Previous ಹೇ ತಾಯಿ ಭಾರತಿ ಭಾರತ ನೆಲದಲಿ ಹುಟ್ಟಿದ ನಾನು Next

ಭಾರತ ಮಾತೆ ಜನ್ಮದಾತೆ

*

ಭಾರತ ಮಾತೆ ಜನ್ಮದಾತೆ

ಭಾರತ ಮಾತೆ ಜನ್ಮದಾತೆ ತಾಯೆ ನಿನಗೆ ವಂದನಾ
ಎನ್ನ ಬಾಳ ಕಣಕಣವು ನಿನ್ನ ಚರಣಕೆ ಅರ್ಪಣಾ || ಪ ||

ಪುಣ್ಯ ಚರಿತ ಬಸವ ಪ್ರೀತ ಗಣ್ಯ ಪ್ರೀತ ಸತ್ಕಲಾತ್ಮ ಜ್ಯೋತಿಯೇ
ಮಾನ್ಯ ಮೂರ್ತೆ ವಿಶ್ವಕೀರ್ತಿ ತ್ಯಾಗಯೋಗ ಸೂರ್ತಿಯೇ
ಸುಜಲ ಭರಿತೆ ಅಮರ ಚರಿತೆ ಸತ್ಯ ಸಂಪನ್ಮೂಷಿತೆ
ಸುಭಗ ಗಾತ್ರೆ ಸರ್ವ ಪ್ರೀತಿ ವಿಶ್ವಜನ ಶರಣಜನ ಪೂಜಿತೆ ||1||

ಗೌರಿಶಂಕರ ಗಿರಿಯು ಧವಳ ಮುಕುಟವಾಗೆ ನಿನಗೆ
ಕನ್ಯಾಕುಮಾರಿಯಲ್ಲಿ ಶರಧಿಯಲೆಯು ಕಾಲುಂಗುರ
ಹಸಿರು ಬನದ ಪೀತಾಂಬರ ಒಡಲು ಸುತ್ತಿ ಮಿರುಗುತಿರೆ
ಪುಷ್ಪರಾಶಿ ಬಿರಿದು ಗೈಯೆ ಸಿರಿಮುಡಿಗೆ ಶೃಂಗಾರ || 2 ||

ನಿನ್ನ ನೆಲದ ತೊಟ್ಟಿಲಲಿ ಆಡಿ ಬೆಳೆದ ಮಕ್ಕಳಾವು
ಬೀಸಿ ಉಲಿವ ತಣ್ಣೀಲರ ಲಾಲಿ ಕೇಳು ನಲಿದೆವು
ನಮ್ಮ ಬದುಕು ತೈಲವಾಗಿ ನಿನ್ನ ಹೃದಯದೀಪ ಉರಿದು
ಲೋಕವೆಲ್ಲ ಬೆಳಕು ಕಂಡು ಮುನ್ನಡೆಯಲಿ ಶಿವದ ಗುರಿಗೆ || 3 ||

ಶುಕವಾಗಿ ಪಿಕವಾಗಿ ನಿನ್ನ ಬನದಿ ಹಾಡ್ವ ಸುಖವ
ನದಿಯಾಗಿ ತೊರೆಯಾಗಿ ನಿನ್ನ ತೊಡೆಯಲಾಡ್ಡ ವರವ
ಎಂದೆಂದೂ ನೀ ಕರುಣಿಸು ಜನ್ಮವೆನಿತು ಬಂದರೂ
ವಂದಿಪೆನು ಅದಕೆ ನಿನಗೆ ಸಚ್ಚಿದಾನಂದ ಮಂಗಲೆ || 4 ||

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಹೇ ತಾಯಿ ಭಾರತಿ ಭಾರತ ನೆಲದಲಿ ಹುಟ್ಟಿದ ನಾನು Next