ಲಿಂಗಾಯತ ತತ್ವ-ಸಿದ್ಧಾಂತಗಳು | ಗುರು |
ಓಂ ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರದ ಅರ್ಥ |
ಓಂ ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರ ನಮಗೆ ಲಿಂಗಾಯತ ಧರ್ಮವನ್ನು ಕೊಟ್ಟ ಗುರು ಬಸವಣ್ಣನವರನ್ನು, ಲಿಂಗಾಯ ಎಂಬುದು ಸೃಷ್ಟಿಕರ್ತನ ಕುರುಹಾದ ಲಿಂಗದೇವನಿಗೇ ಸಂಭಂದಿಸಿದ್ದುದಾಗಿದೆ.
ಎಲ್ಲಾ ಲಿಂಗಾಯತ ಧರ್ಮೀಯರು ಓಂ ಶ್ರೀ ಗುರುಬಸವ ಲಿಂಗಾಯ ನಮಃ
ಎಂಬ ಪವಿತ್ರ ಮಂತ್ರವನ್ನ ಬಳಸುತ್ತೇವೆ ಆದರೆ ಆ ಮಂತ್ರದ ಅರ್ಥ ಹಾಗೆ ಉದ್ದೇಶ ಬಹಳಷ್ಟು ಮಂದಿಗೆ ಗೊತ್ತಿಲ್ಲ,
ಇದರ ಅರ್ಥವನ್ನ ವಿವರಿಸೋ ಪ್ರಯತ್ನ ಇದಾಗಿದೆ.
ಓಂ ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರವನ್ನ ದ್ವಾದಶ ಮಂತ್ರ ವೆಂದು ಕರೆಯಲಾಗುತ್ತೆ. ಲಿಂಗಾಯತ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮಂತ್ರ ಇದಾಗಿದೆ , ಇದರ ಅರ್ಥ ವೆಂದರೆ ಓಂಕಾರ ಸ್ವರೂಪಿಯಾದ, ಸೃಷ್ಟಿ, ಸ್ಥಿತಿ, ಲಯಗಳ ಕಾರಣ ಕರ್ತೃ ವಾದ ಪ್ರಾಣವ ಸ್ವರೂಪಿಯಾದ ಪರಮತ್ಮನಾದ ಲಿಂಗದೇವನಿಗೇ ನಮಿಸುತ್ತೇನೆ ಎನ್ನುವಂತಾದ್ದು, ಅರ್ದ ಭಾಗದಲ್ಲಿ ವ್ಯಕ್ತವಾದರೆ. ಉಳಿದಾರ್ದ ಭಾಗದಲ್ಲಿ ಓಂಕಾರ ಪ್ರತಿನಿಧಿಯಾಗಿ ಬಂದಿರುವ ಬಸವಣ್ಣನಿಗೇ ನಮಿಸುತ್ತೇನೆ ಎಂಬುದಾಗಿದೆ .
ಓಂ ಈ ಸ್ವರ ಎರಡು ಮಂತ್ರಗಳಿಗೆ ಸಮನಾಗಿದೆ., ಶ್ರೀ ಗುರು ಬಸವ ಎಂಬುದು ಬಸವಣ್ಣ ನವರಿಗೆ ಸಂಭಂದ ಪಟ್ಟ ಭಾಗಾವಾದರೆ, ಲಿಂಗಾಯ ಎಂಬುದು ಸೃಷ್ಟಿಕರ್ತನ ಕುರುಹಾದ ಲಿಂಗದೇವನಿಗೇ ಸಂಭಂದಿಸಿದ್ದುದಾಗಿದೆ. ಗುರು ಬಸವಣ್ಣವರು ಈ ಧರ್ಮಕ್ಕೆ ತಾಯಿ ಇದ್ದ ಹಾಗೆ, ಸುರ್ಷ್ಟಿಕರ್ತ ಪರಮಾತ್ಮನು ತಂದೆ ಇದ್ದ ಹಾಗೆ ಅದ್ದರಿದ ಈ ಎರಡನ್ನು ಸೇರಿಸಿ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಎಂಬ ಘನ ಮಂತ್ರವನ್ನ ರಚಿಸಲಾಗಿದೆ.
ಚನ್ನ ಬಸವಣ್ಣವರು ಈ ವಿಷಯದ ಕುರಿತಾಗಿ ಬಹಳ ಮಾರ್ಮಿಕ ವಾಗಿ ತಮ್ಮ ವಚನದಲ್ಲಿ ಹೇಳಿದ್ದರೆ.
