ಜ್ಞಾನಪೂರ್ಣಂ ಜಗನ್-ಜ್ಯೋತಿ | ಬಸವ ಬಸವಾಯೆಂದು...... |
ಬಸವನ ನೆನೆ ಮನವೆ
|
ಬಸವನ ನೆನೆ ಮನವೆ ಸಂಗನ
ಬಸವನ ನೆನೆ ಮನವೆ
ಬಸವನ ಚರಣವ ಪೂಜಿಸು ಕರವೆ
ಬಸವ ಬಸವ ಬಸವ ಎನು ನಾಲಿಗೆ |ಪ|
ಬಕಾರವೆ ಲಿಂಗ ಸಕಾರವೆ ಶಕ್ತಿ
ವಕಾರವೆ ಲಿಂಗದ ಬೆಳೆಗೆಂಬುದು |1|
ಬಕಾರವೆ ಗುರು ಸಕಾರವೆ ಲಿಂಗ
ವಕಾರವೆ ಜಂಗಮವೆಂಬುದು |2|
ಬಸವೇಶ್ವರ ಚನ್ನಬಸವೇಶ್ವರ ಪ್ರಭು
ಎಸೆವ ಮೂವರು ತ್ರಿವಿಧಾಕ್ಷರವು |3|
ಬಸವ ಬಸವ ಬಸವ ಬಸವ
ಬಸವ ಬಸವ ಬಸವ ಬಸವ ಎಂದು |4|
ಎನ್ನಯ ಹೃತ್ಕಮಲದಲ್ಲಿ ಬೆಳಗುವ
ಚನ್ನಮಲ್ಲಿಕಾರ್ಜುನ ಬಸವನಾಗಿಹ |5|
- ಶ್ರೀ ಗುರುಮಾತೆ ಅಕ್ಕಮಹಾದೇವಿ
ಜ್ಞಾನಪೂರ್ಣಂ ಜಗನ್-ಜ್ಯೋತಿ | ಬಸವ ಬಸವಾಯೆಂದು...... |