ಧರ್ಮಗುರು ಪುಷ್ಪವೃಷ್ಟಿ | ಶ್ರೀ ಗುರು ಬಸವನೆ |
ಧರ್ಮಗುರು ಬಸವ ಮಂಗಲ |
ಓಂ ಗುರು ಬಸವಪ್ರಭು ವರಗುರು ಶರಣವಿಭು
ಆಶ್ರಿತಜನ ಸಂರಕ್ಷಕ ಸದ್ಗುರು ಬಸವ ಪ್ರಭು | ವರಗುರು ಶರಣವಿಭು ||ಪ||
ಶರಣಲೋಲನು ನೀ ಪರಮ ಪುರುಷನು ನೀ
ಕರುಣಾ ಸಿಂಧೂ ನೀ ದೀನರ ಬಂಧು ನೀ ||
ಸುಭಗಗಾತ್ರನು ನೀ ಪ್ರೇಮ ನೇತ್ರನು ನೀ
ಪರಮ ಚರಿತನು ನೀ ಜ್ಞಾನಭರಿತನು ನೀ || 1 ||
ಭವಭಯ ತಾರಕನೇ ನವಪಥದಾಯಕನೇ
ಹರಗಣ ತಾರೆಗಳ ನಡುವಿನ ಚಂದಿರನೇ ||
ಮಾತಾಪಿತನೂ ನೀ ಬಂಧು ಬಳಗವು ನೀ
ಭಕ್ತಜನ ಮನೋರಾಜಿತ ಮಂತ್ರಪುರುಷನು ನೀ || 2 ||
ಮೋಹರಹಿತನು ನೀ ಮಮತಾ ಸಹಿತನು ನೀ
ಮಾಯಾದೂರಕ ನೀ ಮುಕುತಿಯದಾಯಕ ನೀ ||
ಮನುಕುಲ ಜ್ಯೋತಿಯು ನೀ ಕ್ರಾಂತಿಯ ವೀರನು ನೀ
ಶಾಂತಿಯ ಹೊನಲು ಹರಿಸಲು ಬಂದ ಸಚ್ಚಿದಾನಂದ ಸುತ ನೀ ||3||
ಓಂ ಗುರು ಓಂ ಗುರು ಓಂ ಗುರು ಬಸವಾ
ಸದ್ಗುರು ಬಸವಾ ತವ ಶರಣಂ ||ಪ||
ಮಂಗಳ ರೂಪಿನ್ ಜಂಗಮ ಮೂರ್ತೆ
ಮದ್ಗುರು ಬಸವಾ ತವ ಶರಣಂ ||ಅ.ಪ||
ನಮಾಮಿ ಸದ್ಗುರು ಪ್ರಣವ ಸ್ವರೂಪಿನ್
ಮಂತ್ರ ಪುರುಷ ಹೇ ತವ ಶರಣಂ
ಜಗದೋದ್ದಾರಕ ಪತಿತೋದ್ದಾರಕ
ವರ ಗುರು ಬಸವಾ ತವ ಶರಣಂ || 1||
ಶರಣ ರಕ್ಷಕ ಕರುಣಾ ಮೂರ್ತೆ
ಮರಣವಿದೂರ ತವ ಶರಣಂ ||
ಸಮತಾವಾದಿನ್ ಮನುಕುಲ ಕೀರ್ತೆ
ಚಿನ್ಮಯ ಮೂರ್ತೆ ತವ ಶರಣಂ || 2||
ಸನ್ಮಯಗಾತ್ರಾ ಪರಮ ಪವಿತ್ರ
ಮಮತಾ ಮೂರ್ತೆ ತವ ಶರಣಂ |
ಮಾತೃ ಸ್ವರೂಪಿನ್ ಪಿತೃ ಸ್ವರೂಪಿನ್
ಜ್ಯೋತಿ ಸ್ವರೂಪಿನ್ ತವ ಶರಣಂ || 3||
ಭವತಾಪಹಾರಕ ಶಿವ ಸುಖದಾಯಕ
ಪಾವನ ಪುರುಷ ತವ ಶರಣಂ|
ವರ ಗುಣ ಸಹಿತ ನಿರುಪಮ ಚರಿತ
ಪರಶಿವಭರಿತ ತವ ಶರಣಂ || 4||
ನಿತ್ಯಾನಂದಿನ್ ಸತ್ಯ ಸ್ವರೂಪಿನ್
ಭ್ರಾಂತಿ ವಿನಾಶಕ ತವ ಶರಣಂ |
ಆನಂದ ರೂಪಿನ್ ಚಿದಾನಂದ ರೂಪಿನ್
ಸಚ್ಚಿದಾನಂದ ಸುತ ತವ ಶರಣಂ || 5||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಧರ್ಮಗುರು ಪುಷ್ಪವೃಷ್ಟಿ | ಶ್ರೀ ಗುರು ಬಸವನೆ |