ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು | ಲಿಂಗಪೂಜೆ |
ತಾಯಿ ಮಡಿಲ ತುಂಬಿ ಬಂದ |
ತಾಯಿ ಮಡಿಲ ತುಂಬಿ ಬಂದ
ಈ ಧರೆಗೆ ಹರುಷ ತಂದ
ಶರಣ ಬಸವ ಜೋ ಜೋ~~ |ಪ|
ಇರುಳ ಸಂ .... ಕೀರ್ತಿ ನೀನಾಗು ಮಗುವೇ
ಗುರು ಚರಣ ಸುಪ್ರಿತಿ ನೀ ಗಳಿಸು ಮಗುವೇ
ಪ್ರೀತಿಯ ಕಿರಣಗಳ ಈ ಜಗಕೆ ನೀಡಿ
ಕರುಣಾ ಮೂರ್ತಿ ಶುಭನಾಮ ಪಾಡಿ ಜೋ ಜೋ |೧|
ಹಡೆದ ಕರುಳಿಂದ ದಾಸೋಹ
ಪಡೆದ ಕರಳಿಂದ ಕಾಯಕ
ಕಾಯಕ ದಾಸೋಹ ನೀ ಕಲಿತು ಮಗುವೇ
ಧರೆಯ ಜೀವನಕೆ ಬೆಳಕನ್ನು ತೋರು ಜೋ ಜೋ |೨|
ಕಲ್ಯಾಣ ನಾಡಿಗೆ ನೀ ಕಳಸವಾದೆ
ಎಲ್ಲೆಲ್ಲೂ (ಶಿವ)ದೇವಪ್ರೇಮ ಹರಡಿಸಿ ನುಡಿದೆ
ಶರಣರ ಸಂದೇಶ ಸಾರುತಲಿ ಜಗದಿ
ಸರ್ವದಲ್ಲಿ ದಾಸೋಹ ನೀ ಕಾಣೋ ಮಗುವೇ ಜೋ ಜೋ |೩|
ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು | ಲಿಂಗಪೂಜೆ |