ಪುಷ್ಪವತಿಯಾದ ಬಾಲೆಗೆ ಪುಷ್ಪವೃಷ್ಟಿ
|
|
*
ಹೂವ ಸೂರ‍್ಯಾಡೋಣ ಸಿರಿ ಬಾಲೆಯ ಮೇಲೆ
ಹೂವ ಸೂರ‍್ಯಾಡೋಣ ಸಿರಿ ಬಾಲೆಯ ಮೇಲೆ
ಮುದ್ದು ಕುವರಿಯ ಮೇಲೆ ||ಪಲ್ಲವಿ||
ಬಾಲ್ಯವನು ತಾ ಕಳೆದು ಕನ್ನೆತನವನ್ನು ಪಡೆದು
ಪುಷ್ಪವತಿಯಾಗಿಹ ಪ್ರೇಮದ ಪುತ್ರಿಯ ಮೇಲೆ
ಹಸಿರು ಬಳೆಗಳ ತೊಡಿಸಿ ಸೀರೆ ಕುಪ್ಪುಸ ಉಡಿಸಿ
ಕಸ್ತೂರಿ ಪರಿಮಳ ಪೂಸಿ ಕುಸುಮ ಮಾಲೆಯ ಮುಡಿಸಿ || 1 ||
ಗುರು ಬಸವಣ್ಣನ ಶ್ರೀರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು
ಗುರು ಕರುಣೆ ಪಡೆದು ಲಿಂಗಧಾರಣೆ ಹೊಂದಿ
ಅಂಗ ಶುದ್ದಿಯ ಪಡೆದ ಮಂಗಳಾಂಗಿಯ ಮೇಲೆ ||2||
ಆಯುಷ್ಯ ಆರೋಗ್ಯ ಐಶ್ವರ್ಯ ಸದ್ವಿದ್ಯೆ
ಸಂವೃದ್ದಿ ಸಂತೃಪ್ತಿ ಹರಿದು ತಾ ಬರಲೆಂದು
ಹೆತ್ತವರಿಗೆ ಮುತ್ತಾಗಿ ಮನೆತನಕೆ ಬೆಳಕಾಗಿ
ಶರಣರ ಪಥದಲ್ಲಿ ನೀ ಸಾಗು ಎಂದರಸಿ. || 3||
(ಹುಡುಗಿ ದೊಡ್ಡವಳಾದಾಗಿನ ಸಮಾರಂಭದ ಹಾಡುಗಳು)
*