ಜನಪದದಲ್ಲಿ ಇಷ್ಟಲಿಂಗ ಪೂಜೆ | ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ |
ಲಿಂಗಪೂಜೆಯ ಮಾಡಿರೋ |
ಲಿಂಗಪೂಜೆಯ ಮಾಡಿರೋ ನಿಮ್ಮೋಳು ಪ್ರಾಣ
ಲಿಂಗಪೂಜೆಯ ಮಾಡಿರೋ |ಪ|
ಗಂಗೆಯಮುನೆಗಳ ಸಂಗಮದೊಳು ಮಿಂದು
ಶೃಂಗಾಟಕದುಪರಿಯ ರಂಗಮಂಟಪದೊಳು
ವರಭಕ್ತಿ ಜಲವ ನೀಡಿ ಮಜ್ಜನಗೈದು
ವಿರತಿಗಂಧವನೆ ತೀಡಿ
ಕರಣೇಂದ್ರಿಯಗಳೆಂಬ ಮಿರುಗುವಕ್ಷತೆಯನಿ
ಟ್ಟರಿವೆಂಬ ನಿರ್ಮಲ ಸರಸಪುಷ್ಪವ ಸೂಡಿ |1|
ಹರುಷವೆಂಬುವ ಧೂಪವ ಸಮರ್ಪಿಸಿ
ಪರಬಿಂದು ರುಚಿದೀಪವ
ನಿರದೆತ್ತಿ ತ್ರಿಗುಣವೆಂಬ ವರತಾಂಬೂಲವ ಕೊಟ್ಟು |2|
ಕರದಿಷ್ಟಲಿಂಗವಿದೆ ಶರೀರದಲ್ಲಿ
ಪರವಸ್ತು ತಾನಾಗಿದೆ
ಹೊರಗೊಳಗೆರಡೆನದರಿವರಿವನೆ ಮೀರಿ
ಗುರುಸಿದ್ಧನಂಘ್ರಿಯೋಳ್ ಬೆರೆದೇಕಮಯವಾಗಿ |3|
-ಶ್ರೀ ಸರ್ಪಭೂಷಣ ಶಿವಯೋಗಿಗಳು
ಜನಪದದಲ್ಲಿ ಇಷ್ಟಲಿಂಗ ಪೂಜೆ | ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ |