*
ಬಸವ ಭಕ್ತರ ಪ್ರತಿಜ್ಞೆ
ಬಸವ ಭಕ್ತರು ನಾವು ಬಸವ ಭಕ್ತರು
ತತ್ತ್ವನಿಷ್ಠರು ನಾವು ತತ್ತ್ವನಿಷ್ಠರು || ಪ ||
“ಧರ್ಮಗುರು ಬಸವಣ್ಣ” ಎಂದು ಸಾರಿ ನುಡಿವೆವು
“ವಚನ ಶಾಸ್ತ್ರ ಸಂವಿಧಾನ” ಎಂದು ತಿಳಿದು ನಡೆವೆವು
“ಇಷ್ಟಲಿಂಗ ದೇವಕುರುಹು ಎಂದು ನಂಬಿ ಪೂಜಿಪೆವು
“ಸಂಗಮವು ಧರ್ಮಕ್ಷೇತ್ರ” ಎಂದು ತಿಳಿದು ಬರುವೆವು
“ಷಟ್‌ಕೋನ ಬಸವ ಧ್ವಜವ” ಹಿಗ್ಗಿನಿಂದ ಹಾರಿಪೆವು
“ಕಲ್ಯಾಣ ರಾಜ್ಯ” ಕಟ್ಟುವ ಧ್ಯೇಯವಿಟ್ಟು ದುಡಿವೆವು
“ಶರಣ ಮೇಳದಲ್ಲಿ ಕೂಡಿ ಹಾಡಿ ಪಾಡಿ ನಲಿವೆವು
"ಕಲ್ಯಾಣ ಪರ್ವಕೆ” ಬಂದು ಜನ್ಮಧನ್ಯಗೈವೆವು
“ಅಷ್ಟಾವರಣ ಅಂಗ” ವೆಂದು ನಾವು ನಿತ್ಯ ಧರಿಪೆವು
“ಷಡಾಚಾರ ಪ್ರಾಣ” ವೆಂದು ಅನುಷ್ಠಾನ ಗೈವೆವು
“ಷಟಸ್ಥಲ” ಶಿವಪಥದಿ ಶ್ರದ್ಧೆಯಿಂದ ಸಾಗುವೆವು.
ಗುರುಬಸವ ತಂದೆಯು ಮೆಚ್ಚುವಂತೆ ಬಾಳುವೆವು
”ಜಾತಿವಾದ ಮನುಜಗೈದ ತಂತ್ರವೆಂದು ಸಾರುವೆವು
ನೀತಿಸಿರಿಯು ಒಂದೆ ಶ್ರೇಷ್ಠಸೂತ್ರವೆಂದು ತಿಳಿವೆವು.
ದೇವನೊಬ್ಬ ನಮ್ಮ ತಂದೆ ಮನುಜರೆಲ್ಲರೊಂದೆ ಎಂದು
ಧರ್ಮಸೋದರತ್ವ ಸಾರಿ ಕಲ್ಯಾಣ ರಾಜ್ಯ ಕಟ್ಟುವೆವು
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*