*
ಹೂವ ಸೂರ‍್ಯಾಡೋಣ ದಂಪತಿಗಳ ಮೇಲೆ
ಹೂವ ಸೂರ‍್ಯಾಡೋಣ ದಂಪತಿಗಳ ಮೇಲೆ
ಶುಭ ಹರಸುತ ನಾವು ಹೂವ ಸೂಯ್ಯಾಡೋಣ || ಪ ||
ಗುರು ಬಸವಣ್ಣನ ಶ್ರೀ ರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು || 1 ||
ಗುರುಲಿಂಗಜಂಗಮದ ಕಾರುಣ್ಯವಿರಲೆಂದು
ಶರಣ ಬಂಧುಗಳೆಲ್ಲ ಒಂದಾಗಿ ಹರಸಿ || 2 ||
ಆಯುಷ್ಯ, ಆರೋಗ್ಯ ಐಶ್ವಯ್ಯ ಸಂತಾನ
ಸಂವೃದ್ದಿ ಸಂತೃಪ್ತಿ ಹರಿದು ತಾ ಬರಲೆಂದು. || 3 ||
ಗಣ ಸಾಕ್ಷಿಯ ನಡುವೆ ದಂಪತಿಗಳಾಗಿ
ಶರಣರ ಪಥದಲ್ಲಿ ಸಾಗುವ ಜೋಡಿಯ ಮೇಲೆ || 4 ||
ವಿವಾಹ ವಾರ್ಷಿಕೋತ್ಸವ ಸಂದರ್ಭದ ಹಾಡುಗಳು.
(ದಂಪತಿಗಳ ಮೇಲೆ ಎನ್ನುವಾಗ ಹೆಸರು ಸಹ ಹೇಳಬಹುದು. )
ಬೆಳಗಿರಿ ಬೆಳಗಿರಿ, ಆರತಿ ಬೆಳಗಿರಿ
ಬೆಳಗಿರಿ ಬೆಳಗಿರಿ, ಆರತಿ ಬೆಳಗಿರಿ
ಹರಸಿರಿ ಶುಭವನು ದಂಪತಿಗಳಿಗೆ ||ಪ||
ಲಿಂಗದೇವನ ಕರುಣೆ ಕಾಪಾಡಲೆಂದು
ಗುರು ಬಸವಣ್ಣನ ರಕ್ಷೆಯು ಇರಲೆಂದು || 1 ||
ಆಯುಷ್ಯ - ಆರೋಗ್ಯ ನಿಮಗಿರಲಿ ಎಂದು
ಸಂಪತ್ತು- ಸಂತಾನ ನಿಮಗಾಗಲೆಂದು || 2 ||
ಮನೆ ಮನ ತುಂಬುವ ಮಡದಿಯಾಗಮ್ಮ
ಹಿರಿಯರ ಸಲಹುವ ಮಗಳಾಗಮ್ಮ || 3 ||
ಸತಿಸುತ ಹಿರಿಯರ ಅರ್ತಿಯಿಂ ಪೊರೆವ
ಕೀರ್ತಿಯ ಕುವರ ನೀನಾಗು ಅಣ್ಣ || 4 ||
ನಯನವೆರಡಾದರೂ ನೋಟವೊಂದಾಗುವೊಲು
ಕಾಯವೆರಡಾದರೂ ಭಾವವೊಂದಾಗಲೆಂದು || 5 ||
ಶರಣರ ಪಥದಲ್ಲಿ ಮುನ್ನಡೆಯಿರೆಂದು.
ಸಚ್ಚಿದಾನಂದನ ಸ್ಮರಿಸುತ ಹರಸಿ || 6 ||
*