*
ಅಲ್ಲಮ ಪ್ರಭುದೇವರ ಜೋಗುಳ ಪದ
ಜೋ ಜೋ ಜಗ ಜಂಗಮ ಯೋಗಿ
ಜೋ ಜೋ ನಿರಂಜನ ವಿರಾಗಿ
ಜೋ ಜೋ ಯೋಮಕಾಯ ಸಿದ್ಧನಿಗೆ
ಹಿಂಗೆ ಜೋ ಎಂದು ತೂಗಿರಿ ಅಲ್ಲಮ ಪ್ರಭುವಿಗೆ..... ಜೋ ಜೋ (೧)
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ
ನಿರಹಂಕಾರ ಸುಜ್ಞಾನಿ ಹೊಟ್ಟೆಯಲ್ಲಿ
ಯುಗಾದಿ ಪಾಡ್ಯಾದ ಶುಭ ದಿನದಲ್ಲಿ
ಯುಗ ಪುರುಷ ಅಲ್ಲಮ ಹುಟ್ಟಿ ಬಂದರಿಲ್ಲಿ ಜೋ ಜೋ (೨)
ಅನಿಮಿಷ ಗುರುವಿನ ದೀಕ್ಷೆಯ ಪಡೆದ
ಮಾಯಾದೇವಿಯ ಮೋಹವ ತೊಡೆದ
ಮುಕ್ತಾಯಕ್ಕನ ದು:ಖವು ತಡೆದ
ಹಿಂಗಾ ಸಿದ್ಧರಾಮನಿಗೆ ಅರುವು ತೋರಿದ ಜೋ ಜೋ (೩)
ಮಹಾಗುರು ಬಸವೇಶನ ಮಹಿಮೆ ಕೇಳಿದ
ಬಸವಕಲ್ಯಾಣಕ್ಕೆ ತುರ್ತಾಗಿ ಬಂದ
ಅನುಭವ ಮಂಟಪದ ಅಧ್ಯಕ್ಷರಾ(ನಾ)ದ
ಹಿಂಗಾ ಶರಣರ ಬಳಗದೊಳು ಬೆಳಗು ತೋರಿದ ಜೋ ಜೋ (೪)
ಉಡುತಡಿ ಅಕ್ಕಮಹಾದೇವಿ ಬಂದಾಕ್ಷಣ
ಅನುಭವ ಮಂಟಪದಲ್ಲಿ ಪರಿಕ್ಷೆ ಮಾಡಿದನಾ
ಅಕ್ಕನ ವೈರಾಗ್ಯತನವ ಮೆಚ್ಚಿದನಾ
ಹಿಂಗಾ ಅಕ್ಕಮಹಾದೇವಿಗಿ ವಂದಿಸಿದನಾ ಜೋ ಜೋ (೫)
ಧರ್ಮಗುರು ಬಸವೇಶವೆಂದು ಸಾರಿದನಾ
ಜಗ ಜಂಗಮಯೋಗಿ ಕದಳಿ ಸೇರದನಾ
ಗುಹೇಶ್ವರ ಲಿಂಗದಲ್ಲಿ ಕೂಡಿದನಾ
ಹಿಂಗೇ ವೀರಶೇಟ್ಟಿ ಇಮ್ಡಾಪೂರ ಜೋಗುಳ ಪಾಡಿದನಾ ಜೋ ಜೋ (೬)
-ವೀರಶೆಟ್ಟಿ ಇಮಡಾಪೂರ
*