*
ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ
ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ
ಬೆಳೆಸಲಿ ಬೆಳೆಸಲಿ ವಿಶ್ವ ಪ್ರೇಮ ಬೆಳೆಸಲಿ ||ಪ||
ಮೇಲು ಕೀಳೆಂಬ ಅಸಮತೆ ಅಳಿಯಲಿ
ಎಲ್ಲರು ಸಮರೆಂಬ ಸದ್ಭಾವ ಮೂಡಲಿ
ಬಲ್ಲಿದ ಬಡವ ಭೇದ ಭಾವ ತೊಲಗಲಿ
ಕ್ಷುಲ್ಲಕ ಬುದ್ದಿಯ ಕತ್ತಲೆಯು ಹರಿಯಲಿ ||1||
'ಕಾಯಕವೇ ಕೈಲಾಸ' ಮಂತ್ರವು ನಲಿಯಲಿ
'ದಯವೇ ಧರ್ಮದ ಮೂಲ' ಭಾವವು ಬೆಳೆಯಲಿ
ಶಾಂತಿ ಸಮತೆಗಳು ಲೋಕದಿ ನೆಲೆಸಲಿ
ಈ ಇಳೆಯೊಳಗೆ ನಾಕವ ಇಳಿಸಲಿ ||2||
ಕರ್ತನ ಮಹಿಮೆಯ ಸರ್ವರು ಹಾಡಲಿ
ಮರ್ತ್ಯದ ಬಾಳೊಳು ಎಲ್ಲರು ಸಲ್ಲಲಿ
ಗುರು ಬಸವಣ್ಣನ ವಚನಾಮೃತದಲಿ
ಪರಮಾನಂದವ ಮನುಕುಲ ಪಡೆಯಲಿ || 3 ||
ನತ ಜನ ರಕ್ಷಕ ಗುರು ಬಸವಗೆ ನಮೋ
ಪತಿತೋದ್ದಾರಕ ಮಹ ಕರುಣಿಗೆ ನಮೋ
ಶ್ರೀಲಿಂಗದೇವನ ಕಂದಗೆ ನಮೋ ನಮೋ
ಮಂಗಲಮಯ ವಿಶ್ವಜ್ಯೋತಿಗೆ ನಮೋ ನಮೋ || 4 ||
*