Previous ಬಾಲೆಗೆ ಪುಷ್ಪವೃಷ್ಟಿ ದಂಪತಿಗಳ ಮೇಲೆ ಪುಷ್ಪವೃಷ್ಟಿ Next

ಪುಷ್ಪವತಿಯಾದ ಬಾಲೆಗೆ ಆರತಿ

*

ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ

ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಹರಸಿರಿ ಶುಭವನು ಮುದ್ದು ಕುವರಿಗೆ ||ಪ||

ಲಿಂಗದೇವನ ಕರುಣೆ ಕಾಪಾಡಲೆಂದು
ಗುರುಬಸವಣ್ಣನ ಶ್ರೀ ರಕ್ಷೆ ಇರಲೆಂದು
ಆಯುಷ್ಯ ಆರೋಗ್ಯ ನಿನಗಿರಲಿ ಎಂದು
ಸದ್ವಿದ್ಯೆ ಸರ್ತಿ ನಿನಗಾಗಲೆಂದು ||1 ||

ಮನೆಮನ ತುಂಬುವ ಜ್ಯೋತಿ ನೀನಾಗು
ಧರ್ಮದಿ ನಡೆಯುವ ದಿವ್ಯ ಚೇತನವಾಗು
ಗುರು ಹಿರಿಯರೆಲ್ಲರ ಅರ್ತಿಯಿಂ ಪೊರೆವ
ಕೀರ್ತಿಯ ಕುವರಿ ನೀನಾಗು ಕಂದಾ || 2||

ಮಾನವ ಜನ್ಮದ ಮಹತಿಯ ಅರಿತು
ಮರವನು ತೊಡೆದು ದೇವಗೆ ಬಾಗಿ
ಶರಣರ ಪಥದಲ್ಲಿ ಮುನ್ನಡೆಯಲೆಂದು
ಸಚ್ಚಿದಾನಂದನ ಸರಿಸುತ ಹರಸಿ ||13||

(ಹುಡುಗಿ ದೊಡ್ಡವಳಾದಾಗಿನ ಸಮಾರಂಭದ ಹಾಡುಗಳು)

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಬಾಲೆಗೆ ಪುಷ್ಪವೃಷ್ಟಿ ದಂಪತಿಗಳ ಮೇಲೆ ಪುಷ್ಪವೃಷ್ಟಿ Next