Previous ಐಕ್ಯ ಸ್ಥಲ ಪಂಚಾಚಾರ, Panchachara Next

ಅಷ್ಟಾವರಣ

ಮೋಕ್ಷದ ಉಪಾಯಗಳು ೧. ಅಷ್ಟಾವರಣ

ಅನೇಕರಿಗೆ ತಾವು ಬಂಧನಕ್ಕೊಳಗಾಗಿರುವುದೇ ಗೊತ್ತಿಲ್ಲ; ಮತ್ತೆ ಕೆಲವರಿಗೆ ತಾವೇಕೆ ಬಂಧನಕ್ಕೊಳಗಾಗಿದ್ದೇವೆ ಎಂಬುದು ಗೊತ್ತಿಲ್ಲ. ಅಂಥ ಪ್ರಶ್ನೆ ಕೇಳುವ ಕೆಲವೇ ಕೆಲವರು ಬಂಧನದಿಂದ ಬಿಡಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಬಂಧನದಿಂದ ಬಿಡಿಸಿಕೊಳ್ಳಬೇಕು ಅಥವಾ ಮೋಕ್ಷ ಪಡೆಯಬೇಕು ಎಂಬ ಇಚ್ಛೆಗೆ ಮುಮುಕ್ಷುತ್ವ ಎಂದು ಹೆಸರು. ಮುಮುಕ್ಷುತ್ವ ಅನೇಕರಿಗೆ ಉಂಟಾದರೂ, ಕೆಲವರಲ್ಲಿ ಅದು ತೀವ್ರವಾಗಿರುವುದಿಲ್ಲ. ಮುಮುಕ್ಷುತ್ವ ಯಾರಲ್ಲಿ ತೀವ್ರವಾಗಿರುತ್ತದೆಯೋ ಅವರು ಮಾರ್ಗದರ್ಶನಕ್ಕಾಗಿ ಯೋಗ್ಯ ಗುರುವನ್ನು ಹುಡುಕುತ್ತಾರೆ. ಲಿಂಗಾಯತ ಗುರುವು ಮುಮುಕ್ಷುವಿಗೆ ಮೋಕ್ಷ ಮಾರ್ಗವನ್ನು ಬೋಧಿಸುವ ಮೊದಲು ಮೋಕ್ಷಾರ್ಥಿಯು ಆಚರಿಸಬೇಕಾದ ಕೆಲವು ಬಾಹ್ಯ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತಾನೆ. ಈ ಬಾಹ್ಯ ಆಚರಣೆಗಳು ಎಂಟು. ಅವೆಂದರೆ: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ, ಅಷ್ಟಾವರಣಗಳೆಂದು ಕರೆಸಿಕೊಳ್ಳುವ ಈ ಆಚರಣೆಗಳಿಂದಲೇ ಒಬ್ಬ ವ್ಯಕ್ತಿಯು ಲಿಂಗಾಯತನೆಂದು ಗುರುತಿಸಲ್ಪಡುವುದು.

ಪರಿವಿಡಿ (index)
*
Previous ಐಕ್ಯ ಸ್ಥಲ ಪಂಚಾಚಾರ, Panchachara Next