Previous ಬಸವೇಶ್ವರರ ಜೋಗುಳ ಪದ-1 ಬಸವ ಧರಗೆ ಬಂದ ಜೋ ಜೋ Next

ಬಸವೇಶ್ವರರ ಜೋಗುಳ ಪದ

*

ಬಸವ ಜೋಗುಳ ಪದ

ಮಾದಲಾಂಬಿಕೆಯ ಉದರದಿ ಜನಿಸಿ
ಉಪನಯನವನ್ನು ಮುದದಿಂದ ತ್ಯಜಿಸಿ
ಕಂದಾಚಾರಗಳನ್ನು ಮೂಲೆಗೆ ಸರಿಸಿ
ಹಿಂಗೆ ಹೊರಟಾನು ಬಸವ ಸದ್ಗುರುವಿನ ಅರಸಿ ಜೋ ಜೋ

ಗುರುಕುಲದಲ್ಲಿ ಅಧ್ಯಯನ ಮಾಡಿ
ಸಂಗಮನಾಥನ ಸೇವೆ ಅನುದಿನ ಮಾಡಿ
ಸತ್ಯದ ಶೋಧವ ನಿತ್ಯವೂ ಮಾಡಿ
ಹಿಂಗೆ ಗುರುಲಿಂಗ ಜಂಗಮರ ದಾಸೋಹವ ಮಾಡಿ ಜೋ ಜೋ

ಸಂಗಮನಾಥನ ಆಜ್ಞೆಯ ಪಡೆದು
ಜಾತವೇದರ ಹರಕೆಯ ಪಡೆದು
ಲೋಕ ಕಲ್ಯಾಣವ ಮನದಲ್ಲಿ ತಳೆದು
ಹಿಂಗೆ ಕಲ್ಯಾಣ ಪುರಕ್ಕೆ ಬಸವತಾನೈದು ಜೋ ಜೋ

ಇಷ್ಟಲಿಂಗವ ಕೈಯಲ್ಲಿ ಕೊಟ್ಟು
ಅಷ್ಟು ಜಾತಿಗಳ ಮಾಡಿ ಒಕ್ಕಟ್ಟು
ಹಿಂಗೆ ಏಕ ದೇವ ಪೂಜೆ ಜನರ... ಜೋ ಜೋ

ಬಿಜ್ಜಳ ರಾಜನ ಪ್ರಧಾನಿಯಾಗಿ
ಅನುಭವ ಮಂಟಪದ ಕರ್ತೃ ಅವರಾಗಿ
ಕಲ್ಯಾಣ ಕ್ರಾಂತಿಯ ಮೂಲ ತಾನಾಗಿ
ಹಿಂಗೆ ಜಗಜ್ಯೋತಿ ಬಸವನೆಂದು ಪ್ರಖ್ಯಾತನಾಗಿ ಜೋ ಜೋ.

ಬಸವ ಜಯಂತಿಗೆ ಬಸವ ಜೋಗುಳ

ತೂಗೋಣ ಬನ್ನಿರೆ ಗುರು ಬಸವೇಶನ
ತೂಗೋಣ ಬನ್ನಿರೆ ಅಪ್ಪ ಬಸವಣ್ಣನ
ತೂಗೋಣ ಬನ್ನಿರೆ ಕರ್ತನ ಕಂದನ
ತೂಗೋಣ ಬನ್ನಿರೆ ಸ್ತ್ರೀ ಕುಲೋದ್ಧಾರಕನ

ಹೃದಯದ ತೊಟ್ಟಿಲಲ್ಲಿ ಮಲಗಿಸಿ
ಸಮತೆಯೆಂಬ ಹಗ್ಗವ ಕಟ್ಟಿ
ವಚನ ಪುಷ್ಪದ ಮಾಲೆಯ ಸುತ್ತಿ
ಭಕ್ತಿಯೆಂಬ ಆರತಿ ಎತ್ತಿ

ನಮಗಾಗಿ ಮನೆಯನು ತೊರೆದವನಿವನು
ಸ್ತ್ರೀ ಕುಲಕೆ ಕಣ್ಣನ್ನು ನೀಡಿದನಿವನಿವನು
ತೋಡೋಣ ನಾವು ಛಲವನು
ತೀರಿಸುವ ಗುರು ಋಣವನು

ಬಸವ ತತ್ವ ಜಗದ ತೊಟ್ಟಿಲ ...
ಬೆಳಗಲಿ ಕೀರ್ತಿಯು ಚಿರಕಾಲ...
ತೋಗೋಣ ಬನ್ನಿರಿ ಎಲ್ಲವ...
ಹಾಡೋಣ ಬನ್ನಿರಿ..

-ವೀರಶೆಟ್ಟಿ ಇಮಡಾಪೂರ

*
ಪರಿವಿಡಿ (index)
Previous ಬಸವೇಶ್ವರರ ಜೋಗುಳ ಪದ-1 ಬಸವ ಧರಗೆ ಬಂದ ಜೋ ಜೋ Next