Previous ಧ್ವಜಾರೋಹಣ ಸಂಕಲ್ಪ ಗೀತೆ ಬಸವ ಭಕ್ತರ ಪ್ರತಿಜ್ಞೆ Next

ಧ್ವಜಾರೋಹಣ ಗೀತೆ

*

ಧ್ವಜಾರೋಹಣದ ನಂತರ ಹಾಡಲಾಗುವ ಗೀತೆ , ಧ್ವಜಗೀತೆ

ಹೇ ಶರಣ ಬಂಧುಗಳೇ, ಬಸವ ಧ್ವಜವು ಹಾರುತಿದೆ
ಶಾಂತಿ ಧ್ವನಿ ಮೊಳಗುತಿದೆ ; ಬನ್ನಿ ಬನ್ನಿ ಬನ್ನಿರೆಲ್ಲ ಭೇದ ಭಾವ ತೊಡೆದೀಗ |ಪ|

ಜಾತೀಯತೆಯ ತಿಮಿರ ತೊಡೆದು ಧಾರ್ಮಿಕತೆಯ ತತ್ವ ಹಿಡಿದು
ಬಸವ ಪತಾಕೆಯ ತತ್ವದೊಡನೆ ಮೆರೆಸುತ
ಧರ್ಮವೆಮದು ಸದ್ಧರ್ಮ ಧರ್ಮವೆಮದು ಮಾನವ ಧರ್ಮ
ಧರ್ಮವೆಮದು ರಾಷ್ಟ್ರ ಧರ್ಮ ಧರ್ಮವೆಮದು ವಿಶ್ವಧರ್ಮ |1|

ಬಸವಾದಿ ಪ್ರಮಥರ ದಿವ್ಯ ಪರಂಪರೆಯವರು
ಮನುಕುಲದ ಸ್ವಾತಂತ್ರ ಕೆ ದುಡಿವೆವೆಂಬ ಛಲದವರು
ಎಮ್ಮ ಬಾಳ ಕಣಕಣವು ಬಸವ ಪಾದಕರ್ಪಣ
ಎಮ್ಮ ಚೆನ್ನ ತನುಮನವು ನಾಡ ಗುಡಿಗೆ ತರ್ಪಣ |2|

ಜಾತಿ ಮತ ಪಂಥಗಳ ಕೀಳು ಭಾವ ಅಳಿಸುವಾ
ಭಿನ್ನ ಭೇದ ಮರೆತು ಬಾಳ್ವ ಪ್ರೇಮ ಭಾವ ಬೆಳೆಸುವಾ
ಶಾಂತಿ ಸ್ನೇಹ ಪ್ರೇಮ ಸಮತೆ ಅಂಗವಿಸಿ ಬಾಳುವಾ
ಬಸವ ಧರ್ಮ ಪ್ರಣತೆಯುರಿಗೆ ಬಾಳ ತೈಲ ಎರೆಯುವಾ |3|

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಧ್ವಜಾರೋಹಣ ಸಂಕಲ್ಪ ಗೀತೆ ಬಸವ ಭಕ್ತರ ಪ್ರತಿಜ್ಞೆ Next