Previous ಲಿಂಗದೇವ ಮಂಗಳ ಗೀತೆ ಧ್ವಜಾರೋಹಣ ಸಂಕಲ್ಪ ಗೀತೆ Next

ಗುರು ಬಸವ ಸ್ತುತಿ

ಸಾಮೂಹಿಕ ಗುರು ಬಸವ ಸ್ತುತಿ

ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕವಾಗಿ ಹಾಡಲು, ಭಜನೆ ಮಾಡಲು ಅತ್ಯಂತ ಉಪಯುಕ್ತವಾದ ಗುರು ಬಸವ ಸ್ತುತಿಯನ್ನು ಕೊಡಲಾಗಿದೆ.

ಗುರು ಬಸವಾ ಓಂ ಗುರು ಬಸವಾ
ರಕ್ಷಿಸು ಜಯ ಶ್ರೀ ಗುರು ಬಸವಾ
||ಪಲ್ಲವಿ||

ಪರಮ ಕಾರಣಿಕ ಗುರು ಬಸವಾ ಪಾವನ ಚರಿತ ಗುರು ಬಸವಾ
ಕರ್ತ ಸುಪುತ್ರ ಗುರು ಬಸವಾ ಧರ್ಮ ಸ್ಥಾಪಕ ಗುರು ಬಸವಾ
ಮಾದರಸ ಪುತ್ರ ಗುರು ಬಸವಾ ಮಾದಲಾಂಬಿಕ ಸುತ ಗುರು ಬಸವಾ
ಬಾಗೇವಾಡಿಯ ಗುರು ಬಸವಾ ಭಾಗ್ಯವಿಧಾತ ಗುರು ಬಸವಾ
ಸಂಗಮವಾಸಿಯೇ ಗುರು ಬಸವಾ ಕಲ್ಯಾಣೇಶ್ವರ ಗುರು ಬಸವಾ
ಮುಕ್ತಿದಾಯಕ ಗುರು ಬಸವಾ ದಾರ್ಶನಿಕ ದಿಗ್ಗಜ ಗುರು ಬಸವಾ
ಶ್ರೇಷ್ಠ ಪ್ರವಾದಿ ಗುರು ಬಸವಾ ಅನುಭಾವ ಸಾಮ್ರಾಟ ಗುರು ಬಸವಾ
ಇಷ್ಟಲಿಂಗದಾತ ಗುರು ಬಸವಾ ಇಷ್ಟಲಿಂಗಧಾರಕ ಗುರು ಬಸವಾ
ಲಿಂಗಾಂಗ ಯೋಗಿ ಗುರು ಬಸವಾ ಇಷ್ಟಪ್ರದಾಯಕ ಗುರು ಬಸವಾ
ಸಂಸಾರಯೋಗಿ ಗುರು ಬಸವಾ ಪರಮವಿರಕ್ತ ಗುರು ಬಸವಾ
ಮಂತ್ರಪುರುಷ ಗುರು ಬಸವಾ ಮಂತ್ರಸ್ವರೂಪ ಗುರು ಬಸವಾ
ಗಾನವಿಶಾರದ ಗುರು ಬಸವಾ ತತ್ತ್ವಜ್ಞಾನಿ ಗುರು ಬಸವಾ
ಸೇಶ್ವರವಾದಿ ಗುರು ಬಸವಾ ಸರ್ವಾಂಗಲಿಂಗಿ ಗುರು ಬಸವಾ
ಭಕ್ತಿಯೋಗಿ ಗುರು ಬಸವಾ ಜ್ಞಾನಯೋಗಿ ಗುರು ಬಸವಾ
ರಾಜಯೋಗಿ ಗುರು ಬಸವಾ ಕುಂಡಲಿನಿ ಯೋಗಿ ಗುರು ಬಸವಾ
