Previous ಜೋ ಜೋ ಜೋ ಕಂದ ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ Next

ಹೂವ ಸೂರ‍್ಯಾಡೋಣ ಮುದ್ದು ಕಂದನ ಮೇಲೆ

*

ಹೂವ ಸೂರ‍್ಯಾಡೋಣ ಮುದ್ದು ಕಂದನ ಮೇಲೆ

ಹೂವ ಸೂರ‍್ಯಾಡೋಣ ಮುದ್ದು ಕಂದನ/ಳ ಮೇಲೆ *
ಶುಭ ಹರಸುತ ನಾವು, ಹೂವ ಸೂರ‍್ಯಾಡೋಣ || ಪ ||

ಗುರು ಬಸವಣ್ಣನ ಶ್ರೀರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು |1|

ಗುರುಲಿಂಗ ಜಂಗಮದ ಕಾರುಣ್ಯವಿರಲೆಂದು
ಶರಣ ಬಂಧುಗಳೆಲ್ಲ ಒಂದಾಗಿ ಹರಸಿ |2|

ಆಯುಷ್ಯ ಆರೋಗ್ಯ ಐಶ್ವರ ಸದ್ವಿದ್ಯೆ
ಸಂವೃದ್ದಿ ಸಂತೃಪ್ತಿ ಹರಿದು ತಾ ಬರಲೆಂದು |3|

ಆಚಾರಕ್ಕರಸಾಗು ನೀತಿಗೆ ವಿಭುವಾಗು
ಮಾತಿನಲಿ ಚೂಡಾಮಣಿಯಾಗು ಎಂದ್ಹರಸಿ |4|

ಹೆತ್ತವರ‍್ಗೆ ಮುತ್ತಾಗಿ ವಂಶಕ್ಕೆ ಬೆಳಕಾಗಿ
ಸಚ್ಚಿದಾನಂದನ ಕಾರುಣ್ಯ ಹೊಂದಲೆಂದು |5|

* ಮುದ್ದು ಕಂದನ/ಳ ಮೇಲೆ ಎನ್ನುವ ಬದಲು ವ್ಯಕ್ತಿಯ ಹೆಸರು ಸಹ ಹೇಳಬಹುದು.

*
ಪರಿವಿಡಿ (index)
Previous ಜೋ ಜೋ ಜೋ ಕಂದ ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ Next