Previous ಬಾ ಬಾ ಬಾರೆಲೆ ದೇವಾ ನೀನು ಮಾತಾಡು ಮಾತನಾಡೋ ಲಿಂಗಯ್ಯ Next

ಸವಿಯೊ ಸವಿಯೊ ಸವಿಯೊ ಸವಿಯೊ ಸವಿಯೊ ಲಿಂಗವೇ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಸವಿಯೊ ಸವಿಯೊ ಸವಿಯೊ ಸವಿಯೊ ಸವಿಯೊ ಲಿಂಗವೇ

ಸವಿಯೊ ಸವಿಯೊ ಸವಿಯೊ ಸವಿಯೊ ಸವಿಯೊ ಲಿಂಗವೇ
ಹೃದಯದೊಲವಿನ್ದಾಲ ನೀನು ಸವಿಯೊ ಲಿಂಗವೇ || ಪ ||

ಕಾಮಧೇನು ನೀನಾಗಿ ಲೋಕವೆಲ್ಲ ಸಲಹುತಿರಲು
ಭಕ್ತಿಧೇನು ನಾನಾಗಿ ನಿನಗೆ ಹಾಲನೀವೆನು || ೧ ||

ಕಲ್ಪತರುವು ನೀನಾಗಿ ಲೋಕಕಾಶ್ರಯ ಕೊಡಲು
ದೀನಶಿಲ್ಪಿ ವಕ್ಷದೊಳಗೆ ನಿನಗೆ ಗುಡಿಯ ಕಟ್ಟುವೆ || ೨ ||

ದಾನಿ ನೀನು ಲೋಕಕೆಲ್ಲ ದೀನೆ ನಾನು ಲೋಕದಲ್ಲಿ
ಚೆನ್ನಮನದಿ ಒಲವಿನ್ಹಾಲ ನಿನಗೆ ಸಲಿಸುವೆ || ೩ ||

ಬಾರೊ ಬಾರೊ ಬಾರೊ ಬಾರೊ ಬಾರೊ ಲಿಂಗವೇ
ಸವಿಯೊ ಸವಿಯೊ ಒಲವ | ಸಚ್ಚಿದಾನಂದ ಲಿಂಗವೆ || ೪ ||

ಪರಿವಿಡಿ (index)
Previous ಬಾ ಬಾ ಬಾರೆಲೆ ದೇವಾ ನೀನು ಮಾತಾಡು ಮಾತನಾಡೋ ಲಿಂಗಯ್ಯ Next