ನಮ್ಮ ಕರಸ್ಥಲದ ಇಷ್ಟಲಿಂಗವು ಚೈತನ್ಯಮಯವಾಗಿರಬೇಕು ಮತ್ತು ಪ್ರಾಣದ ಸ್ವರೂಪವಾಗಿರಬೇಕು. ಇಂತಹ ಚೈತನ್ಯವು
ಕರಸ್ಥಲದ ಇಷ್ಟಲಿಂಗದಲ್ಲಿರಬೇಕಾದರೆ ಇಷ್ಟಲಿಂಗವು ಹೇಗಿರಬೇಕು? ಇಷ್ಟಲಿಂಗದಲ್ಲಿ ವಿಶಿಷ್ಟ ಧಾತುಗಳನ್ನೇ
ಕೂಡಿರಬೇಕೆಂದು ಹೇಳಲಾಗಿದೆ. ಶ್ರೀ ಅಲ್ಲಮಪ್ರಭುಗಳ ಒಂದು ವಚನದಲ್ಲಿ
ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ,
ಬಯಸುವ ಬಯಕೆ ಕೈಸಾರಿದಂತೆ,
ಬಡವ ನಿಧಾನವನೆಡಹಿ ಕಂಡಂತೆ,
ನಾನರಸುತ್ತಲರಸುತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರಿವಿನ ಹರುಹ ಕಂಡೆ ನೋಡಾ.
ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ
ಅಖಂಡಜ್ಯೋತಿಯ ಕಂಡೆ ನೋಡಾ !
ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ
ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ -೨/೮೨೧
[#]
ಈ ವಚನದಲ್ಲಿ ಅಲ್ಲಮಪ್ರಭುಗಳು ಕರಸ್ಥಲದಲ್ಲಿರುವ ಲಿಂಗವೇ ಪರಮಗುರು ಎಂದು ಸೂಚಿಸಿದ್ದಾರೆ. ಕಾರಣ ಶರಣರು
ಇಂಥ ಲಿಂಗ (ಕಾಂತಿಲಿಂಗ) ತಯಾರಿಸಲು ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕಿ, ಅಂಜನಗಳು (ಆಕ್ಸೈಡ್ಸ್)
ತುಪ್ಪದ ಕಾಡಿಗೆ, ಗೇರು ಎಣ್ಣೆ ಇವುಗಳಿಂದ ಕಾಂತಿಯನ್ನು ತಯಾರಿಸಿ ಒಳಗೆ ಕಾಂತಶಿಲೆ ಅಂದರೆ ಸೂರ್ಯಕಾಂತ
ಶಿಲೆ, ಚಂದ್ರಕಾಂತ ಶಿಲೆ. ಈ ಕಾಂತಶಿಲೆಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಮೇಲೆ ಕಾಂತಿಯನ್ನು
ಕೂಡ್ರಿಸಬೇಕು. ಹೀಗೆ ಒಳಗಿನದು ಕಾಂತ, ಮೇಲಿನದು ಕಾಂತಿಯಾಗಿರುತ್ತದೆ.
"ಮೇಲಿನ ಶಿಲೆಗಳಲ್ಲಿ ಚಂದ್ರಕಾಂತ (ಸಿಲಿಕಾನ್) ಶಿಲೆಯೇ ಅತ್ಯುತ್ತಮವಾಗಿರುತ್ತದೆ."
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ?
ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ?
ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು.
ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು.
ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ,
ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ. /೧೭೫೪
[#]
ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ,
ಗೋವುಗಳಲ್ಲಿ ಗೋರಂಜನ ರಂಜಿಸುವಂತೆ,
ಶಿಲೆಕಾಷ್ಠಂಗಳಲ್ಲಿ ಅನಲ ಅಡಗಿಪ್ಪಂತೆ,
ಸತ್ಯರ ಹೃದಯದಲ್ಲಿ
ವಾಕ್ತಿಕದ ಉದಕದಂತೆ ಭಾವವಿಲ್ಲದೆ ಅಡಗಿದೆಯಲ್ಲಾ
ಅಮರೇಶ್ವರಲಿಂಗವೆ. /೧೧೭೬
[#]
ಚಂದ್ರಕಾಂತದ ಶಿಲೆಯಲ್ಲಿ ಬಿಂದುವಿದ್ದಡೆ
ಹಿಂಡಿ ಹಿಳಿದಡೆ ಬಂದುದುಂಟೆ ಆ ಬಿಂದು ?
ವರುಣ ಶಿಲೆಯಲ್ಲಿ ಉರುಹಿ ನೋಡಲಿಕ್ಕೆ
ಉರಿದುದುಂಟೆ ಅನಲ ?
