Previous ಅಕ್ಕಮಹಾದೇವಿ ಸ್ವರ ವಚನಗಳು ಬಸವಣ್ಣ ಸ್ವರ ವಚನಗಳು Next

ಶಿವಶರಣರನ್ನು ನೆನೆಯಿರೋ

*

ಶಿವಶರಣರನ್ನು ನೆನೆಯಿರೋ

ಗಾಳಿ ಬಂದ ಕೈಯಲ್ಲಿ ತೂರಿ ಕೊಳ್ಳಿರೋsss
ಬಾಯ ಮುಚ್ಚಬೇಡಿ ಶಿವಶರಣರನ್ನು ನೆನೆಯಿರೋ ||

ನಿತ್ಯವಿಲ್ಲ ನೇಮವಿಲ್ಲ
ಮತ್ತೆ ದಾನ ಧರ್ಮ ವಿಲ್ಲ
ವ್ಯರ್ಥವಾಗಿ ಕೆಡದೆ
ಶಿವಶರಣರನ್ನು ನೆನೆಯಿರೋ ||

ಸುಳ್ಳು ಗೋಳ್ಳು ಬದಿಗೊತ್ತಿ
ಕಳ್ಳು ಪಳ್ಳು ಕಾಡಿಗಟ್ಟಿ
ಪರರ ಹಣವ ಅಪಹರಿಸದೇ
ಶಿವಶರಣರನ್ನು ನೆನೆಯಿರೋ ||

ಷಡ್ವಿಧ ಗುಣಂಗಳು
ಅಷ್ಟ ಮದಂಗಳು
ಸಪ್ತ ವ್ಯಸನಂಗಳು
ಮೆಟ್ಟಿ ನಿಂತು ಶಿವಶರಣರನು ನೆನೆಯಿರೆ||

ಅಷ್ಟಾವರಣಗಳು
ಪಂಚಾಚಾರಗಳು
ಷಟಸ್ಥಳಗಳು
ಅರಿತು ಆಚರಿಸುತ್ತ ಶಿವಶರಣನ್ನು ನೆನೆಯಿರೋ||

ಇಷ್ಟಲಿಂಗವ ಪೂಜಿಸಿ
ವಚನ ಶಾಸ್ತ್ರವ ಪಠಿಸಿ
ಕಾಯಕದಲ್ಲಿ ಕೈಲಾಸವಿರಿಸಿ
ದಾಸೋಹಂ ಎಂದು ಶಿವಶರಣರನ್ನು ನೆನೆಯಿರೋ ||

ಭಕ್ತಿ ಕೊಡುವ
ಮುಕ್ತಿ ನೀಡುವ
ಕೂಡಲಸಂಗನ ಬಸವನ ನೆನೆಯಿರೋ||

ಪರಿವಿಡಿ (index)
*
Previous ಅಕ್ಕಮಹಾದೇವಿ ಸ್ವರ ವಚನಗಳು ಬಸವಣ್ಣ ಸ್ವರ ವಚನಗಳು Next