*
ಬನ್ನಿರೈ ಬಂಧುಗಳೇ
ಬನ್ನಿರೈ ಬಂಧುಗಳೇ ಜಗದ ಲೇಸು ಬಯಸುವ
ವಿಶ್ವಧರ್ಮವನ್ನು ಸಾರಿ ಒಂದುಗೂಡಿ ಬಾಳುವಾ || ಪ ||
ದೇವನೊಬ್ಬನಿಹನು ಎಂದು ವಿಶ್ವವವನ ದಾನವೆಂದು
ಸೃಷ್ಟಿಯನ್ನು ಇತ್ತ ಅವನ ಅಡಿಗೆ ಬಾಗಿ ಬದುಕುವಾ || 1 ||
ದೇವ ಸೃಷ್ಟಿಯಲ್ಲಿ ಮತ್ತೆ ಜಾತಿ ಭೇದವೆಣಿಸದೆಯೆ
ಜೀವ-ಕಾಯಯುಕರ ದೇವಾಂಶರೆಂದು ಕಾಣುವಾ || 2 ||
ವಿಜ್ಞಾನ ಕಲಿತವೆಂದು ದೇವನಿಲ್ಲವೆಂದು ಹಳಿದು
ಅಜ್ಞಾನದಿರವ ಹೊಂದಿ ನಾವು ಅಹಂಕಾರ ತಾಳದಿರುವಾ || 3 ||
ವಿಜ್ಞಾನ ಸೂರ್ಯನಹುದು ಅಜ್ಞಾನ ತಿಮಿರಕೆ
ಸುಜ್ಞಾನ ಸಾಧನೆಗೆ ಧರ್ಮವೆ ಬೇಕೆಮಗೆ || 4 ||
ಭೂಮಿ ಶಾಸ್ತ್ರ, ಭೌತಶಾಸ್ತ್ರ, ರಸಾಯನ ಗಣಿತಶಾಸ್ತ್ರ
ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಖಗೋಲ ಭೂಗೋಲಶಾಸ್ತ್ರ || 5 ||
ದೇವ ಸೃಷ್ಟಿ ಗುಟ್ಟು ಅಹುದು ದೇವಲೀಲೆ ಚತುರವು
ವಿಜ್ಞಾನವರಿತು ವಿವರಿಪುದು ದೇವಕರ್ತಶಕ್ತಿಯ || 6 ||
ಸಾಮಗಾನ ಮೆರೆಯುತಿದೆ ಸಾಮರಸ್ಯ ತೋರುತಿದೆ
ಸೋಮಸೂರ‍್ಯ ಭೂಮಿ ಅಗ್ನಿ ಎಲ್ಲೆಡೆಯ ವಸ್ತುವಲಿ || 7 ||
ಸೃಷ್ಟಿರೂಪ ಅರಿಯಲಿಕೆ ವಿಜ್ಞಾನಶಾಸ್ತ್ರವಿರಲಿ ನಮಗೆ
ದೃಷ್ಟಸೊಗಸ ಅನುಭವಿಸಲು ಕಲಾಜ್ಞಾನವೆಂದು ಇರಲಿ || 8 ||
ಮನುಕುಲದ ಮುನ್ನಡೆಗೆ ನೀತಿಶಾಸ್ತಬೇಕು ಈಗ
ಸ್ವಾನುಭವದಾನಂದಕೆ ಅಧ್ಯಾತ್ಮಶಾಸ್ಸ ನಮಗಿರಲಿ || 9 ||
ಕರ್ತನ ಕಮ್ಮಟವಿದೆಂದು ನಾವು ಅವನ ಮಕ್ಕಳೆಂದು
ಸ್ತುತ್ಯ ಮಾರ್ಗ ಹಿಡಿದು ನಡೆದು ಏಕತೆಯನ್ನು ಸಾಧಿಸುವಾ || 10 ||
*