Previous ಹೇ ಪರಮಾತ್ಮ ಲೋಕದ ಮಿತ್ರ ಭಾರತ ಮಾತೆ ಜನ್ಮದಾತೆ Next

ಹೇ ತಾಯಿ ಭಾರತಿ

*

ಹೇ ತಾಯಿ ಭಾರತಿ

ಹೇ ತಾಯಿ ಭಾರತಿ,
ಹರಿಸು ನಿನ್ನ ಕರುಣೆಯ, ಉರಿಸು ದೇಶ ಭಕ್ತಿಯ
ಶೌರ‍್ಯ ವೀರ‍್ಯ ಕಾರ್ಯಕ್ಷಮತೆ ತುಂಬು ಎಮ್ಮ ಹೃದಯಕೆ || ಪ ||

ಹೃದಯ ಗುಡಿಯ ಫೀಠದಲಿ ನೆಲೆಗೊಳಿಸು ಶ್ರದ್ದೆಯ
ನಾಡಿಗಾಗಿ ದುಡಿವ ಮಡಿವ ತ್ಯಾಗಭಾವ ತುಂಬುತಾ
ಜಾತಿ ಮತ ಪಂಥಗಳ ಕೀಳುಭಾವ ಅಳಿಸುತಾ
ಭಿನ್ನ ಭೇದ ಮರೆತು ಬಾಳ್ವ ಪ್ರೇಮಭಾವ ಬೆಳೆಸುತಾ || 1 ||

ನಿನ್ನ ನೆಲದ ಅನ್ನವುಂಡು, ಮಡಿಲ ತೊಡೆಯಲಾಡಿ ಬೆಳೆದು
ದ್ರೋಹವನ್ನು ಬಗೆಯದಂಥ ದೇಶನಿಷ್ಠೆ ಕಲಿಸುತಾ
ಎನ್ನ ಬಾಳ ಕಣಕಣವು ನಿನ್ನ ಪಾದಕರ್ಪಣ
ಎನ್ನ ಚೆನ್ನ ತನುಮನವು ನಾಡಗುಡಿಗೆ ತರ್ಪಣ || 2 ||

ಕರ್ಮದೀಕ್ಷೆ ನೀಡು ತಾಯೆ ಸತ್ಯ ಕವಚ ತೊಡಿಸು ನೀ
ಧರ್ಮವಂತರಾಗಿ ಬಾಳ್ವ ಒಲದ ಛಲವ ಕರುಣಿಸು
ಶಾಂತಿಸ್ನೇಹ ಪ್ರೇಮ ಸಮತೆ ಅಂಗವಿಸಿ ಬಾಳೋವಾವು
ನಿನ್ನ ಕೀರ್ತಿ ಪ್ರಣತೆಯುರಿಗೆ ಬಾಳ ತೈಲ ಎರೆವೆವು || 3 ||

*
ಪರಿವಿಡಿ (index)
Previous ಹೇ ಪರಮಾತ್ಮ ಲೋಕದ ಮಿತ್ರ ಭಾರತ ಮಾತೆ ಜನ್ಮದಾತೆ Next