*
ಬಸವೇಶ್ವರರ ಜೋಗುಳ ಪದ
ಜೋ ಜೋ ಜಗಜ್ಯೋತಿ ಬಸವೇಶ
ಜಗದೋಳು ತೋರಿದ ನಿನ್ನ ಪ್ರಕಾಶ
ನಿನ್ನ ಸ್ಮರಣೆಯಿಂದ ಪಾಪ ವಿನಾಶ
ಹಿಂಗಾ ಜೋ ಎಂದು ತೂಗುವೆ ಬಸವ ಜಗದೀಶ ಜೋ ಜೋ
ಮರ್ತ್ಯಲೋಕದ ಮನೆ ಹಾಳು ಬಿದ್ದಿರಲು
ಶತ್ರು ಪರಶಿವನಿಗೆ ಚಿಂತೆಯಾಗಲು
ತುರ್ತಾಗಿ ಹೊಗೆಂದು ಅಜ್ಞಾ ವಿಧಿಸಲು
ಹಿಂಗಾ ಭರದಿಂದ ಬಂದು ಬಸವ ಭವದೋಳು ಜೋ ಜೋ.
ಬಿಜಾಪುರ ಜಿಲ್ಲೆ ಬಾಗೇವಾಡಿಯಲ್ಲಿ
ಮಾದರಸ ಮಾದಲಾಂಬಿಕೆ ಗರ್ಭದಲ್ಲಿ
ಅಕ್ಷಯ ತೃತೀಯ ವೈಶಾಖದಲ್ಲಿ
ಹಿಂಗಾ ಜಗಜ್ಯೋತಿ ಬಸವೇಶ ಹುಟ್ಟದರಲ್ಲಿ ಜೋ ಜೋ.
(ಶಿವ)ಮಂಗಲ ರೂಪಿ ಶಿಶುವೊಂದು ಹುಟ್ಟಿದ ಕ್ಷಣದೋಳು
ಝೆಂಕಾರ ಮೊಳಗಿತು ಬೋಲೋಕದೋಳು
ಬಂದಾರು ಜಾತವೇದ ಮುನಿಗಳು
ಹಿಂಗಾ ಕಂದನಿಗೆ ಮಾಡಿದರು ಆಶೀರ್ವಾದ ಜೋ ಜೋ.
ಮೈಮೇಲೆ ವಿಭೂತಿ ರುದ್ರಾಕ್ಷಿಯ ಧಿರಿಸಿ
ಓಂ ನಮ: ಶಿವಾಯ ಮಂತ್ರವ ಪಠಿಸಿ
ಭೋಲೋಕ ಉದ್ಧಾರ ಮಾಡೆಂದು ತಿಳಿಸಿ
ಬಸವೇಶ್ವರನೆಂದು ಹೆಸರಿಟ್ಟು ಹರಿಸಿ ಜೋ ಜೋ.
ಬಂಧು ಬಳಗವೆಲ್ಲ ಸಂಭ್ರಮದಿ ಕರೆಸಿ (ಕಲೆಸಿ)
ಬಂಗಾರ ಉಂಗುರ ಉಡುಗೊರೆ ತರಿಸಿ
ಶೃಂಗಾರ ತೊಟ್ಟಿಲು ತೂಗಿದರಂದು
ಹಿಂಗಾ ಬಸವೇಶ ಜೋಗುಳ ಪಾಡಿದರಂದು ಜೋ ಜೋ
ಶುಕ್ಲ ಪಕ್ಷದ ಚಂದ್ರಮನಂತೆ ಹೊಳಿದು
ತಾಯ ತಂದಿಯರಿಗೆ ಮುದ್ದಾಗಿ ಬೆಳೆದು
ವಿದ್ಯಾ ಬುದ್ಧಿಗಳೆಲ್ಲ ಗುರುವಿನಂ ಪಡೆದ
ಹಿಂಗೆ ಬಾಲಕ ಬಸವೇಶ್ವರಗ ಎಂಟೋರ್ಷ ಮುಗಿದು ಜೋ ಜೋ
ಒಂಬತ್ತು ವರ್ಷವಾ ತುಂಬುವದರೊಳಗ
ಮುಂಜಿಯ ಸಂಸ್ಕಾರ ಬ್ರಾಹ್ಮಣ ಮತದೋಳಗೆ
ರೂಢಿಯ ಪ್ರಕಾರ ಬಾಲಕ ಬಸವಗ
ಹಿಂಗ ಮುಂಜಿಮಾಡಲು ತಯ್ಯಾರಾಗಿದರಾಗ ಜೋ ಜೋ
ಮುಂಜಿಯಾಗಲು ಬಸವೇಶ ಒಪ್ಪಿಲ್ಲ
ಮನೆ ಬಿಟ್ಟು ಕೂಡಲಸಂಗಮಕ್ಕ ಹೊದನಲ್ಲ
ಅಕ್ಕ ನಾಗಮ್ಮ ತಮ್ಮನ ಜೊತೆಗೆ ಹೋದಳಲ್ಲ
ಹಿಂಗ ಸಂಗನ ಕರುಣೆ ಪಡೆದಿದರಲ್ಲ ಜೋ ಜೋ.
ಆಶ್ರಯ ಕೊಟ್ಟು ಗುರು ಜಾತವೇದರು
ವಿದ್ಯಾಬುದ್ಧಿ ಜ್ಞಾನ ಪೂರ್ತಿ ಕಲಿಸಿದರು
ಇಪ್ಪತ್ತೆರಡ ವರ್ಷಕ್ಕೆ ಮದುವೆ ಮಾಡಿದರು
ಹಿಂಗ ಕಲ್ಯಾಣಕ್ಕೆ ಹೊಗೆಂದು ಆಶಿರ್ವದಿಸಿದರು ಜೋ ಜೋ.
ಬಸವೇಶ ಕೂಡಲ ಸಂಗಮದಿಂದ
ಕಲ್ಯಾಣ ನಗರಕ್ಕೆ ಭರದಿಂದ ಬಂದ
ಸೋದರ ಮಾವನ ಆಶ್ರಯ ಪಡೆದಾ
ಹಿಂಗಾ ಬಿಜ್ಜಳ ರಾಜನ ಮಹಾ ಮಂತ್ರಿಯಾದ ಜೋ ಜೋ
ವರ್ಣಾಶ್ರಮವನ್ನು ಕಿತ್ತಿ ಒಗಿದಿದ
ಸರ್ವ ಜಾತಿಗಳಿಗೆ ಲಿಂಗ ಕಟ್ಟಿದ ಬಸವಣ್ಣ
ಒಂದೇ ದೇವರ ಪೂಜೆ ಮಾಡಲು ಕಲಿಸಿದ
ಹಿಂಗೆ ಲಿಂಗವಂತ ಧರ್ಮ ಸ್ಥಾಪನೆ ಮಾಡಿದ ಜೋ ಜೋ
ಅನುಭವ ಮಂಟಪ ಕಟ್ಟಿ ಧರ್ಮ ಬೆಳೆಸಿದ
ಅನುಭವದಿ ವಚನ ಸಾಹಿತ್ಯ ರಚಿಸಿದ
ಮಧುವರಸ ಹರಳಯ್ಯಾಗಾ ಲಿಂಗ ಕಟ್ಟಿದ ಹಿಂಗೆ
ಅವರ ಮಕ್ಕಳಿಗೆ ಮದುವೆ ಮಾಡಿದ ಜೋ ಜೋ
ಮದುವರಸ ಬ್ರಾಹ್ಮಣ ಮಂತ್ರಿ ಮಗಳಿಗೆ
ಕೊಟ್ಟು ಸಮಗಾರ ಹರಳಯ್ಯನ ಮಗನಿಗೆ
ಮದುವೆ ಮಾಡಿದ್ದು ತಿಳದು ಬಿಜ್ಝಳ ರಾಜನಿಗೆ
ಹಿಂಗೆ ಬಿಜ್ಜಳ ಬಸವೇಶಗ ಕರಸಿದ ಸಭೆಗೆ ಜೋ ಜೋ.