ಅಯ್ಯ ಅಯ್ಯ ಎಂದರೆ ಅಯ್ಯ ಓ ಎನ್ನದೆ ಮಾಳ್ಪನೆ
ಅವ್ವೆ ಅವ್ವೆ ಎಂದರೆ ಅವ್ವೆ ಓ ಎನ್ನದೆ ಮಾಳ್ಪಳೆ
ನಾನು ಬಸವಲಿಂಗ ಬಸವಲಿಂಗ ಎಂದು ಬಯಲಾದೆನಯ್ಯ ಕೂಡಲ ಚೆನ್ನಸಂಗಮದೇವ.
ನಮ್ಮ ಶರಣರು ಪರಮಾತ್ಮನನ್ನು ವಿಶೇಷವಾಗಿ ಬಸವ ಲಿಂಗ ಎಂದೇ ಕರೆದಿದ್ದಾರೆ, ಅದ್ದರಿದ ಓಂಕಾರದ ಸ್ವಾರೂಪನೆ ಆಗಿರುವ ಲಿಂಗದೇವನೇ ನಿಮಗೆ ನಮಿಸುತ್ತೇನೆ, ಓಂಕಾರದ ಪ್ರತಿನಿಧಿಯಾದ ಬಸವಣ್ಣ ನಿಮಗೆ ನಮಿಸುತ್ತೇನೆ ಎಂಬುದು ಇದರ ಮೂಲ ಅರ್ಥ ವಾಗಿದೆ.
ಶರಣ ಬಂಧುಗಳೇ ನಿಮ್ಮಲಿ ಒಂದು ಮನವಿ, ಮಧುವೆ, ಗೃಹ ಪ್ರವೇಶ, ಸಭೆ ಸಮಾರಂಭಗಳ ಆಮಂತ್ರಣ ಪತ್ರಿಯಕೆಯಲ್ಲಿ ಓಂ ಶ್ರೀ ಗುರುಬಸವ ಲಿಂಗಾಯ ನಮಃ ಎಂದು ಮುದ್ರಿಸಿ, ಸಮಾನ್ಯವವಾಗಿ ಮನೆದೇವರ ಅಥವಾ ಬೇರೆ ದೇವರ ನಾಮದ ಜೊತೆ ಪ್ರಸನ್ನ ಎಂದು ಸೇರಿಸಿ ಮಲ್ಲೇಶ್ವರ ಪ್ರಸನ್ನ ಅಂತಲ್ಲೋ . ಗಂಗಾಧರೇಶ್ವರ ಪ್ರಸನ್ನ ಅಂತಲೋ ಹಾಕುವ ಮುದ್ರಿಸುವ ಬದಲು ಈ ಮಂತ್ರವ ಮುದ್ರಿಸಿದರೆ ಬಹಳ ಅರ್ಥಪೂರ್ಣ ಹಾಗೂ ಸಮಂಜಸವಾಗಿರುತ್ತೆದೆ.
ಯಾವುದೇ ಅತ್ಯುತ್ತಮವಾದ, ಅಮೂಲ್ಯವಾದ, ಮೌಕ್ತಿಕವಾದ, ಗ್ರಂಥಗಳನ್ನು ಓದುವಾಗ, ಕೇಳುವಾಗ, ಹೇಳುವಾಗ ಮೊದಲು ಪ್ರಥಮದಲ್ಲಿ ಗುರುಸ್ಮರಣೆ ಮಾಡುವುದು ಮುಖ್ಯವಾದ ಕಾರಣವಾಗಿದೆ. ಅದಕ್ಕಾಗಿ ಗ್ರಂಥದ ಪ್ರಾರಂಭದಲ್ಲಿ ಪ್ರಥಮ ಆಚಾರ್ಯನಾದ ಗುರುಬಸವೇಶ್ವರರೆಂಬ ಶ್ರೀಗುರು, ತತ್ವಕ್ಕೆ ಷಟಷ್ಥಲ ಚಕ್ರವರ್ತಿ ಅವಿರಳ ಜ್ಞಾನಿ ಚನ್ನಬಸವಣ್ಣನವರು ಶರಣೆಂದು ಮುಂದುವರಿಯುತ್ತಿದ್ದಾರೆ. ಹಾಗೆ ಮಾಡುವುದು ಆದ್ಯ ಕರ್ತವ್ಯವಾಗಿದೆ.
