*
ಶ್ರೀ ಗುರು ಬಸವನೆ
ಶ್ರೀ ಗುರು ಬಸವನೆ ಭವ ಭಯ ಹರಣನೆ
ಯೋಗ ವಿಭೂಷಣ ಓಂ ಓಂ ಓಂ ||
ರಾಗದಿಂದೆಮ್ಮ ಬೇಗ ಪೊರೆಯಯ್ಯ
ಜಗದಾದಿದೇಶಿಕ ಓಂ ಓಂ ಓಂ ||1||
ಶರಣ ಹೃದಯದ ಶರಧಿ ಚಂದ್ರಮ
ಪಾರಮಾರ್ಥ ಪಥದೊಳು ಪ್ರಣವ ಸ್ವರೂಪಿ ||
ಬೆಂದಿಹ ಮನಗಳ ಚಂದದಿ ತಣಿಸುವ
ಜ್ಞಾನ ತುಹಿನಕರ ಓಂ ಓಂ ಓಂ ||2||
ವಿಭೂತಿ ಲೇಪಿತ ಶಿವಮಣಿ ಭೂಷಿತ
ಶುಭ ಧವಳಾಂಬರ ಶೋಭಿತನೆ ||
ಯೋಗ ನೇತ್ರನೆ ರಾಗ ರಹಿತನೆ
ಆಗು ಮಾಡೆನ್ನ ಓಂ ಓಂ ಓಂ || 3 ||
ಶರಣ ಗಣಮಣಿ ಭಕ್ತಕಣಿ
ಧರೆಗುತ್ತಮ ಗುರು ಚೂಡಾಮಣಿ |
ಸತ್ಯದೀಪಿಯ ಎತ್ತಿ ಹಿಡಿಯುತ
ಮಿಥ್ಯವ ಹರಿ ಓಂ ಓಂ ಓಂ ||4||
ಸತ್ತು ಚಿತ್ಯಾನಂದದಂಶಿಕ
ಅರ್ತಿಯಿಂದ ಈ ಇಳೆಗಿಳಿಯ ||
ಮಾತಾ ಪಿತೃವು ನೀನೆ ಎನುತಲಿ
ಓತು ಒಲಿದವು ಓಂ ಓಂ ಓಂ ||5||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*