ಕೀಳು ಕುಲದ ಸಮಗಾರನ ಮಗನಿಗೆ
ಮೇಲ್ವರ್ಗದ ಬ್ರಾಹ್ಮಣನ ಮಗಳಿಗೆ
ಅಂತರ್ಜಾತಿ ಮದುವೆ ಮಾಡಿದಿ ಹೇಗೆ
ಹಿಂಗೆ ತಪ್ಪು ಮಾಡಿರುವುದು ಸಲ್ಲದು ನಿಮಗೆ ಜೋ ಜೋ
ಮಧುವರಸ ಬ್ರಾಹ್ಮಣನಾಗಿ ಉಳಿದಿಲ್ಲ
ಹರಳಯ್ಯಾ ಕೀಳು ಕುಲ ಅಳಿದಿದ್ದನಲಲ
ಇಬ್ಬರೂ ಲಿಂಗ ದೀಕ್ಷೆ ಪಡೆದಿದ್ದರಲ್ಲ
ಹಿಂಗೆ ಲಿಂಗವಂತರ ಮದುವೆ ಮಾಡಿದ್ದು ತಪ್ಪಲ್ಲ ಜೋ ಜೋ.
ಬಿಜ್ಜಳ ಬಸವಣ್ಣಗೆ ಹೇಳಿದನಲ್ಲ
ನೀವು ಮಾಡಿದ ತಪ್ಪು ಮನ್ನಿಸುವುದಿಲ್ಲ
ಮಹಾಮಂತ್ರಿಯ ಪದವಿಯ ತ್ಯೆಜಿಸಿರಿ ಮೊದಲ
ಹಿಂಗ ಅಜ್ಞಾ ಮಾಡಿ ಕಲ್ಯಾಣ ಬಿಡಿಸಿದ ನಲ್ಲಿ ಜೋ ಜೋ
ಬಿಜ್ಜಳ ರಾಜನ ಆಜ್ಷೆ ಮನ್ನಿಸಿದ ಸತ್ಯಕ್ಕಾಗಿ
ಮಂತ್ರಿ ಪದವಿ ತ್ಯಜಿಸಿದ| ಮಧ್ಯರಾತ್ರಿ ಕಲ್ಯಾಣ ಬಿಟ್ಟು ಹೊರಟಿದ
ಹಿಂಗ ಮತ್ತೆ ಕೂಡಲಸಂಗಮಕ್ಕೆ ಹೊರಟು ಹೋದ ಜೋ ಜೋ
ಕೂಡಲ ಸಂಗಮ ಕ್ಷೇತ್ರದಲ್ಲಿ ಐಕ್ಯಾನಾದ
ಕಲ್ಯಾಣ ಕ್ರಾಂತಿಗೆ ಕಾರಣನಾದ
ಜಾತಿ ಸುಟ್ಟು ಭವಿ ಭಕ್ತರ ಮಾಡಿ
ಹಿಂಗಾ ಹೆಣ್ಣು ಮಕ್ಕಳಿಗೆಲ್ಲಾ ಹಕ್ಕು ಕೊಡಿಸಿದ ಜೋ ಜೋ.
ಕಲ್ಯಾಣವೆಂಬುದು ಕೈಲಾಸವಾಯಿತು
ಲಿಂಗವಂತ ಧರ್ಮ ಕೇಂದ್ರವೆನಿಸಿತು
ಇಷ್ಟಲಿಂಗದ ಘಟ್ಯಾಗಿ ಉಳಿದಿತು
ಹಿಂಗ ವಚನಸಾಹಿತ್ಯವೆ ಧರ್ಮ ಗ್ರಂಥವಾಯಿತು ಜೋ ಜೋ.
ವಿಶ್ವಗುರು ಬಸವೇಶನ ಜೋಗುಳವ
ವಿಶ್ವಾಸದಿಂದಲಿ ಹರುಷದಿ ಕೇಳುವಾ
ಶರಣರು ಪಡೆದಾರು ಮಕ್ಕಳ ಫಲ
ಬಸವನೆಂದು ಹೆಸರಿಟ್ಟು ಕರೆಯಿರಿ ಜೋ ಜೋ.
*