Previous ಗುರು ಬಸವಣ್ಣನ ನೆನೆಯೋಣ ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ Next

ಕಲ್ಯಾಣ ನಾಮ

*

ಕಲ್ಯಾಣ ನಾಮ ಜಗಕೆಲ್ಲ ಪ್ರೇಮ

ಕಲ್ಯಾಣ ನಾಮ ಜಗಕೆಲ್ಲ ಪ್ರೇಮ
ಕಲ್ಯಾಣ ಧಾಮ ಜನಕೆಲ್ಲ ಸಾಮ |ಪ|

ಜಾತಿಮತವ ನಾಶಗೈದು ನೀತಿಪಥವ ತೋರಿ
ಮಾತಿನಂತೆ ನಡೆದು ಬಸವ ಜ್ಯೋತಿಯನ್ನು ಬಿರಿದ |1|

ಮಾಯೆಯನ್ನು ಗಾಯಗೊಳಿಸಿ ಶ್ರೇಯವನ್ನು ತೋರಿ
ಶೂನ್ಯ ಸ್ಥಾನದಲ್ಲಿ ಅಲ್ಲಮನ ತೋರಿದ |2|

ಜ್ಞಾನವೆಂಬ ಪ್ರಣತೆಯಲ್ಲಿ ಪ್ರಾಣಿಯಾಗಿ ಬಾಳಿ
ಜ್ಞಾನಜ್ಯೋತಿಯಾದ ಚೆನ್ನಬಸವಣ್ಣ ಬಾಳಿದ |3|

ಕರ್ಮವೊಂದೆ ಸಾಲದೆಂಬ ಮರ್ಮವನ್ನು ತಿಳಿದು
ಧರ್ಮಜ್ಞಾನ ಪಡೆದ ಸಿದ್ಧರಾಮನಿಂದ ಬೆಳೆದ |4|

ಶರಣ ಸತಿಗೆ ಲಿಂಗವೆ ಪತಿಯು ಎಂಬ ಪಥವ
ಹಿಡಿದ ಚೆನ್ನಮಲ್ಲದೇವಂಗೊಲಿದ ಅಕ್ಕನಿಂದ ನಲಿದ |5|

ಪರಿವಿಡಿ (index)
Previous ಗುರು ಬಸವಣ್ಣನ ನೆನೆಯೋಣ ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ Next