Previous ಅಕ್ಕಮಹಾದೇವಿ ಜೋಗುಳ ಜೋ ಜೋ ಜೋ ಕಂದ Next

ಚನ್ನಬಸವೇಶ ಜೋಗುಳ

*

ಜೋ ಚನ್ನಬಸವೇಶಾ

ಜೋ ಜೋ ಜೋ ಶರಣ ಚನ್ನಬಸವೇಶಾ
ಹರಸಲು ಬೇಡುವೆ ನೀ ಎಮಗೆ ಯಶವಾ ||ಜೋ|| ||ಪ||

ಬಾಳೊಂದು ನದಿಯು ಹರಿಯುತಿದೆ ಗುರಿಗೆ
ಜನನ ಮರಣದ ಲೀಲೆ ದೇವನ ಕೈಯೊಳಗೆ
ಭಕ್ತಿ-ಜ್ಞಾನವೆಂಬೆರಡು ದಂಡೆಯ ನಡುವೆ
ಯುಕ್ತಿಯಿಂ ಹರಿದರೆ ಮುಕ್ತಿಪದವೆಂದೆ ||ಜೋ|| ||1||

ಬಸವ ಧರ್ಮದ ಕುಡಿಯ ವಿಶ್ವಧರ್ಮದ ಸೊಡರೆ
ದೆಸೆದೆಸೆಗೆ ಪಸರಿಸಿತು ನಿನ್ನ ಮಾತಿನ ಸಿರಿಯು|
ಮೊಳಗಿ ಧರ್ಮದ ಕಹಳೆ ಬೆಳಗಿ ಜ್ಞಾನದ ರವಿಯ ||
ಹೊಳೆಯಾಗಿ ಹರಿದು ನೀ ಇಳೆಯ ತಣಿಸಿದೆಯೌ ||ಜೋ|| ||2||

ಮೃಣ್ಮಯದ ಬನ್ನವ ಗೆಲಿದೆ ನಾಗಲೆ ಕಂದಾ
ಚಿನ್ನಯ ಚಿಜ್ಯೋತಿಯಾದೆ ಮಕರಂದ
ಕರಣ ಕಾನನದೊಳಗೆ ವಿರತಿಯ ವಿಭುವಾಗಿ
ಶರಣ ಕೋಗಿಲೆಯಾಗಿ ವಚನ ಬನದಲಿ ಹಾಡ್ದೆ ||ಜೋ|| ||3||

*
ಪರಿವಿಡಿ (index)
Previous ಅಕ್ಕಮಹಾದೇವಿ ಜೋಗುಳ ಜೋ ಜೋ ಜೋ ಕಂದ Next