ಶಿವಯೋಗಿ ಸಿದ್ಧರಾಮೇಶ್ವರ ಜೋಗುಳ ಪದ
|
|
*
ಶಿವಯೋಗಿ ಸಿದ್ಧರಾಮೇಶ್ವರ ಜೋಗುಳ ಪದ
ಜೋ ಜೋ (ಶಿವ) ಸಿದ್ಧರಾಮೇಶ್ವರ
ಈ ಭವಕ್ಕೆ ಬಂದಿದಿ ಭಕ್ತಿ ಮಹೇಶ
ಭೋಲೋಕ ಮಾಡಿದ ಭುವನ ಕೈಲಾಸ
ಹಿಂಗಾ ಜೋ ಎಂದು ತೂಗುವೆ ಮನಕೆ ಸಂತೋಷ ಜೋ ಜೋ (1)
ದರಿಯೋಳು ಸೊನ್ನಲಗಿ ಪುಣ್ಯ ಸ್ಥಳದೋಳು
ಸುಗ್ಗವ್ವೆ ಮುದ್ದೆ ಗೌಡರು ಹಗಲಿರುಳು
ಕಾಲಕಳೆಯುವರು ಶಿವಧ್ಯಾನದೋಳು
ಮಕ್ಕಳಿಲ್ಲದಕ್ಕಾಗಿ ಚಿಂತಿ ಮನದೋಳು ಜೋ ಜೋ (2)
ರೇವಣಸಿದ್ಧೇಶ್ವರರು ಒಂದಾನೊಂದಿನ
ಇವರ ಮನಗೆ ಬಂದು ಕೊಟ್ಟು ದರುಶನ
ಪೂಜೆ ಅನುಷ್ಠಾನ ಮುಗಿಸಿದರು ಭಿನ್ನ(ಚೆನ್ನ)
ಹಿಂಗ ಮಕ್ಕಳ ಸಲವಾಗಿ ಕೊಟ್ಟಾರು ವರವಾ ಜೋ ಜೋ (3)
ಸುಗ್ಗವೆ ಮುದ್ದೆಗೌಡರ ಮನೆಯೋಳು
ಮುದ್ದು ಮಗನು ಜನಿಸಿರಲು ಆನಂದ ಮೊಳಗಿತು
ಸೊನ್ನಲಾ ಪುರದೊಳು
ಹಿಂಗಾ ಮಂಗಲ ಮುತೈದೇರು ಪಾಡಿ ಜೋಗುಳ ಜೋ ಜೋ. (4)
ಶಿವರೂಪಿ ಶಿಶುವಿಗೆ ವಿಭೂತಿ ಧರಿಸಿ
ಅಷ್ಟಾರಣ ಎಂಬ ಬಟ್ಟೆಯ ತೊಡಿಸಿ
ಓಂ ನಮ: ಶಿವಾಯ ಮಂತ್ರವ ಜಪಿಸಿ
ಹಿಂಗಾ ಸಿದ್ಧಾರಾಮನೆಂದು ಹೆಸರಿಟ್ಟು ಹರಿಸಿ ಜೋ ಜೋ. (5)
-ವೀರಶೆಟ್ಟಿ ಇಮಡಾಪೂರ
*