ ಲಿಂಗಾಯ ನಮಃ
ಓಂ ಕಲ್ಯಾಣ ರಾಜ್ಯ ನಿರ್ಮಾಪಕ ಗುರು ಬಸವ ಲಿಂಗಾಯ ನಮಃ
ಓಂ ವಿಶ್ವಕಲ್ಯಾಣ ಚಿಂತಕ ಗುರು ಬಸವ ಲಿಂಗಾಯ ನಮಃ
ಓಂ ಮನುಕುಲೋದ್ಧಾರಕ ಮಹಾತ್ಮ ಗುರು ಬಸವ ಲಿಂಗಾಯ ನಮಃ
ಓಂ ಜಯತು ಜಯತು ಜಗದ್ಗುರು ಗುರು ಬಸವ ಲಿಂಗಾಯ ನಮಃ || ೧೦೮ ||

ಐದನೆಯ ಪೂಜೆ :

ಗುರು ಬಸವಾಷ್ಟಕ

ನತಜನ ರಕ್ಷಕ ಶ್ರೀ ಗುರು ಬಸವ
ಲಿಂಗಾಯತ ಸಂಸ್ಥಾಪಕ ಶ್ರೀ ಗುರು ಬಸವ
ಇಷ್ಟಪ್ರದಾಯಕ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ॥

ವಚನ ಶಾಸ್ತ್ರ ಸಾರ್ವಭೌಮ ಶ್ರೀ ಗುರು ಬಸವ
ನವಪಥ ನಿರ್ಮಾಪಕ ಶ್ರೀ ಗುರು ಬಸವ
ಸಮತಾವಾದಿ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ಇಷ್ಟಲಿಂಗಾದಾತ ಶ್ರೀ ಗುರು ಬಸವ
ಇಷ್ಟಲಿಂಗಧಾರಕ ಶ್ರೀ ಗುರು ಬಸವ
ಇಷ್ಟಲಿಂಗ ಪೂಜಕ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ವಾಕ್ಸಿದ್ಧಿ ಪುರುಷ ಶ್ರೀ ಗುರು ಬಸವ
ಪಂಚಪರುಷ ಶ್ರೀ ಗುರು ಬಸವ
ಜೀವನ್ಮುಕ್ತ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ಪತಿತೋದ್ಧಾರಕ ಶ್ರೀ ಗುರು ಬಸವ
ದಲಿತೋದ್ಧಾರಕ ಶ್ರೀ ಗುರು ಬಸವ
ಪಾವನಚರಿತ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ಮಂತ್ರಪುರುಷ ಶ್ರೀ ಗುರು ಬಸವ
ಕ್ರಾಂತಿಯೋಗಿ ಶ್ರೀ ಗುರು ಬಸವ
ಶಾಂತಿದೂತ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ಶರಣ ಪ್ರೇಮಿ ಶ್ರೀ ಗುರು ಬಸವ
ಶರಣ ಪ್ರೀತ ಶ್ರೀ ಗುರು ಬಸವ
ಶರಣ ಪಥದಾತ ಶ್ರೀ ಗುರು ಬಸವ
ಶರಣೆಂಬೆ ನಾ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ ||

ಮುಕ್ತಿದಾಯಕ ಶ್ರೀ ಗುರು ಬಸವ
ಭಕ್ರೋದ್ಧಾರಕ ಶ್ರೀ ಗುರು ಬಸವ
ಬಸವಾತ್ಮಜೆ ಪಿತ ಶ್ರೀ ಗುರು ಬಸವ
ಸಚ್ಚಿದಾನಂದ ಸುತ ಓಂ ಗುರು ಬಸವ || ಓಂ ಶ್ರೀ ಗುರುಬಸವ ಲಿಂಗಾಯ ನಮಃ || - ರಚನೆ : ಪೂಜ್ಯ ಮಾತಾಜಿ

