Previous ಶರಣರಿಗೆ ಶರಣು ಭುವಿಯ ಬೆಳಕು ಗುರು ಬಸವ Next

ಬಸವೇಶನ ಧ್ಯಾನವನ್ನು ಮಾಡಬೇಕವ್ವ

*

ಬಸವೇಶನ ಧ್ಯಾನವನ್ನು ಮಾಡಬೇಕವ್ವ
ಹುಟ್ಟು ಸಾವು ಎಂಬ ದು:ಖ ನೀಗಬೇಕವ್ವ |ಪ|

ಕುಟ್ಟುವಾಗ ಬೀಸುವಾಗ ರೊಟ್ಟಿಯನ್ನು ಮಾಡುವಾಗ
ನಿಷ್ಠೆಯಿಂದ ಬಸವಧ್ಯಾನ ಮಾಡಬೇಕು ನೋಡವ್ವ |1|

ಅಡಿಗೆಯನ್ನು ಮಾಡುವಾಗ ಮಡಿಕೆಯನ್ನು ತೊಳೆಯುವಾಗ
ಬಸವಧ್ಯಾನ ಮಾಡಿ ಮುಕ್ತಿ ಪಡೆಯಾ ಬೇಕವ್ವ |2|

ಮಲುಗುವಾಗ ಏಳುವಾಗ ಕಾಲಪಾಶ ಹಾಕಿದಾಗ
ಬಸವೇಶನ ಧ್ಯಾನವನ್ನು ಮಾಡಬೇಕು ನೋಡವ್ವ |3|

ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ
ಧನವನ್ನು ಜಂಗಮಕ್ಕೆ ಅರ್ಪಿಸಬೇಕು
ಬಸವೇಶನ ಧ್ಯಾನವನ್ನು ಮಾಡಬೇಕವ್ವ |4|

ಯಾರಿಗೆ ಯಾರಿಲ್ಲ, ದಾರಿಗೆ ಜೊತೆಯಲ್ಲಿ
ಗುರು ಬಸವೇಶನೇ ಗತಿಯೆಂದು ತಿಳಿಯವ್ವ |5|

ಪರಿವಿಡಿ (index)
Previous ಶರಣರಿಗೆ ಶರಣು ಭುವಿಯ ಬೆಳಕು ಗುರು ಬಸವ Next