Previous ಚನ್ನಬಸವೇಶ ಜೋಗುಳ ಹೂವ ಸೂರ‍್ಯಾಡೋಣ Next

ಜೋ ಜೋ ಜೋ ಕಂದ

*

ಜೋ ಜೋ ಜೋ ಕಂದ

ಜೋ (ಜೈ) ಜೋ (ಜೈ) ಜೋ (ಜೈ)** ಕಂದ ಪರಮಾನಂದ *
ಮುದವನು ತಾ ತಂದ ಒಲವಿನ ಕಂದಾ ...ಜೋ...(ಜೈ) ||ಪ||

ತಾಯಿ ತಂದೆಯರ ಪ್ರೇಮದ ಅರಗಿಣಿ
ಬಂಧು ಬಾಂಧವರ ಮುದ್ದಿನ ಕಣ್ಮಣಿ
ವಂಶದ ಆಗಸದಿ ಚೆಲುವಿನ ದಿನಮಣಿ
ದಿನ ದಿನಕ್ಕೆ ಬೆಳೆಯುತ ಆಗು ನೀ ಗುಣಮಣಿ ...ಜೋ...(ಜೈ) |1|

ಆರೋಗ್ಯ ಆಯುಷ್ಯ ಸಂಪ್ರಾಪ್ತವಾಗಲಿ
ವಿದ್ಯಾ-ಬುದ್ದಿಗಳು ಎಂದೆಂದು ನಿನಗಿರಲಿ
ಸಂಪತ್ತು ಸಂತೋಷ ಸಂತೃಪ್ತಿ ದೊರಕಲಿ
ನೂರು ವರುಷ ಕಾಲ ಬದುಕುವ ದೆಸೆಯಿರಲಿ ...ಜೋ...(ಜೈ) |2|

ಜಗದೊಡೆಯ ದೇವನ ಕರುಣೆ ಕಾಪಾಡಲಿ
ಗುರು ಹಿರಿಯರೆಲ್ಲರ ಒಲವಿನ ಬಲವಿರಲಿ
ಶರಣರ ಪಥದಲ್ಲಿ ಸಾಗುವ ಛಲವಿರಲಿ
ಗುರು ಬಸವ ತಂದೆಯ ಶ್ರೀರಕ್ಷೆ ನಿನಗಿರಲಿ ...ಜೋ... (ಜೈ) |3|

( * ಪರಮಾನಂದ ಎನ್ನುವ ಸ್ಥಳದಲ್ಲಿ ಮಗುವಿನ ಹೆಸರನ್ನು ಹೇಳಬಹುದು.
** ಮಗು ದೊಡ್ಡದಾದ ಮೇಲೆ ತಾಯಿಯ ತೊಡೆಯ ಮೇಲೆ, ಕುರ್ಚಿ ಮೇಲೆ, ಉಯ್ಯಾಲೆ ಮೇಲೆ ಕುಳ್ಳಿರಿಸಿ ಹುಟ್ಟುಹಬ್ಬ ಆಚರಿಸುವಾಗ ಜೋ ಜೋ ಬದಲಿಗೆ ಜೈ ಜೈ ಜೈ ಕಂದಾ ಎಂದು ಹಾಡಬೇಕು.)

*
ಪರಿವಿಡಿ (index)
Previous ಚನ್ನಬಸವೇಶ ಜೋಗುಳ ಹೂವ ಸೂರ‍್ಯಾಡೋಣ Next