Previous ಸವಿಯೊ ಸವಿಯೊ ಸವಿಯೊ ಲಿಂಗವೇ ಕರದೊಳಗೆ ಕಾಣಿಪುದು ಪರವಸ್ತುವಿದನರಿಯ Next

ಮಾತಾಡು ಮಾತನಾಡೋ ಲಿಂಗಯ್ಯ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಮಾತಾಡು ಮಾತನಾಡೋ ಲಿಂಗಯ್ಯ

ಮಾತಾಡು ಮಾತನಾಡೋ ಲಿಂಗಯ್ಯ | ನೀ
ಮಾತಾಡಲೊಲ್ಲೆ ಏಕೋ ? ಲಿಂಗಯ್ಯ || ಪ ||

ಸೋತು ಒರಗಿ ಬಂದು | ಕಾತರಿಸಿ ಬಳಲಿಹ |
ಸತಿ ನಿನಗೊಲಿದವಳು | ಓತು ತಿಳಿ ಇದನು || ಮಾತಾಡು || || ೧ |

ಒಡಲ ಕೆಡುಗುಣಂಗಳ | ಒಡೆಯಾ ನೀನೆಣಿಸದಿರೋ
ಗಡಣವೆ ಅಲ್ಲಿಹುದು | ಅವಗುಣವ ನಿರುಕಿಸದೆ || ಮಾತಾಡು || || ೨ ||

ತಪ್ಪ ಮಾಡುವೆ ನಾನು | ಒಪ್ಪ ಎನ್ನೆನು ಎಂದು
ಅಪ್ಪ ಲಿಂಗಯ್ಯ ನೀ | ಒಪ್ಪಿದ ಮಗುವೆಂದು... | | ಮಾತಾಡು ॥ || ೩ ||

ಮೋಪಿನಿಂ ಬಂದೆ ನಾನು | ಚಿದ್ರೂಪಿಯೆ ತಾಪದಿ ಬೆಂದೆ ನಾನು
ಅಪ್ಪಿಕೊಳ್ಳಲೆ ನೀನು | ಒಪ್ಪಿದ ಸತಿಯೆಂದು.... || ಮಾತಾಡು || || ೪ ||

ಮೌನದಿ ಕುಂತೆ ಏಕೆ | ಚಿಜ್ಞಾನಿಯೆ ಧ್ಯಾನದಿ ಸಂದೆ ಏಕೆ ?
ತಾನ ಪಲ್ಲವಿಯ ಹಿರಿದುಗಾನಕೆ ಮೆಚ್ಚಿ | ಪಾನವನೆನಗಿತ್ತು
ತವ ನಾಮಾಮೃತ || ಮಾತಾಡು || || ೫ ||

ಭಾಮೆ ನಿನಗೊಲಿದಾನು ಅತಿ ಕಾಮ್ಯಾಗಿ ನಿಂದೆನೋ
ಸ್ವಾಮಿ ಪ್ರೇಮಮಯ | ಸಕಲಾಂಗ ಸುಂದರ ಆತ್ಮಾರಾಮ || ಮಾತಾಡು || || ೬ ||

ಸಕಲವನರ್ಪಿಸುತಾ | ತವ ಚೆಲ್ವಿಗೆ ಮೂಕ್ಯಾಗಿ ನಿಂದೆನೊ
ಕಾಕುಗುಣಗಳ ಬಿಡಿಸಿ | ಶೋಕವ ಮರೆಸುವ (ಸಚ್ಚಿದಾನಂದ)
ದೇವಾ ನೀ ಮಾತನಾಡೋ ॥ ಮಾತಾಡು | || ೭ ||

ಪರಿವಿಡಿ (index)
Previous ಸವಿಯೊ ಸವಿಯೊ ಸವಿಯೊ ಲಿಂಗವೇ ಕರದೊಳಗೆ ಕಾಣಿಪುದು ಪರವಸ್ತುವಿದನರಿಯ Next