ಸಮರ್ಪಣ ಗೀತೆ

ಹೃದಯ ಬಟ್ಟಲ ಮಾಡಿ ಭಕ್ತಿರಸವನು ತುಂಬಿ
ಶರಣಾಗತಿಯ ಭಾವದಿಂ ಎರೆಯುವೆನು ತಂದೆ || ಪ ||

ಎನ್ನ ಸುಖ-ದುಃಖಗಳ ಬೆಲ್ಲ-ಬೇವುಗಳನ್ನು
ಪಾದಕ್ಕೆ ಎಡೆಮಾಡಿ ಅರ್ಪಿಸುವೆ ತಂದೆ

ನಿನ್ನ ಕೈಯೊಳಗೆ ಸಿಕ್ಕ ಲೆಕ್ಕಣಿಕೆಯೊಲು
ನೀ ಬರೆಸಿದಂತೆ ನಾ ಬರೆಯುವೆನು ತಂದೆ |
ತವ ಹಸ್ತದೊಳಗೆ ದಿವ್ಯ ವೀಣೆಯು ಆಗಿ
ನೀ ಮಿಡಿಸೆ ಗಾನವನು ನಾ ನುಡಿವೆ ತಂದೆ ||

ಒರೆದು ಎನ್ನನು ನೋಡು ಕೊರೆದು ಎನ್ನನು ಕಾಡು
ಹೇಗೆ ನೋಡಿದಡು ಬಸವ ನೀನೆನ್ನ ತಂದೆ |
ನಿನ್ನ ಕರುಣೆಯೆ ಮುಕ್ತಿ ನಿನ್ನ ಭಕ್ತಿಯ ಶಕ್ತಿ
ನೀನೆನ್ನ ಬಾಳಿನ ಸ್ಪೂರ್ತಿ ಕೀರ್ತಿಯು ತಂದೆ |

ನಿನಗಾಗಿ ಬಾಳಿಸು ಭಾವನೆಯ ಹೊತ್ತಿಸು
ನಿನ್ನ ವಚನದ ಸೂರೆಗೆ ಎನ್ನ ಅನುಗೊಳಿಸು ತಂದೆ |
ಬಸವರಸ ಬಸವಯ್ಯ ಬಸವಣ್ಣ ಬಸವಪ್ರಭು
ಸಚ್ಚಿದಾನಂದ ಕಳುಹಿದ ನೀನೆನ್ನ ತಂದೆ |

ಮಹಾ ಮಂಗಳಾರತಿ

ಬಸವ ಮಂಗಲ

ಓಂ ಗುರು ಓಂ ಗುರು ಓಂ ಗುರು ಬಸವಾ
ಸದ್ಗುರು ಬಸವಾ ತವ ಶರಣಂ || ಪ ||

ಮಂಗಲ ರೂಪಿನ್ ಜಂಗಮ ಮೂರ್ತೆ
ಮದ್ಗುರು ಬಸವಾ ತವ ಶರಣಂ

ನಮಾಮಿ ಸದ್ಗುರು ಪ್ರಣವ ಸ್ವರೂಪಿನ್
ಮಂತ್ರಪುರುಷ ಹೇ ತವ ಶರಣಂ
ಜಗದೋದ್ಧಾರಕ ಪತಿತೋದ್ಧಾರಕ
ವರಗುರು ಬಸವಾ ತವ ಶರಣಂ

ಶರಣರಕ್ಷಕ ಕರುಣಾಮೂರ್ತೆ
ಮರಣವಿದೂರ ತವಶರಣಂ
ಸಮತಾವಾದಿ ಮನುಕುಲ ಕೀರ್ತೆ
ಚಿನ್ಮಯ ಮೂರ್ತೆ ತವಶರಣಂ

ಸನ್ಮಯಗಾತ್ರಾ ಪರಮ ಪವಿತ್ರಾ
ಮಮತಾ ಮೂರ್ತೆ ತವಶರಣಂ
ಮಾತೃ ಸ್ವರೂಪಿನ್ ಪಿತೃ ಸ್ವರೂಪಿನ್
ಜ್ಯೋತಿ ಸ್ವರೂಪಿನ್ ತವ ಶರಣಂ

ಭವತಾಪಹಾರಕ ದಿವ್ಯ ಸುಖದಾಯಕ
ಪಾವನ ಪುರುಷ ತವಶರಣಂ
ವರಗುಣ ಸಹಿತ ನಿರುಪಮ ಚರಿತ
ಪರತತ್ತ್ವ ಭರಿತ ತವಶರಣಂ

