ಬೆಳಗಿರಿ ಬೆಳಗಿರಿ ಮಂಗಲದಾರತಿ
|
|
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಗುರುವಿಗೆ ಮಂಗಲಗೀತೆ
ಬೆಳಗಿರಿ ಬೆಳಗಿರಿ ಮಂಗಲದಾರತಿ
ಬೆಳಗಿರಿ ಬೆಳಗಿರಿ ಮಂಗಲದಾರತಿ
ಜಂಗಮ ಜ್ಯೋತಿ ಮಂಗಳಮೂರ್ತಿಗೆ || ಪ ||
ಬಸವಾದಿ ಪ್ರಮಥರ ಪಥವನು ಹಿಡಿದು
ಕುಸುಮಗಳಾಗಿಸಿ ತನು-ಮನ-ಪ್ರಾಣವ
ನಂಬಿದ ಭಕ್ತರ ಮುನ್ನಡೆಸಲೆಂದು
ಇಂಬಿನಿಂ ಜಂಗಮ ಲಾಂಛನ ತೊಟ್ಟಿಹ || ೧ ||
ನಾನು-ನನ್ನದೆಂಬ ಮಮಕಾರವಳಿದು
ಎಲ್ಲವೂ ದೇವನದೆಂಬ ಶರಣಭಾವ ಉಳಿದು
ಎಲ್ಲರವ ನಾನೆಂಬ ವಿನಯಭಾವ ಬಲಿದು
ಎಲ್ಲರು ನನ್ನವರೆಂಬ ಭೂಮಭಾವ ಬೆಳೆದ || ೨ ||
ಆಯುಷ್ಯ-ಆರೋಗ್ಯ ನಿಮಗಿರಲಿ ಎಂದು
ಸತ್ಕೀರ್ತಿ-ಸಂಪದ ನಿಮಗಾಗಲೆಂದು
ಗುರು ಬಸವೇಶನ ರಕ್ಷೆಯು ಇರಲೆಂದು
ಸಚ್ಚಿದಾನಂದನ ಬೇಡುವೆವಾವಿಂದು || ೩ ||