ಅವು ತಮ್ಮ ಒಲವರದ ಸಾಮ್ಯಕ್ಕಲ್ಲದೆ ಫಲಿಸುವುದಿಲ್ಲ.
ಇಂತೀ ತೆರದಂತೆ ಕ್ರೀ ಜ್ಞಾನ ಎಲ್ಲವ ಬಲ್ಲೆನೆಂದು
ಅಡ್ಡವಾಯ್ದು ಅಲ್ಲಲ್ಲಿ ನುಡಿದಡೆ
ನಿಜವಸ್ತು ಸಲ್ಲೀಲೆಯಲ್ಲಿಪ್ಪನೆ ?
ಶ್ರದ್ಧೆ ಸನ್ಮಾರ್ಗಿಗಳಲ್ಲಿಯಲ್ಲದೆ ಗೆಲ್ಲಗೂಳಿಗಳಲ್ಲಿಯಿಲ್ಲ.
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವು ಅವರಲ್ಲಿ ಇಲ್ಲವಾಗಿ /೨೭೧
[#]
ನಾವು ಲಿಂಗದಲ್ಲಿ ಚಂದ್ರಕಾಂತ ಶಿಲೆಯನ್ನೇ ಉಪಯೋಗಿಸುತ್ತೇವೆ. ಈ ಚಂದ್ರಕಾಂತ ಶಿಲೆಯನ್ನು ನಿಸ್ವತ್ವಗೊಳಿಸಿದಾಗ
ಅಂದರೆ ಸಾಧನೆಯನ್ನು ಮಾಡದೇ ಇದ್ದಾಗ ಅಂದರೆ ಹೊರಗಿನ ಚೈತನ್ಯವನ್ನು ಅಥವಾ ನಮ್ಮ ಚೈತನ್ಯವನ್ನು ಕೊಡದೇ
ಇದ್ದಾಗ ಅದು ಕೆಲಸ ಹೀನವಾಗುತ್ತದೆ. ಉದಾ: ಮಲ್ಲಿಗೆ ಹೂವಿನ ಮೊಗ್ಗನ್ನು ತಂದು ಅದನ್ನು ಯಾವುದೋ ಒಂದು
ವಸ್ತುವಿನ ಅಥವಾ ಅರಿವೆಯಲ್ಲಿಯೋ ಮುಚ್ಚಿಟ್ಟಾಗ ಅದರಲ್ಲಿರುವ ಸುವಾಸನೆ ಹೊರಸೂಸುವುದಿಲ್ಲ. ಯಾವಾಗ
ಋತುಕಾಲದಲ್ಲಿ ಮೊಗ್ಗು ಅರಳಿ ಹೂವಾದಾಗ ಹೇಗೆ ಅದರ ಸುಗಂಧವು ಹೊರಸೂಸುವುದೋ ಹಾಗೇ ನಮ್ಮ ಕರಸ್ಥಲದ ಲಿಂಗದಲ್ಲಿ
ಸಾಮರಸ್ಯವನ್ನು ಹೊಂದಿದಾಗ ಒಳಗಿರುವ ಚಂದ್ರಕಾಂತ ಶಿಲೆಯ ಪರಿಣಾಮವು ನಮಗಾಗುತ್ತದೆ."
ನಿರಾಕಾರದ ಮೂರ್ತಿಯ ಆಕಾರಕ್ಕೆ ತಂದೆಯಲ್ಲಾ ಬಸವಾ!
ಆಕಾರದ ಮೂರ್ತಿಯ ಹೃದಯಕುಂಜದಲ್ಲಿ ವಾಸಗೊಂಡು
ತೋರಿದೆಯಲ್ಲಾ ಬಸವಾ!
ಈ ಆಕಾರಕ್ಕೆ ತಂದು, ಭಕ್ತಿಯನನುಗೈದು,
ದಿಗುದಶದಲ್ಲಿ ಬೆಳೆದೆಯಲ್ಲಾ ಬಸವಾ?
ಇನ್ನಾಕಾರವ ನಿರಾಕಾರದಲ್ಲಿ ಅನುಗೊಳಿಸಬೇಕೆಂದು,
ಕಪಿಲಸಿದ್ಧಮಲ್ಲಿಕಾರ್ಜುನನ ಹೃದಯದಲ್ಲಿ
ಮರೆಯಾದೆಯಲ್ಲಾ ಬಸವಾ! /೧೮೩೯
[#]
ಕುಂಜ = ಲತಾಮಂಟಪ, (Grove Of Trees); ದಿಗುದಶ = ಎಲ್ಲಾ ದಿಕ್ಕುಗಳಲ್ಲಿ
1) ಕಾಂತ ಶಿಲೆಗಳು: ರತ್ನಗಳಲ್ಲಿ ಮುಖ್ಯವಾಗಿ ಒಂಬತ್ತು ರತ್ನಗಳು ಮತ್ತು ಎಂಬತ್ತುನಾಲ್ಕು ಉಪರತ್ನಗಳಿವೆ.
ಈ ಎಂಬತ್ತುನಾಲ್ಕು ಉಪರತ್ನಗಳಲ್ಲಿ ಚಂದ್ರಕಾಂತಶಿಲೆ ಒಂದಾಗಿದೆ.
ಪ್ರತಿಯೊಂದು ರತ್ನಶಿಲೆಯೊಳಗೂ ವಿವಿಧ ಪ್ರಮಾಣದ ಅಯಸ್ಕಾಂತೀಯ ಶಕ್ತಿ ಅಡಕವಾಗಿದೆ. ಪ್ರತಿ ರತ್ನವು
ನಮ್ಮ ದೇಹದ ಮೇಲೆ ಗಮನೀಯ ಪರಿಣಾಮ ಬೀರಬಲ್ಲಂತಹ ಕಿರಣವಾಹಕವಾಗಿದೆ. ಅವುಗಳಲ್ಲಿ ಹೆಚ್ಚಿನವು ಚಿಕಿತ್ಸಾಕಾರಕ
ಗುಣಗಳಿಂದ ಅಮೂಲ್ಯವಾಗಿವೆ. ಆದ್ದರಿಂದ ಚಂದ್ರಕಾಂತ ಶಿಲೆಯನ್ನು (
Moonstone,
Moonstone) ಉಪಯೋಗಿಸುತ್ತಾರೆ.
ಶ್ರೀ ಸಿದ್ಧರಾಮೇಶ್ವರರು ಒಂದು ವಚನದಲ್ಲಿ
ಸಂತೆಯೊಳಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ?
ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ
ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ?
ಅಂತಕಾಂತಕ ಶ್ರೀಗುರುಮೂರ್ತಿ ತನ್ನರುಹಿನ ರೂಪವಿಂತೆಂದು
ತೋರಿದ ಕಲ್ಲೇ ನಿಜಲಿಂಗ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ. -3/1545
[#]
ಇಲ್ಲಿ ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ಕಲ್ಲಿನಲ್ಲಿರುವಂತಹ ಪರಮಾತ್ಮ ಕಳೆಯೇ (ಚೈತನ್ಯ)ಲಿಂಗವಾಗಿದೆ.
ಇದನ್ನೆ ತತ್ವಜ್ಞಾನಿಗಳಾದ 'ಪ್ಲೇಟೋ' "ಈ ಕಾಂತಶಿಲೆಗಳಲ್ಲಿ ಪರಮಾತ್ಮನ ಕಳೆ ಇರುತ್ತದೆ."
ಎಂದು ಮತ್ತೊಬ್ಬ ತತ್ವಜ್ಞಾನಿ 'ಅರಿಸ್ಟಾಟಲ್' "ಕಾಂತಶಿಲೆಯಲ್ಲಿ ಆತ್ಮನಿದ್ದಾನೆ" ಎಂದೂ
ಹೇಳಿದ್ದಾರೆ. ಕಾರಣ ಇಂಥ ಶಿಲೆಯನ್ನೇ ಲಿಂಗಕ್ಕೆ ಉಪಯೋಗಿಸುವುದು ಕಡ್ಡಾಯವಾಗಿದೆ.
2) ಅರಗು (
Shellac
ಒಂದು ಗಿಡದ ಅಂಟು ): ಇದನ್ನು ರಕ್ತಸ್ರಾವದ ತೊಂದರೆಯಲ್ಲಿ ಮತ್ತು ರಕ್ತ ಪಿತ್ತದಲ್ಲಿ ಉಪಯೋಗಿಸುತ್ತಾರೆ.
3) ರಾಳ (Sol ಒಂದು ಗಿಡದ ಅಂಟು): ಇದನ್ನು ಮೂಲವ್ಯಾಧಿಯಲ್ಲಿ ಮತ್ತು ಲೈಂಗಿಕ ರೋಗಗಳ ಶಮನದಲ್ಲಿ ಉಪಯೋಗಿಸುತ್ತಾರೆ.