ನಿತ್ಯಾನಂದಿನ್ ಸತ್ಯ ಸ್ವರೂಪಿನ್
ಭ್ರಾಂತಿವಿನಾಶಕ ತವಶರಣಂ
ಆನಂದರೂಪಿನ್ ಚಿದಾನಂದರೂಪಿನ್
ಸಚ್ಚಿದಾನಂದ ಸುತ ತವಶರಣಂ -ಜಗದ್ಗುರು ಮಾತೆ ಮಹಾದೇವಿ

ಮಂಗಲಾಚರಣೆ

ಮಂಗಲ: ಗೀತೆಯನ್ನು ಹಾಡಿದ ನಂತರ ಮಂಗಲಘೋಷ ಮತ್ತು ಜಯಕಾರ ಮಾಡಬೇಕು.

ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಲಿಂಗದೇವನ ಘನತೇಜ |
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರು ಬಸವಾ
ರಕ್ಷಿಸು ಶ್ರೀ ಗುರು ಬಸವಾ ರಕ್ಷಿಸು ಶ್ರೀ ಗುರು ಬಸವಾ |

ಜಯ ಗುರು ಬಸವೇಶ ಹರಹರ ಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಾ..............ಜೈ |
ಸಕಲ ಶರಣ ಸಂತೋಂಕಿ........ ........... ಶರಣು ಶರಣಾರ್ಥಿ

.
“ಜಯ ಗುರು ಬಸವೇಶ ಹರಹರ ಮಹಾದೇವ” ಎಂದು ಸಾಮೂಹಿಕವಾಗಿ ಘೋಷಿಸುವಾಗ ಹೂವುಗಳನ್ನು ಭಾವಚಿತ್ರಕ್ಕೆ
ಅರ್ಪಿಸಬೇಕು.

ವಿಶ್ವಗುರು ಬಸವೇಶ್ವರ ಮಹಾತ್ಮಕಿ ಜೈ, ಶರಣು ಶರಣಾರ್ಥಿ ಅನ್ನುವಾಗ ಎಲ್ಲರೂ ನಮಸ್ಕರಿಸಬೇಕು.

ಪ್ರಸಾದ ವಿತರಣೆ

೧. ಎಲ್ಲರೂ ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿದ ನಂತರ ಕುಳಿತುಕೊಳ್ಳಬೇಕು.

೨. ಪೂಜೆಯಲ್ಲಿ ಕುಳಿತವರು ತೀರ್ಥವನ್ನು ಮಾಡಬೇಕು. ಒಂದು ಲೋಟದಲ್ಲಿ ನೀರಿನ್ನು ತೆಗೆದುಕೊಂಡು, ಬಲಗೈ ಬೆರಳಿಗೆ ವಿಭೂತಿ ಧರಿಸಿ, ಒಂದೊಂದು ಗಣ್ಣಿಗೆ ಒಂದರಂತೆ “ಓಂ ಶ್ರೀ ಗುರು ಬಸವ ಲಿಂಗಾಯ ನಮಃ” ಎಂದು ೧೨ ಬಾರಿ ಪಠಿಸಿ ಆ ಬೆರಳುಗಳನ್ನು ನೀರಿನಲ್ಲಿ ಅದ್ದಿ ಷಟ್‌ಕೋನದ ಬಸವಲಿಂಗ ಮುದ್ರೆಯನ್ನು ಬರೆದು, ಮಂತ್ರೋದಕ ಸಿದ್ಧಮಾಡಬೇಕು. ಎಳೆನೀರು, ಕಲ್ಲುಸಕ್ಕರೆ, ಏಲಕ್ಕಿ, ಪಚ್ಚಕರ್ಪೂರ, ಕೇಸರಿ ಸೇರಿಸಿ ತೀರ್ಥ ಮಾಡಿ ಮಂತ್ರೋದಕಕ್ಕೆ ಬೆರೆಸಬೇಕು. ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದು. ಎಡಗೈಯಲ್ಲಿ ಉದ್ಧರಣೆ ತೆಗೆದುಕೊಂಡು ಬಲಗೈಯಲ್ಲಿ ಮೂರು ಬಾರಿ ಹಾಕಿ, ಗುರು ಬಸವಣ್ಣನವರ ಕರುಣೆ, ಲಿಂಗದೇವನ ಕರುಣೆ, ಶರಣರ ಕರುಣೆ
ಎಂದು ನುಡಿದು ಪೂಜೆ ಮಾಡಿದವರು ಕುಡಿಯಬೇಕು.

