Previous ಲಿಂಗದೇವ ಸ್ತೋತ್ರ - 108 ಜಯತು ಜಯತು ಮಹಾದೇವಿ Next

ಜಯತು ಜಯತು ಬಸವಗುರೋ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಜಯತು ಜಯತು

ಜಯತು ಜಯತು ಬಸವಗುರೋ ಭಕ್ತ ಬಂಧು ಪಾಹಿಮಾಂ
ಕರುಣ ಹೃದಯ ತ್ಯಾಗಮಯ ಶರಣಲೋಲ ರಕ್ಷಮಾಂ || ಪ ||

ದೇವಸುತ ಕಾರಣಿಕ ಪ್ರಣವರೂಪಿನ್ ಪಾಹಿಮಾಂ
ಭಾವಜಹರ ಭವದೂರಕ ಶಕ್ತಿಯುಕ್ತ ರಕ್ಷಮಾಂ
ಭ್ರಾಂತಿರಹಿತ ಭಕ್ತಿಸಹಿತ ಶರಣಪ್ರೀತ ಪಾಹಿಮಾಂ
ಸ್ಫೂರ್ತಿದಾತ ಕೀರ್ತಿಭರಿತ ಜ್ಞಾನಮೂರ್ತೆ ರಕ್ಷಮಾಂ || ೧ ||

ಅಭಯ ಹಸ್ತ ಶುಭದಾಯಕ ಮಂತ್ರ ಪುರುಷ ಪಾಹಿಮಾಂ
ಸುಭಗಗಾತ್ರ ಪರಮತೃಪ್ತ ಶಾಂತಮೂರ್ತೆ ರಕ್ಷಮಾಂ
ನಿರ್ಮಲಾಂಗ ಕರ್ಮರಹಿತ ಯೋಗಿರಾಜ ಪಾಹಿಮಾಂ
ಸೌಮ್ಯಲಾಸ್ಯವದನ ಸಹಿತ ನಮ್ರಮೂರ್ತೆ ರಕ್ಷಮಾಂ || ೨ ||

ಸಾಮ್ಯವಾದಿನ್ ಕ್ರಾಂತಿನಿಧೇ ದಲಿತ ಪ್ರೀತ ಪಾಹಿಮಾಂ
ಧೀಮನ್ಮತೇ ಸತ್ಯಜ್ಯೋತಿ ತತ್ತ್ವ ನಿಷ್ಠ ರಕ್ಷಮಾಂ
ಕರ್ಮಹರಣ ಚರಣಯುಕ್ತ ಶಿವನಯನ ಹೇ ಪಾಹಿಮಾಂ
ಸಚ್ಚಿದಾನಂದಸುತ ಬಸವಗುರೋ ರಕ್ಷಮಾಂ || ೩ ||

ಪರಿವಿಡಿ (index)
Previous ಲಿಂಗದೇವ ಸ್ತೋತ್ರ - 108 ಜಯತು ಜಯತು ಮಹಾದೇವಿ Next