Previous ಬಸವ ಬಸವಾಯೆಂದು...... ಲಿಂಗಪೂಜೆಯ ಮಾಡಿರೋ Next

ಜನಪದದಲ್ಲಿ ಇಷ್ಟಲಿಂಗ ಪೂಜೆ

*

ಲಿಂಗಪೂಜೆಯ ಮಾಡಲಿಲ್ಲಲ್ಲೋ ಮಂಗ
ಅದಕ ನಿನಗೊಲಿಯಲಿಲ್ಲೋ ಕೂಡಲಸಂಗ |ಪ|

ಮೊದಲಿಂದ ಕಡಿತನಕ ಬಂದೀ ನೀ ಹಿಂಗ
ಮಾನವನಾಗಿ ಹಿಂಗ ಮಾಡಿದರ ಹ್ಯಾಂಗ

ಈಚಲ ಮರದಂಗ ಉದ್ದಕ ಬೆಳದಿ
ಯೋಚನೆ ಮಾಡದೆ ಅಡ್ಡದಾರಿಯ ತುಳದಿ
ಆಚಾರವಂತರನು ಅತಿಯಾಗಿ ಕಾಡಿದಿ
ನೀಚ ಜನರೊಳಗೆ ನೀ ಒಂದಾಗಿ ಬೆರೆತಿ |1|

ಭಸ್ಮದ ಬೆರಳಚ್ಚು ಮೂಡಲಿಲ್ಲ ಹಣೆಗೆ
ಬಸವ ನಾಮಸ್ಮರಣೆ ಬರಲಿಲ್ಲ ಬಾಯ್ಗೆ
ಭಕ್ತಿಯ ನುಡಿಗಳು ಬೀಳಲಿಲ್ಲ ಕಿವಿಗೆ
ತತ್ವದ ತೆರೆಗಳು ಬಡಿಲಿಲ್ಲ ತಲೆಗೆ |2|

ಹೊಂದಿಕೊಂಡುಹೋದೆ ನೀ ಹೊಲಸಾದ ಚಟಕ
ಹಿರಿಯರ ಮಾತಮೀರಿ ಬಿದ್ದೀನೀ ಹಟಕ
ಒಮ್ಮೆಯಾದರೂ ಬರಲಿಲ್ಲ ಗುರುವಿನ ಮಠಕ
ಗುರುವಿನ ನೆನಿಲಿಲ್ಲ ನೀನೆಂತ ಕಟುಕ |3|

ನೀಚ ಬೈಗುಳ ಬೊಗಳಿತು ನಿನ್ನಯ ಬಾಯಿ
ನಿನಗಿಂತ ಮೇಲು ನಾಲ್ಕು ಕಾಲುಳ್ಳ ನಾಯಿ
ನಿನ್ನ ಕೃತಿಗಳ ಕಂಡು ಕೊರಗಿ ಕೊರಗಿ
ಕಣ್ಣೀರ ಹಾಕುವಳು ನಿನ್ನ ಹಡೆದ ತಾಯಿ |4|

ಇನ್ನಾದರೂ ನೀ ಅಡ್ಡದಾರಿಯ ಬಿಟ್ಟು
ಗುರುವಿನ ಮೇಲೆ ದಿವ್ಯ ನಂಬಿಕೆಯನಿಟ್ಟು
ಭಕ್ತಿಯ ಕೊಡುವ ಶಕ್ತಿಗೆ ಬೆಲೆಯನ್ನು ಕೊಟ್ಟು
ಗುರುಬಸವನ ನೆನೆಯೋ ಕೆಟ್ಟ ಬುದ್ದಿಯ ಬಿಟ್ಟು |5|

-ಜನಪದದ

ಪರಿವಿಡಿ (index)
Previous ಬಸವ ಬಸವಾಯೆಂದು...... ಲಿಂಗಪೂಜೆಯ ಮಾಡಿರೋ Next