4) ಇಂಗಳೀಕ(
Cinnabar Hgs): ಇದು ಪಾದರಸಯುಕ್ತವಾಗಿದೆ. ಇದು ಎಲ್ಲ ರೋಗಗಳನ್ನು
ವಾಸಿಮಾಡುತ್ತದೆ.
5) ಶಿಲಾರಸ (ಒಂದು ಗಿಡದ ಅಂಟು
Liquid storax,
Liquid storax): ಇದು ಕಜ್ಜಿ ತುರಿಕೆ,
ಹುಣ್ಣು ಮತ್ತು ಇತರ ಚರ್ಮರೋಗಗಳನ್ನು ವಾಸಿಮಾಡುತ್ತದೆ.
6) ರೂಮಾಮಸ್ತಿಕ (ಒಂದು ಗಿಡದ ಅಂಟು ): ಇದನ್ನು ಪಿತ್ತ ಕಫಗಳ ನಿವಾರಣೆಯಲ್ಲಿ ಉಪಯೋಗಿಸಲಾಗುತ್ತದೆ.
7) ಅಂಜನಗಳು (Collyrium):
ಆಯುರ್ವೇದದ ಪ್ರಕಾರ ಐದು ಅಂಜನಗಳಿವೆ
1) ಸಾವಿರಾಂಜನ (Sb2 S3-Stibnite)
2) ಸ್ರೋತೊ ಅಂಜನ (Sb2 S3-Antimony Sulphide)
3) ನೀಲಾಂಜನ (Pbs Lead Sulphide)
4) ಪುಷ್ಪಾಂಜನ (ZnO-Zinc Oxide
5) ರಸಾಂಜನ (Yellow Oxide of Mercury) ಇದನ್ನು ಪಾದರಸದ ಹಳದಿ ಆಕ್ಸೈಡ್ ಅಲ್ಲದೆ ದಾರುಹರಿದ್ರಾ
ಎಂಬ ಗಿಡಮೂಲಿಕೆಯಿಂದಲೂ ತಯಾರಿಸುತ್ತಾರೆ.
ಈ ಐದು ಅಂಜನಗಳು ಕಣ್ಣಿಗೆ ಕಾಂತಿಯನ್ನು ಅಂದರೆ ಚೈತನ್ಯವನ್ನು ನೀಡಿ, ತಂಪನ್ನು ಕೊಡುತ್ತವೆ. ಅಲ್ಲದೆ
ಬೇರೆ ಬೇರೆ ಭಯಾನಕ ರೋಗಗಳಿಗೆ ಪರಿಣಾಮಕಾರಿ ಎನಿಸಿವೆ.
8) ಗೇರು ಎಣ್ಣೆ (ಭಲ್ಲಾತಕ ತೈಲ-
Marking NutOil)
[##]
: ಇದು ಅಕಾಲ ವಾರ್ಧಕ್ಯ ಅಂದರೆ ಮುಪ್ಪು ಬಾರದಂತೆ ನೂರು ವರ್ಷಕಾಲ ಆಯುಷ್ಯ ವೃದ್ಧಿ ಮಾಡುತ್ತದೆ. ಇದನ್ನು
ಅನೇಕ ರೋಗಗಳ ನಿವಾರಕವಾಗಿಯೂ ಉಪಯೋಗಿಸುತ್ತಾರೆ.
9) ತುಪ್ಪದ ಕಾಡಿಗೆ (Lamp Black): ಇದರಲ್ಲಿ ಶಕ್ತಿ ಕಣಗಳು ಹಚ್ಚಾಗಿರುತ್ತವೆ.
ಈ ಮೇಲೆ ಸೂಚಿಸಿದ ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕ, ಅಂಜನಗಳು, ಗೇರು ಎಣ್ಣೆ ಹಾಗೂ ತುಪ್ಪದ
ಕಾಡಿಗೆ ಇವೆಲ್ಲವುಗಳು ಕಾರ್ಬೋನ್‍ಯುಕ್ತವಾಗಿವೆ ಮತ್ತು ಕ್ಷಾರೀಯ ವಸ್ತುಗಳಾಗಿವೆ. ಕಾರ್ಬನ್
ಕಣದಲ್ಲಿ ಹೆಚ್ಚು ಶಕ್ತಿಯನ್ನು ಸಂಗ್ರಹ ಮಾಡಿಕೊಳ್ಳುವ ಸಾಮಥ್ರ್ಯವಿದೆ. ಈ ಮೇಲಿನ ವಸ್ತುಗಳೆಲ್ಲ ಚೈತನ್ಯಮಯವಾಗಿವೆ.