ಭಾರತ ಮಾತೆ ಜನ್ಮದಾತೆ | ಕನ್ನಡ ನೆಲದಲಿ ಹುಟ್ಟಿಹ ನಾನು |
ಭಾರತ ನೆಲದಲಿ ಹುಟ್ಟಿದ ನಾನು |
ಭಾರತ ನೆಲದಲಿ ಹುಟ್ಟಿಹ ನಾನು
ಭಾರತ ಮಾತೆಗೆ ವಂದಿಪೆನು
ಗುರುವನು ಸರಿಸಿ ದೇವನ ನಂಬಿ
ಪೈಜೆಯ ತೊಟ್ಟು ದುಡಿಯುವೆನು || ಪ ||
ಭಕ್ತಿಯ ಜಲದಲಿ ಮೈ ತೊಳೆಯುವೆನು
ಜ್ಞಾನದ ವಸ್ತವ ಧರಿಸುವೆನು
ದೀನ ದಲಿತರ ಸೇವೆಯ ಗೈಯ್ಯಲು
ಗಂಧದೋಲ್ ಬಾಳನು ಸವೆಸುವೆನು || 1 ||
ಧರ್ಮದ ಕವಚವ ಧರಿಸುವೆನು
ಸತ್ಯದ ಖಡ್ಗವ ಹಿಡಿಯುವೆನು
ದೇಶ ವಿದೇಶದಿ ಭಾರತ ಕೀರ್ತಿ
ಹಸರಿಸುವೋಲ್ ನಾ ದುಡಿಯುವೆನು || 2 ||
ನಾಡಿನ ಜನರು ಎಲ್ಲ ನನ್ನವರು
ಎನ್ನುವ ಭಾವವ ತಾಳುವೆನು
ಸುಂದರ ಬಂಧುರ ಭಾರತ ಮಂದಿರ
ಕಟ್ಟಲು ನಾನು ಬಾಳುವೆನು ! || 3 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಭಾರತ ಮಾತೆ ಜನ್ಮದಾತೆ | ಕನ್ನಡ ನೆಲದಲಿ ಹುಟ್ಟಿಹ ನಾನು |