Previous ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ ಜಯ ಗುರು ಬಸವಾ Next

ಧರ್ಮಗುರು ಬಸವ ಮಂಗಲ

*

ಜ್ಯೋತಿ ಜಗವ ಬೆಳಗೆ


ಜ್ಯೋತಿ ಜಗವ ಬೆಳಗೆ ಬಸವನಾ
ಜ್ಯೋತಿ ಜಗವ ಬೆಳಗೆ ||ಪ||

ಧರ್ಮಾಗಸದಲಿ ನಿಶೆಯು ಕವಿದಿರಲು
ಬಾಲ ರವಿಯೋಲು ಚದುರಿಸ ಬಂದಾ ||ಅ.ಪ||

ಮೂಢ ರೂಢಿಯ ಬಂಧನ ಬಿಗಿದಿರೆ
ಮುಗ್ಧ ಮಾನವನು ಸಂಕಟ ಪಡುತಿರೆ
ಮರೆವಿನ ತಿಮಿರದಿ ಮುಂದಕೆ ನಡೆಸಲು
ಮಂಗಳ ಮುಂಬೆಳಕಾಗಿ ಬಂದಾ ||1||

ಹೆಣ್ಣಿಗೆ ಮಾಯೆಯ ಪಟ್ಟವ ಕಟ್ಟಿ
ಹೆತ್ತೊಡಲನ್ನೇ ಪಾಪಿ ತಾನೆನುತ
ಕೀಳ್ತನದೊರೆಯ ಬೆನ್ನಿಗೆ ಹೇರಿದ
ಪುರುಷರ ಭ್ರಾಂತಿಯ ಬಿಡಿಸುತ ಬಂದಾ || 2 ||

ಮರೆದೊಡೆ ಮಾನವ ಅರಿದೊಡೆ ಶರಣನು
ಮೇಲು ಕೀಳೆಂಬ ಭ್ರಾಂತಿಯದೇತಕೆ ?
ಸರ್ವ ಸಮತೆಯ ಕ್ರಾಂತಿಯ ಸಾರಲು
ದೈವೀ ಕಹಳೆಯ ಮೊಳಗುತ ಬಂದಾ ||3||

ಭಾರತ ಜನನಿಯ ಕೀರ್ತಿಯ ಕಂದ
ವಿಶ್ವಾಗಸದ ಚಿನ್ನಯ ಭಾನು
ಮನುಕುಲ ಸರಸಿಯ ಅಂದದ ಅಂಬುಜೆ
ಸಚ್ಚಿದಾನಂದ ಕಂದ ತಾ ಬಂದಾ ||4||

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ ಜಯ ಗುರು ಬಸವಾ Next