Previous ಗುರು ಬಸವಣ್ಣನ ನೆನೆಯೋಣ ಬಸವ ಮಂಗಲ Next

ಧರ್ಮಗುರು ಪುಷ್ಪವೃಷ್ಟಿ

*

ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ


ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ
ಧರ್ಮಕರ್ತನ ಮೇಲೆ ಹೂವ ಸೂಾಡೋಣ ||ಪಲ್ಲವಿ||

ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ
ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ || 1||

ಒಬ್ಬ ದೇವನ ನಂಬಿ ಶ್ರದ್ದೆಯಿಂ ಸಾಗುತ
ಅರಿವಿನ ನಿಲುವನ್ನು ಪಡೆದ ಸದ್ಬಕನ ಮೇಲೆ || 2||

ಕರ್ತನಿಗಲ್ಲದೆ ಕುಶ್ಚಿತಗೆರಗೆನು
ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ || 3 ||

ನಾನು ಎನ್ನುವ ಹಮ್ಮನು ಹರಿಯುತ
ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ || 4 ||

ಅಂಗದ ಗುಣವಳಿದು ಲಿಂಗ ಭಾವವು ಬಲಿದು
ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ || 5||

ಸತಿಸುತ ಬಳಗದ ಮೋಹವ ಛೇದಿಸಿ
ದೇವಗೆ ಸತಿಯಾದ ದಿವ್ಯ ಶರಣನ ಮೇಲೆ || 6 ||

ಅಂಗ ಲಿಂಗ ಸಮರಸ ಶೃಂಗ ಭಾವವು ಒಲಿದು
ತ್ರಿಪುಟಿಯ ಭಾವವಳಿದ ಭಾವಲಿಂಗೈಕ್ಯನ ಮೇಲೆ || 7||

ಆರು ಸ್ಥಲಗಳ ದಾಟಿ ಧರೆಯ ಉದ್ದಾರಕ್ಕೆ
ಮಹಾಭಕ್ತ ಸ್ಥಲದಲಿ ನಿಂತ ಕರುಣಿಯ ಮೇಲೆ || 8 ||

ಮುಕ್ತಿದಾತನ ತೋರಿ ಮುಕ್ತಿದಾಯಕನಾದ
ಸಚ್ಚಿದಾನಂದನ ಮುದ್ದು ಕಂದನ ಮೇಲೆ || 9 ||

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಗುರು ಬಸವಣ್ಣನ ನೆನೆಯೋಣ ಬಸವ ಮಂಗಲ Next