Previous ಜಯತು ಜಯತು ಬಸವಗುರೋ ಹೂವ ಸೂರ‍್ಯಾಡೋಣ ಸದ್ಗುರುವಿನ ಮೇಲೆ Next

ಜಯತು ಜಯತು ಮಹಾದೇವಿ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಜಯತು ಜಯತು

ಜಯತು ಜಯತು ಮಹಾದೇವಿ ಜಗನ್ಮಾತೆ ಪಾಹಿಮಾಂ
ಜಯತು ಜಯತು ಶಿವಭಾಮೆ ಜ್ಞಾನನಿಧಿ ರಕ್ಷಮಾಂ || ಪ ||

ಮನುಕುಲಕೆ ಮುಕುಟಮಣಿ ಆದೆ ನೀನು ತಾಯಿಯೆ
ಹೆಣ್ಣುಕುಲಕೆ ಮುಮ್ಮಾರ್ಗವ ದಿಟ್ಟತನದಿ ತೋರ್ದೆಯ
ಜ್ಯೋತಿಮಯಿ ನೀತಿವಿದೆ ಖ್ಯಾತಿಪೂರ್ಣ ಮೂರ್ತಿಯೆ
ಮಾತೃಭಾವಿ ಪ್ರೀತಿನಿಧಿ ಕವಿಕೋಗಿಲೆ ಜ್ಞಾನಿಯೆ || ೧ ||

ಉಡುತಡಿಯಲಿ ತೊರೆಯಾಗಿ ಉಗಮಗೊಂಡೆ ಮಾತೆಯೆ
ಎಡಬಿಡದೆ ಹರಿದೆಯಮ್ಮ ಬಸವ ಪಾದ ಸಂಗಮಕೆ
ಶರಣಸಂಗಿ ಮಂಗಳಾಂಗಿ ಹರಿದೆ ನೀನು ಕದಳಿಗೆ
ಬೆರೆದೆಯಲ್ಲಿ ಮುದದಿಂದ ಲಿಂಗದೇವ ಶರಧಿಯಲಿ || ೨ ||

ಉಟ್ಟಸೀರೆ ಸೀಳುತಲಿ ತೊಟ್ಟ ತೊಡಿಗೆ ಮುರಿಯುತಲಿ
ಬಿಟ್ಟೆ ನೀನು ಬಿಡುಮುಡಿಯ ಕೊಟ್ಟೆ ಮೃಡಗೆ ತನುಮನವ
ಕುಂಡಲಿಯ ಸರ್ಪನು ತುಂಡಮೇಲಕೆ ತೆಗೆಯ
ಮಂಡಲವು ಬೆಳಗಾಗಿ ಜ್ಯೋತಿಯಲಿ ಬಯಲಾದೆ || ೩ ||

ಹೆಣ್ಣು ಮಾಯೆ ಎಂಬುವರ ಶಿರವು ಕೆಳಗೆ ಬಾಗುವಂತೆ
ಚಿನ್ಮಯ ನಿಲುವಿನಿಂದ ಕುಲಕೆ ಕಲಶವಾದೆ
ಶರಣಧರ್ಮ ಮಣಿಯಾಗಿ ಮೆರೆಯುತಿಹ ಜ್ಞಾನಮಯಿ
ಭಕ್ತಿ ಶಕ್ತಿ ಸಂಗಮದಿ ಸಚ್ಚಿದಾನಂದಸತಿ. || ೪ ||

ಪರಿವಿಡಿ (index)
Previous ಜಯತು ಜಯತು ಬಸವಗುರೋ ಹೂವ ಸೂರ‍್ಯಾಡೋಣ ಸದ್ಗುರುವಿನ ಮೇಲೆ Next