Previous ಸಿದ್ಧರಾಮೇಶ್ವರ ಜೋಗುಳ ಪದ ಹಳಕಟ್ಟಿಯವರ ಜೋಗುಳ ಪದ Next

ಅಕ್ಕಮಹಾದೇವಿ ಜೋಗುಳ ಪದ

*

ಅಕ್ಕಮಹಾದೇವಿ ಜೋಗುಳ ಪದ

ತೂಗಿರಿ ಶರಣರೆ ತೂಗಿರಿ ಶರಣೆಯರೇ
ತೂಗಿರಿ ಬಸವಾದಿ ಭಕ್ರೆ
ತೂಗಿರಿ ಬಸವಾದಿ ಭಕ್ತರೆಲ್ಲರು ಕೂಡಿ
ಅಕ್ಕ ಮಹಾದೇವಿಯ ತೂಗಿರಿ ನೀವು ತೂಗಿರಿ (1)

ಸುಮತಿ ನಿರ್ಮಲಶೆಟ್ಟಿ ಅವರ ಹೊಟ್ಟೆಯಲ್ಲಿ
ಹುಟ್ಟಿ ತಾರ್ಕಿಕ ಸುಖ ಬಿಟ್ಟ ತಾರ್ಕಿಕ ಖುಷಿ ಬಿಟ್ಟ
ಶರಣೆ ಮಹಾದೇವಿಯ ತೂಗಿರಿ ನೀವು ತೂಗಿರಿ (2)

ಕೌಶಿಕ ರಾಜನ ಸೊಕ್ಕ ಇಳಿಸಿದ ನೀನು
ಬುದ್ಧಿ ಕಲಿಸಿದಿ ಅವನ| ಬುದ್ಧಿವಂತೆ ತಾಯಿ
ತ್ಯಾಗಿ ಮಹಾದೇವಿಯ ತೂಗಿರಿ ನೀವು ತೂಗಿರಿ (3)

ಉಟ್ಟ ಸೀರಿಯ ಬಿಟ್ಟು ಮುಡಿಯ ಕೂದಲು
ಬಿಟ್ಟು ಕಾಮ ಕ್ರೋಧನ ಸುಟ್ಟು ಕಾಮ ಕ್ರೋಧನ ಸುಟ್ಟು ಯೋಗಿ
ಮಹಾದೇವಿಯ ತೂಗಿರಿ ನೀವು ತೂಗಿರಿ (4)

ತಾಯಿ ತಂದಿನ ಬಿಟ್ಟು ಕಲ್ಯಾಣಕ್ಕೆ ಹೊರಟಿ
ಬಸವೇಶ್ವರನ ಭೇಟಿ ಬಸವೇಶ್ವರನ ಭೇಟಿ
ಮಾಡಿದ ಮಹಾದೇವಿಯ ತೂಗಿರಿ ನೀವು ತೂಗಿರಿ (5)

ಅನುಭಾವ ಮಂಟಪದಲ್ಲಿ ಪರೀಕ್ಷೆಯಾಯಿತು
ಪ್ರಭುದೇವರ ಕೈಲ್ಲಿ ಪ್ರಭುದೇವರನ್ನು
ಗೆಲಿವ ವೈರಾಗಿ ಮಹಾದೇವಿಯ ತೂಗಿರಿ ನೀವು ತೂಗಿರಿ (6)

ಬಸವನೆ ತಾಯಿ ಎಂದು ಬಸವ ತಂದೆ ಎಂದು
ಬಸವನೆ ಗುರು ಎಂದು ಬಸವನೆ ಗುರು ಎಂದು
ನಂಬಿದ ಮಹಾದೇವಿಯ ತೂಗಿರಿ ನೀವು ತೂಗಿರಿ (7)

ಬಸವ ಕಲ್ಯಾಣದಿಂದ ಕದಳಿ ವನಕೆ ಬಂದು
ಚೆನ್ನ ಮಲ್ಲಿಕಾರ್ಜುನ ಗೊಲದಾ ಚೆನ್ನಮಲ್ಲಿಕಾರ್ಜುನನೋಳು
ಕೂಡಿದ ಮಹಾದೇವಿಯ ತೂಗಿರಿ ನೀವು ತೂಗಿರಿ (8)

-ವೀರಶೆಟ್ಟಿ ಇಮಡಾಪೂರ

*
ಪರಿವಿಡಿ (index)
Previous ಸಿದ್ಧರಾಮೇಶ್ವರ ಜೋಗುಳ ಪದ ಹಳಕಟ್ಟಿಯವರ ಜೋಗುಳ ಪದ Next