Previous ಜಯತು ಜಯತು ಮಹಾದೇವಿ ಬೆಳಗಿರಿ ಬೆಳಗಿರಿ ಮಂಗಲದಾರತಿ Next

ಹೂವ ಸೂರ‍್ಯಾಡೋಣ ಸದ್ಗುರುವಿನ ಮೇಲೆ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಗುರುವಿಗೆ ಪುಷ್ಪಾರ್ಚನೆ

ಹೂವ ಸೂರ‍್ಯಾಡೋಣ ಸದ್ಗುರುವಿನ ಮೇಲೆ
ಶ್ರೀ ಗುರುವಿನ (ಶ್ರೀ ಮಾತೆಯ) ಮೇಲೆ ಹೂವ ಸೂರಾಡೋಣ || ಪ ||

ಜಡದೇಹದಿ ತಾ ಮೃಡನನು ತೋರುತ
ಕಡಲನು ದಾಂಟಿಪ ಪಾವನ ಮೂರ್ತಿಯ ಮೇಲೆ || ೧ ||

ಲೋಕವ ಬೆಳಗುವ ಸೂರ‍್ಯಾಧಿಪನೊಲು
ಮರೆವಿನ ತಿಮಿರವ ತೊಡೆವ ಸದ್ಗುರು ತಾನು || ೨ ||

ಎದೆ ಹಾಲೀಯುತ ಪೋಷಿಪ ತಾಯೊಲು
ಮುದದಿಂ ಅರಿವನು ನೀಡ್ವ ಗುರುವಿನ ಮೇಲೆ || ೩ ||

ಗಂಗಾಧರನೊಲು ಕರುಣೆಯ ಹರಿಸುತ
ಮನವನು ತಣಿಸುವ ಮಂಗಳ ಮೂರ್ತಿಯ ಮೇಲೆ || ೪ ||

ಪ್ರಣವ ಪಂಚಾಕ್ಷರಿಯ ಪ್ರತಿರೂಪ ತಾನಾಗಿ
ಮಿನುಗುವ ಶಶಿಯಹ ಸದ್ಗುರುದೇವನ ಮೇಲೆ || ೫ ||

ಸಚ್ಚಿದಾನಂದದ ಚಿತ್ಕಳೆ ತಾನಾಗಿ
ನಿಚ್ಚಳ ಹೃದಯದ ಶ್ರೀ ಗುರುವಿನ ಮೇಲೆ

ಪರಿವಿಡಿ (index)
Previous ಜಯತು ಜಯತು ಮಹಾದೇವಿ ಬೆಳಗಿರಿ ಬೆಳಗಿರಿ ಮಂಗಲದಾರತಿ Next