ಅಕ್ಕನಾಗಮ್ಮನ ಜೋಗುಳ ಪದ

*

ಅಕ್ಕನಾಗಮ್ಮನ ಜೋಗುಳ ಪದ

ಜೋ ಜೋ ಎಂದು ತೂಗಿರಿ (ಶಿವ)ಶರಣಿಗೆ
ಜೋ ಎಂದು ತೂಗಿರಿ ಜನನಿಗೆ
ಜೋ ಎಂದು ಕ್ರಾಂತಿಯೋಗಿಗೆ
ಹಿಂಗೆ ಜೋ ಎಂದು ತೂಗಿರಿ ಅಕ್ಕನಾಗಮ್ಮಗೆ ಜೋ ಜೋ

ಬಾಗೇವಾಡಿ ಎಂಬ ಗ್ರಾಮದಲ್ಲಿ
ಮಾದರಸ ಮಾದಲಾಂಬಿಕೆಯರ ಹೊಟ್ಟೆಯಲ್ಲಿ
ಹೆಣ್ಣು ಮಕ್ಕಳ ಕುಲ ಉದ್ಧಾರಕ್ಕಾಗಿ
ಹಿಂಗೆ ಮರ್ತ್ಯಕ್ಕೆ ನೀನು ಅವತರಿಸಿ ಬಂದೇ ಜೋ ಜೋ |೧|

ಗೌರಮ್ಮ ಸಂಗಮ್ಮ ಶರಣಮ್ಮ ಬಂದು
ಬಾಲೆಯರೆಲ್ಲರೂ ಜಯ ಜಯವೆಂದು
ಬಾಲೆಗೆ ಹೆಸರಿಟ್ಟರು ಅಕ್ಕನಾಗವೆಂದು
ಹಿಂಗೆ ಮೂಲ ಮೂರುತಿ ನಿನಗೆ ಜಯವಾಗಲೆಂದು ಜೋ ಜೋ |೨|

ದಿನದಿನಕ್ಕೆ ಬಾಳೆಯ ಪರಿ ಬೆಳದಿ
ಶಿವಸ್ವಾಮಿಯೊಡನೆ ನೀ ಲಗ್ನವ ಆಗಿ
ಚೆನ್ನಬಸವನೆಂಬ ಪುತ್ರನ ಪಡೆದಿ
ಹಿಂಗೆ ಬಸವಣ್ಣನವರಿಗೆ ಗುರುವೆಂದು ತಿಳಿದಿ ಜೋ ಜೋ |೩|

ಅಕ್ಕಮಹಾದೇವಿ, ಗಂಗಮ್ಮತಾಯಿ ಚಿಕ್ಕ ನೀಲಮ್ಮಗೆ ತಾಯಿ ನೀನಾಗಿ
ಎಲ್ಲ ಶರಣರಿಂದ ಅನುಭಾವ ಪಡೆದ
ಹಿಂಗೆ ಕಲ್ಯಾಣ ಶರಣರೂ ಕೂಡಿ ಒಂದಾಗಿ ಜೋ ಜೋ |೪|

ಇಷ್ಟಲಿಂಗದಲ್ಲಿ ಪ್ರಾಣರ‍್ಪಣ ಮಾಡಿ
ಉರಿಯುಂಡ ಕರ್ಪೂರದಂತೆ ನೀನಾದಿ
ವಚನ ಸಾಹಿತ್ಯದ ರಕ್ಷಣೆ ಮಾಡಿದಿ,
ಹಿಂಗೆ ಗುರು ಬಸವ ಲಿಂಗನಲ್ಲಿ ಕೂಡಿ ಒಂದಾದಿ ಜೋ ಜೋ |೫|

-ವೀರಶೆಟ್ಟಿ ಇಮಡಾಪೂರ

ಅಕ್ಕನಾಗಮ್ಮನ ಜೋಗುಳ ಪದ

ತೂಗಿರಿ ತಾಯಿದೇರೆ| ತೂಗಿರಿ ಅಕ್ಕದೇರೆ
ತೂಗಿರಿ (ಶಿವ) ಶರಣ ಶರಣೇರೇ....
ತೂಗಿರಿ (ಶಿವ) ಶರಣ ಶರಣಿರೆಲ್ಲರೂ ಕೂಡಿ
ಶರಣಿ ನಾಗಮ್ಮನ ..........ತೂಗಿರಿ ನೀವು ತೂಗಿರಿ |೧|

ತಾಯಿ ತಂದಿನ ತೊರೆದು| ಶಿವಸ್ವಾಮಿ ಕೈ ಹಿಡಿದು
ಚೆನ್ನಬಸವನ ಪಡೆದೂ| ಚೆನ್ನಬಸವನ ಪಡೆದು
ಜನನಿ ನಾಗಮ್ಮನ ತೂಗಿರಿ ..........ತೂಗಿರಿ ನೀವು ತೂಗಿರಿ |೨|

ತನುವ ತೊಟ್ಟಿಲ ಮಾಡಿ| ಮನವ ಹಗ್ಗವ ಮಾಡಿ
ಜ್ಞಾನವೆ ಶಿಶು ಮಾಡಿ| ಜ್ಞಾನವೇ ಶಿಶು ಮಾಡಿ
ಜ್ಞಾನಿ ನಾಗಮ್ಮನ ..........ತೂಗಿರಿ ನೀವು ತೂಗಿರಿ |೩|

ಅಂಗವೇ ಅಷ್ಟಾವರಣ| ಪಂಚಚಾರವೇ ಪ್ರಾಣ
ಷಟಸ್ಥಲವೇ ಆತ್ಮ| ಘಟಸ್ಥಲವೇ ಆತ್ಮ
ಮಾಡಿದ ನಾಗಮ್ಮನ ..........ತೂಗಿರಿ ನೀವು ತೂಗಿರಿ |೪|

ಕಲ್ಯಾಣ ಕ್ರಾಂತಿಯಾಗಿ ಶರಣರೆಲ್ಲರೂ ಹೋತಿ|
ವಚನ ಸಾಹಿತ್ಯಕ್ಕಾಗಿ |ವಚನ ಸಾಹಿತ್ಯಕ್ಕಾಗಿ
ಹೋರಾಡಿದ ನಾಗಮ್ಮನ ..........ತೂಗಿರಿ ನೀವು ತೂಗಿರಿ |೫|

ಬಸವೇಶನ ಅಕ್ಕ | ಲಿಂಗ ನಿಷ್ಠಳು ಪಕ್ಕ|
ಕಿರ್ತಿ ಹೆಣ್ಣಿನ ಕುಲಕೆ| ಕೀರ್ತಿ ಹೆಣ್ನಿನ ಕುಲಕ
ಅಕ್ಕ ನಾಗಮ್ಮನ ..........ತೂಗಿರಿ ನೀವು ತೂಗಿರಿ |೬|

-ವೀರಶೆಟ್ಟಿ ಇಮಡಾಪೂರ

*
ಪರಿವಿಡಿ (index)
Previousಬಸವ ಧರಗೆ ಬಂದ ಜೋ ಜೋಅಲ್ಲಮ ಪ್ರಭುದೇವರ ಜೋಗುಳ ಪದNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.