ಷಟ್‌ಚಕ್ರ ಭೇದಕ ಗುರು ಬಸವಾ ಸಹಸ್ರಾರ ಸಾಧಕ ಗುರು ಬಸವಾ
ಕಾಯಕ ಯೋಗಿ ಗುರು ಬಸವಾ ಲಿಂಗಯೋಗದಾತ ಗುರು ಬಸವಾ
ಸಗುಣ ಸಾಕ್ಷಾತ್ಕಾರಿ ಗುರು ಬಸವಾ ಪವಾಡ ಪುರುಷ ಗುರು ಬಸವಾ
ಪರಿಪೂರ್ಣ ಸಾಕ್ಷಾತ್ಕಾರಿ ಗುರು ಬಸವಾ ಪವಾಡ ಪುರುಷ ಗುರು ಬಸವಾ
ಪರುಷ ಹಸ್ತ ಗುರು ಬಸವಾ ಪರುಷ ನೇತ್ರ ಗುರು ಬಸವಾ
ಪರುಷ ಪಾದ ಗುರು ಬಸವಾ ಪಾವನಮೂರ್ತಿ ಗುರು ಬಸವಾ
ವಾಕ್ಸಿದ್ಧಿ ಪುರುಷ ಗುರು ಬಸವಾ ಭಾವ ಪರುಷ ಗುರು ಬಸವಾ
ಪರಮಪ್ರಸಾದಿ ಗುರು ಬಸವಾ ನೀತಿವಾದಿ ಗುರು ಬಸವಾ
ಜೀವನ್ಮುಕ್ತ ಗುರು ಬಸವಾ ಸ್ಥಿತಪ್ರಜ್ಞಗುರು ಬಸವಾ
ಇಚ್ಛಾಮರಣಿ ಗುರು ಬಸವಾ ಸದ್ಗುಣನಿಧಿ ಗುರು ಬಸವಾ
ಸುಜ್ಞಾನ ಮೂರುತಿ ಗುರು ಬಸವಾ ಅಜ್ಞಾನ ಛೇದಕ ಗುರು ಬಸವಾ
ಭವಭಯಹಾರಕ ಗುರು ಬಸವಾ ಶಿವಸುಖದಾಯಕ ಗುರು ಬಸವಾ
ಗುರುಸಾರ್ವಭೌಮ ಗುರು ಬಸವಾ ಗುರು ಬಸವಲಿಂಗ ಗುರು ಬಸವಾ
ಶರಣ ಜನ ಭಾಸ್ಕರ ಗುರು ಬಸವಾ ಶರಣ ಗುಣನಿಧಿ ಗುರು ಬಸವಾ
ಸಮತಾವಾದಿ ಗುರು ಬಸವಾ ಮಂಟಪ ನಿರ್ಮಾತೃ ಗುರು ಬಸವಾ
ಲಿಂಗಾಯತ ಸಂಸ್ಥಾಪಕ ಗುರು ಬಸವಾ ಜಂಗಮ ರೂಹಾರಿ ಗುರು ಬಸವಾ
ಜಾತಿ ವಿರೋಧಿ ಗುರು ಬಸವಾ ಸ್ತ್ರೀ ಕುಲೋದ್ಧಾರಕ ಗುರು ಬಸವಾ
ಪತಿತೋದ್ಧಾರಕ ಗುರು ಬಸವಾ ದಲಿತೋದ್ಧಾರಕ ಗುರು ಬಸವಾ
ವಿಚಾರವಾದಿ ಗುರು ಬಸವಾ ರಾಜನೀತಿಜ್ಞ ಗುರು ಬಸವಾ
ಗಣಿತ ಶಾಸ್ತ್ರಜ್ಞ ಗುರು ಬಸವಾ ಬಹು ಲಿಪಿ ತಜ್ಞಗುರು ಬಸವಾ
ಅರ್ಥ ಶಾಸ್ತ್ರಜ್ಞ ಗುರು ಬಸವಾ ಸಮಾಜ ಸುಧಾರಕ ಗುರು ಬಸವಾ