೩. ವಿಭೂತಿಯನ್ನು ಎಲ್ಲರಿಗೂ ಧರಿಸಿಕೊಳ್ಳಲು ಕೊಡಬೇಕು.

೪. ತೀರ್ಥ ಮತ್ತು ಪ್ರಸಾದಗಳನ್ನು (ವಿಶೇಷ ಪ್ರಸಾದವನ್ನು ಸಹ) ವಿತರಣೆ ಮಾಡಬೇಕು. ಅವರವರ ಶಕ್ತಾನುಸಾರ ಪ್ರಸಾದ ಕೊಡಬಹುದು. ಸಾಂಕೇತಿಕವಾಗಿ ಪ್ರಸಾದ ನೀಡಿ, ಸಾಹಿತ್ಯವನ್ನು ಉಡುಗೊರೆಯಾಗಿ ಕೊಡುವುದು ಒಳ್ಳೆಯದು. ಶ್ರೀಮಂತರು ತಮ್ಮ ವೈಭವ ಪ್ರದರ್ಶನವನ್ನು “ಸಾಹಿತ್ಯ ಪ್ರಸಾದ” ನೀಡುವುದರ ಮೂಲಕ ತೋರಿಸಿಕೊಂಡರೆ ಅವರ ಧನವೂ ಸಾರ್ಥಕವಾಗುತ್ತದೆ. ಸಾಹಿತ್ಯ ಪ್ರಸಾರ ಮಾಡಿದ ಪುಣ್ಯವು ಬರುತ್ತದೆ.

ವಿಶೇಷ ಸೂಚನೆಗಳು

೧. ಶ್ರೀ ಬಸವೇಶ್ವರ ಪೂಜಾ ವ್ರತ ವನ್ನು ಅವರವರೇ ಮಾಡಬೇಕು. ತಮ್ಮ ಆಹಾರವನ್ನು ತಾವೇ ಸ್ವೀಕರಿಸುವಂತೆ ಪೂಜೆಯನ್ನು ತಾವೇ ಮಾಡಬೇಕು.

೨. ಕ್ರಿಯಾಮೂರ್ತಿಗಳು (ಪೂಜಾರಿ-ಪುರೋಹಿತರು) ಇನ್ನು ಮುಂದೆ ಇದನ್ನು ಅಳವಡಿಸಿಕೊಂಡು ಪೂಜೆ ಮಾಡಲು ಕರೆದಾಗ ಹೋಗಿ ಮಾಡಿಬೇಕು. ಆಗ ಒಂದೊಂದು ಪೂಜೆಗೊಂದು ತೆಂಗಿನಕಾಯಿ, ಹೊಸ ವಸ್ತ್ರ ಮುಂತಾದ್ದನ್ನೆಲ್ಲ ತರಬೇಕು ಎಂದು ಮನೆಯವರಿಗೆ ತೊಂದರೆ ಕೊಡದೆ ಅವರು ಸ್ವಯಂಪ್ರೇರಣೆಯಿಂದ ಕೊಟ್ಟಿದ್ದು ಸ್ವೀಕರಿಸಬೇಕು. ಪೂಜೆ ಮಾಡುವ ಸದ್ಭಕ್ತರು ದಿನಾಲು ಒಂದೊಂದು ಅಧ್ಯಾಯದಂತೆ ಓದಬಹುದು. ಅಷ್ಟೆಲ್ಲ ಸಮಯಾವಕಾಶ, ಮನಸ್ಸು ಇದ್ದರೆ ಸಂಪೂರ್ಣ ಓದಬಹುದು.