ಅದು ಹೇಗೆಂದರೆ?
"ಓಂ" ಎಂದು ಏಕೆ ಹೇಳಬೇಕು? ಎಂದರೆ, ಗುರು ಬಸವಣ್ಣನವರ ಸರ್ವಾಂಗವೆಲ್ಲಾ ಲಿಂಗ ಶರೀರವಾದ ಕಾರಣ ಮಂತ್ರಮಯ ಶರೀರವಾದ ಕಾರಣ ಓಂ ಕಾರವನ್ನು ಮೊದಲು ನೆನಹು ಮಾಡುವುದು ಮುಖ್ಯವಾಗಿದೆ.
"ಶ್ರೀ" ಅಂದರೆ ಸದ್ಗುಣ, ಐಶ್ವರ್ಯ ಸಂಪತ್ಕರವುಳ್ಳವನುಳ್ಳಂಥವನು ಎಂಬುದಾಗಿದೆ. ಷಡ್ಗುಣಗಳಾದ ಐಶ್ವರ್ಯ, ಜ್ಞಾನ, ಯಶಸ್ಸು, ಸಂಪತ್ತು, ವೈರಾಗ್ಯ, ಧರ್ಮಗಳಾಗಿವೆ. ಸಂಪತ್ಕರ ಎಂದರೆ ಗುರು ಬಸವಣ್ಣನವರು ಪಂಚ ಪರುಷವುಳ್ಳವಾರಾಗಿದ್ದರು. ಪಂಚಪರುಷಗಳೆಂದರೆ ಹಸ್ತ ಪರುಷ, ಮನ ಪರುಷ, ಭಾವ ಪರುಷ, ದೃಷ್ಟಿ ಪರುಷ, ವಾಕ್ ಪರುಷ ಎಂಬ ಸಂಪತ್ಕರ ಉಳ್ಳವರಾಗಿದ್ದರು.
"ಗುರು"
(ಸಂಸ್ಕೃತ : गुरु,) ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ಬಸವಣ್ಣನವರು ಅಂತಹ ಒಬ್ಬ ಅತ್ಯುನ್ನತ ಜ್ಞಾನವನ್ನು ಹೊಂದಿದವರು. ಹಾಗೂ ಲಿಂಗಾಯತ ಧರ್ಮದ 'ಧರ್ಮ ಗುರು'.
"ಬಸವ" ಎಂದರೆ ಬಕಾರ ಭವಹರ ಗುರು; ಸಕಾರವೇ ಸಕಲ ಚೈತನ್ಯಾತ್ಮಕವಾಗಿರುವ ಲಿಂಗವು. ವಕಾರವೇ ವಚಿಸುವುದಕ್ಕೆ ಕಾರಣವಾದ ಮಹಾನುಭಾವ ಮೂರ್ತಿಯಾದ ಜಂಗಮವು, ಇಂತೀ ಗುರು-ಲಿಂಗ-ಜಂಗಮ ಸ್ವರೂಪವಾಗಿರುವುದೇ "ಬಸವ" ಎಂಬ ಶಬ್ದಕ್ಕೆ ಅರ್ಥವಾಗಿದೆ.
"ಲಿಂಗಾಯ"
ಓಂಕಾರ ಸ್ವರೂಪಿಯಾದ, ಸೃಷ್ಟಿ, ಸ್ಥಿತಿ, ಲಯಗಳ ಕಾರಣ ಕರ್ತೃ ವಾದ ಪ್ರಾಣವ ಸ್ವರೂಪಿಯಾದ ಪರಮತ್ಮನಾದ
ಲಿಂಗದೇವ
"ನಮ:"
ಎಂದರೆ ಶರಣಾಗಿದ್ದೇನೆ ಎಂದುದಾಗಿದೆ. ಹಾಗಾಗಿ "ಓಂ ಶ್ರೀ ಗುರು ಬಸವ ಲಿಂಗಾಯನಮ:" ಎಂಬ ಮಂತ್ರ ಪರಿಪೂರ್ಣವಾಗಿದೆ. ನಮ್ಮ ಎಲ್ಲ ಕಾರ್ಯಗಳಿಗೂ ಮೊದಲು ಈ ನೆನಹು ಮುಖ್ಯವಾಗಿದೆ.
ಲಿಂಗಾಯತ ತತ್ವ-ಸಿದ್ಧಾಂತಗಳು | ಗುರು |