ಗಣಧರ್ಮದಾಯಕ ಗುರು ಬಸವಾ ಲೋಕ ಸಂಗ್ರಹಿ ಗುರು ಬಸವಾ
ಲಿಂಗಾಚಾರಿ ಗುರು ಬಸವಾ ಸದಾಚಾರಿ ಗುರು ಬಸವಾ
ಶಿವಾಚಾರಿ ಗುರು ಬಸವಾ ಗಣಾಚಾರಿ ಗುರು ಬಸವಾ
ನೃತ್ಯಾಚಾರಿ ಗುರು ಬಸವಾ ಸಮಾಜ ವಿಜ್ಞಾನಿ ಗುರು ಬಸವಾ
ಲೋಕೋದ್ಧಾರಕ ಗುರು ಬಸವಾ ಸದಾಚಾರ ಬೋಧಕ ಗುರು ಬಸವಾ
ಅಹಿಂಸಾವಾದಿ ಗುರು ಬಸವಾ ಅಮೂಲ್ಯ ಚಿಂತಕ ಗುರು ಬಸವಾ
ವಚನ ಕರ್ತೃ ಗುರು ಬಸವಾ ದಿವ್ಯಜ್ಞಾನಿ ಗುರು ಬಸವಾ
ಸಾಹಿತ್ಯ ಸಾರ್ವಭೌಮ ಗುರು ಬಸವಾ ಮನಃಶಾಸ್ತ್ರಜ್ಞ ಗುರು ಬಸವಾ
ಶರಣಗಣಮಣಿ ಗುರು ಬಸವಾ ಶರಣ ಜನ ರಕ್ಷಕ ಗುರು ಬಸವಾ
ಏಕದೇವ ನಿಷ್ಠ ಗುರು ಬಸವಾ ಜಂಗಮ ಪ್ರೇಮಿ ಗುರು ಬಸವಾ
ಅಷ್ಟಾವರಣದಾತ ಗುರು ಬಸವಾ ಪಂಚಾಚಾರ ಕರ್ತೃ ಗುರು ಬಸವಾ
ಷಟ್‌ಸ್ಥಲದಾತ ಗುರು ಬಸವಾ ಷಡಂಗದಾಸೋಹಿ ಗುರು ಬಸವಾ
ಸದ್ಧರ್ಮದಾತ ಗುರು ಬಸವಾ ವಿಶ್ವಧರ್ಮದಾತ ಗುರು ಬಸವಾ
ಸ್ವಯಂಕೃತ ಮೂರ್ತಿ ಗುರು ಬಸವಾ ತ್ರಿವಿಧ ದಾಸೋಹಿ ಗುರು ಬಸವಾ
ಕ್ರಾಂತಿಪುರುಷ ಗುರು ಬಸವಾ ಶಾಂತಿದೂತ ಗುರು ಬಸವಾ
ಮಾನವತಾವಾದಿ ಗುರು ಬಸವಾ ಮನುಕುಲಜ್ಯೋತಿ ಗುರು ಬಸವಾ
ವಿಶ್ವಕುಟುಂಬಿ ಗುರು ಬಸವಾ ಲಿಂಗದೇವ ಪ್ರಿಯ ಗುರು ಬಸವಾ
ಬಸವಾತ್ಮಜೆ ಪಿತ ಗುರು ಬಸವಾ ಸಚ್ಚಿದಾನಂದಸುತ ಗುರು ಬಸವಾ
ಪಾಹಿಮಾಂ ಪಾಹಿಮಾಂ ಗುರು ಬಸವಾ
ರಕ್ಷಮಾಂ ರಕ್ಷಮಾಂ ಗುರು ಬಸವಾ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಲಿಂಗದೇವ ಮಂಗಳ ಗೀತೆ ಧ್ವಜಾರೋಹಣ ಸಂಕಲ್ಪ ಗೀತೆ Next