ಬಸವ ಪೂಜೆಯ ಮಾಡುವಾ | ಶರಣರೆ
ಬಸವ ಪೂಜೆಯ ಮಾಡುವಾ || ಪಲ್ಲವಿ ||

ಮರ್ತ್ಯದ ಮಣಿಹ ಮುಗಿಸಿ ಕರ್ತನ ಕರೆ ಪಡೆದು
ಇಚ್ಛಾಮರಣದ ಪರಮನ ಬೆರೆದಂಥ

ಕೂಡಲ ಸಂಗಮದ ಸುಕ್ಷೇತ್ರದಲ್ಲಿ
ನಳನಾಮ ಸಂವತ್ಸರದೋಳ್
ಶ್ರಾವಣ ಶುದ್ಧ ಪಂಚಮಿಯಂದು ಪರಮಾತ್ಮನ ಅಣತಿ ಪಡೆದು
ಉರಿಯುಂಡ ಕರ್ಪುರದೋಲ್ ದೇವನಲಿ ಬಯಲಾದ

ಭಕ್ತಿಯ ಭೂಮಿಯೊಳು ಬೆಳೆದಂಥ
ಅರಿವಿನ ಮಾಮರದೊಳ್
ಸೃಷ್ಟಿಗೊಡೆಯ ಲಿಂಗದೇವನ ದಿವ್ಯ ಕಾರುಣ್ಯವನ್ನು ಪಡೆದು
ನಿಷ್ಪತ್ತಿ ಹಣ್ಣಾಗಿ ಅವನೊಡನೆ ಬೆರೆದಿಹ

ಇಷ್ಟ ಲಿಂಗವ ತಾನಿತ್ತ ಪರಮಗುರು
ಶ್ರೇಷ್ಠಪಥ ದರ್ಶಕನು
ಲಿಂಗಾಯತ ಧರ್ಮ ನೀಡ್ದ ಮಂಗಳಾಂಗ ಮಂತ್ರಪುರುಷ
ಅಂಗಮನದ ಗುಣಗಳಳಿದು ಸರ್ವಾಂಗಲಿಂಗಿಯಾದ

ಶ್ರೀ ಗುರು ಬಸವಣ್ಣಂಗೆ ಶರಣಾಗುತ್ತ
ಲಿಂಗದೇವನ ನಂಬಿ
ಶರಣ ಗಣಕ್ಕೆ ಶರಣಾಗಿ ಕರುಣ ಪ್ರಸಾದ ಪಡೆದು
ಗಣ ಪದವಿಯ ಹೊಂದಿ ಹಿಗ್ಗಿ ನಲಿದಾಡಲು

ಶೃಂಗ ಕುಸುಮದ ಮಧುವ ಹೀರುವ ತೆರದಿ
ಲಿಂಗದ ಆನಂದವ
ಅಂಗ ಮನ ಕರಣಾದಿ ಗುಣಗಳ ಲಿಂಗಭಾವದಿ ನಾಶ ಮಾಡಿ
ಲಿಂಗದೇವ ಶ್ರೀ ಸಚ್ಚಿದಾನಂದನ ಬೆರೆದಂಥ


ಪುಷ್ಪವೃಷ್ಟಿ
ಹೂವ ಸೂರಾಡೋಣ


ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ
ಧರ್ಮಕರ್ತನ ಮೇಲೆ ಹೂವ ಸೂರಾಡೋಣ || ಪಲ್ಲವಿ ||

ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ
ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ

ಒಬ್ಬ ದೇವನ ನಂಬಿ ಶ್ರದ್ಧೆಯಿಂ ಸಾಗುತ
ಅರಿವಿನ ನಿಲುವನು ಪಡೆದ ಸದ್ಭಕ್ತನ ಮೇಲೆ

ಕರ್ತನಿಗಲ್ಲದೆ ಕುಚ್ಛಿತಗೆರಗೆನು
ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ

ನಾನು ಎನ್ನುವ ಹಮ್ಮನು ಹರಿಯುತ
ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ

ಅಂಗದ ಗುಣವಳಿದು ಲಿಂಗ ಭಾವವು ಬಲಿದು
ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ

ಸತಿಸುತ ಬಳಗದ ಮೋಹವ ಛೇದಿಸಿ,
ದೇವಗೆ ಸತಿಯಾದ ದಿವ್ಯ ಶರಣನ ಮೇಲೆ

ಅಂಗ ಲಿಂಗ ಸಮರಸ ಶೃಂಗ ಭಾವವು ಬಲಿದು
ತ್ರಿಪುಟಿಯ ಭಾವವಳಿದ ಭಾವ ಲಿಂಗೈಕ್ಯನ ಮೇಲೆ

ಆರು ಸ್ಥಲಗಳ ದಾಟಿ ಧರೆಯ ಉದ್ಧಾರಕ್ಕೆ
ಮಹಾಭಕ್ತ ಸ್ಥಲದಲ್ಲಿ ನಿಂತ ಕರುಣಿಯ ಮೇಲೆ

ಮುಕ್ತಿದಾತನ ತೋರಿ ಮುಕ್ತಿದಾಯಕನಾದ
ಸಚ್ಚಿದಾನಂದ ಮುದ್ದುಕಂದನ ಮೇಲೆ


ಜಯತು ಜಯ ಬಸವ ಲಿಂಗ ಶರಣ ಸಾರ್ವಭೌಮನೆ

ಜಯತು ಜಯ ಬಸವ ಲಿಂಗ ಶರಣ ಸಾರ್ವಭೌಮನೆ
ಜಯತು ಜಯ ಮಂಗಳಾಂಗ ಲಿಂಗದೇವ ಕಂದನೆ || ಪ ||

ಕರ್ತ ಕಳುಹೆ ಧರೆಗೆ ಬಂದು ಮರ್ತ್ಯರನ್ನು ಪೊರೆದ ಗುರು
ಕರ್ತನಾಗಿ ಲಿಂಗಾಯತ ಧರ್ಮ ಕೊಟ್ಟ ಕಲ್ಪತರು
ಬಾಗೇವಾಡಿಯಲ್ಲಿ ಜನಿಸಿ ಸಂಗಮದೊಳು ಅಭ್ಯಸಿಸಿ
ಕಲ್ಯಾಣ ಪ್ರಣತೆಯಲ್ಲಿ ಬೆಳಗಿ ವಿಶ್ವಜ್ಯೋತಿಯಾದೆ

ದೇವನೊಬ್ಬ ಸೃಷ್ಟಿಕರ್ತ ಪರಮೋನ್ನತ ಎಂದೆಯೈ
ಕಾಕು ಪೋಕು ದೈವಂಗಳ ಪೂಜೆ ಖಂಡಿಸಿ ತೊರೆದೆಯೈ
ದೇವನವನ ಪೂಜಿಸಲು ಇಷ್ಟಲಿಂಗವಿತ್ತೆಯೈ
ಧರ್ಮಕರ್ತನಾಗಿ ಪ್ರೀತಿ ಎಲ್ಲರಿಗೂ ನೀಡ್ಡೆಯೈ

ಅನುಭವ ಮಂಟಪವ ಕಟ್ಟಿ ಎಲ್ಲರನ್ನು ಕರೆದೆಯೈ
ಅನುಭಾವವೇ ದೇವನನೊಲಿಪ ಸಾಧನವೆಂದು ನುಡಿದೆಯೈ
ಕಾಯಕವೇ ಕೈಲಾಸ ಸೂತ್ರವಿತ್ತ ದಿವ್ಯಯೋಗಿ
ದಾಸೋಹವೇ ದೇವಧಾಮ ಎಂದು ಸವೆದ ಮಹಾತ್ಯಾಗಿ

ಇವನು ಯಾರು ಎಂದು ಭೇದ ಗೈದವರನು ಜರಿದ ಪುರುಷ
ಇವ ನಮ್ಮವ ಎಂದು ಎಲ್ಲರ ಆದರಿಸಿದ ಗುರು ಪರುಷ
ಧರ್ಮದಾತ ಶರಣ ಪ್ರೀತ ಇಷ್ಟಲಿಂಗದಾತನೇ
ವಿಶ್ವಧರ್ಮ ನೀಡಿ ಮೆರೆದ ಸಚ್ಚಿದಾನಂದ ಕಂದನೆ

ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವೇಶ್ವರ ಪೂಜಾವ್ರತ ಅಧ್ಯಾಯ - ೪ ಲಿಂಗಾಯತ ಧರ್ಮದ ಲಾಂಛನಗಳು Next