ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
|
|
*
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಹರಸಿರಿ ಶುಭವನು ಮುದ್ದು ಕಂದನಿಗೆ/ಕಂದಳಿಗೆ || ಪ ||
ಲಿಂಗದೇವನ ಕರುಣೆ ಕಾಪಾಡಲೆಂದು
ಗುರುಬಸವಣ್ಣನ ಶ್ರೀ ರಕ್ಷೆ ಇರಲೆಂದು
ಆಯುಷ್ಯ ಆರೋಗ್ಯ ನಿನಗಿರಲಿ ಎಂದು
ಸದ್ವಿದ್ಯೆ ಸರ್ತಿ ನಿನಗಾಗಲೆಂದು || 1 ||
ಮನೆಮನ ತುಂಬುವ ಜ್ಯೋತಿ ನೀನಾಗು
ಧರ್ಮದಿ ನಡೆಯುವ ದಿವ್ಯ ಚೇತನವಾಗು
ಗುರು ಹಿರಿಯರೆಲ್ಲರ ಅರ್ತಿಯಿಂ ಪೊರೆವ
ಕೀರ್ತಿಯ ಕುವರ/ರಿ ನೀನಾಗು ಕಂದಾ || 2 ||
ಮಾನವ ಜನ್ಮದ ಮಹತಿಯ ಅರಿತು
ಮರೆವನು ತೊಡೆದು ದೇವಗೆ ಬಾಗಿ
ಶರಣರ ಪಥದಲ್ಲಿ ಮುನ್ನಡೆಯಲೆಂದು
ಸಚ್ಚಿದಾನಂದನ ಸ್ಮರಿಸುತ ಹರಸಿ || 3 ||
ಭಾರತೀಯ ಸಂಸ್ಕೃತಿಯಂತೆ ಆರತಿ ಬೆಳಗಬೇಕು, ಎಷ್ಟು ವರ್ಷಗಳಾಗಿವೆಯೋ ಅಷ್ಟು ಬಟ್ಟಲ ಆರತಿ ಮಾಡಬೇಕು. ಗೋಧಿ ಹಿಟ್ಟು ಕಲಸಿ ಅದರಲ್ಲಿ ಬಟ್ಟಲು ಮಾಡಿ, ಎಣ್ಣೆ ಬತ್ತಿ ಹಾಕಿ ತಟ್ಟೆಯಲ್ಲಿ ಅಲಂಕಾರಿಕವಾಗಿ ಜೋಡಿಸಿ ಹಚ್ಚಿ, ಬೆಳಗಬೇಕು.
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*