ಲಿಂಗಪೂಜೆಯ ಮಾಡಿರೋ | ಶರಣರಿಗೆ ಶರಣು |
ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ
|
ಮನೆಗೆ ಬಾರಮ್ಮ | ಶರಣಿ ಮನೆಗೆ ಬಾರಮ್ಮ
ನಾನು ನಿನ್ನನ್ನು ಕರೆಯಲು ಬಂದೆ |
ಮನೆಗೆ ಬಾರಮ್ಮ | ಶರಣಿ ಮನೆಗೆ ಬಾರಮ್ಮ |ಪ|
ಜರತಾರಿ ಸೀರೆಯನ್ನುಟ್ಟು | ಜರದಂಚಿನ ಕುಪ್ಪಸ ತೊಟ್ಟು |
ಹಣೆಯ ಮೇಲ ವಿಭೂತಿಯಿಟ್ಟು | ಕುಶಲದಿಂದ ಕರೆಯಲು ಬಂದೆ | ಮನೆಗೆ ಬಾರಮ್ಮ ..... |1|
ತಂದೆ ತಾಯಿ ಎಲ್ಲಾ ಬಿಟ್ಟಿ | ಪಾದದ ತನಕ ಜಡೆಯ ಬಿಟ್ಟಿ |
ಕೊರಳೊಳು ರುದ್ರಾಕ್ಷಿ ಕಟ್ಟಿ | ಹಣೆಯ ಮೇಲೆ ವಿಭೂತಿ ಧರಿಸಿ |
ಮಲ್ಲಯ್ಯನ ಸತಿಯೆ ನೀನು | ಮನೆಗೆ ಬಾರಮ್ಮ......... |2|
ಲಿಂಗವಂತ ಮತದಲ್ಲಿ ಹುಟ್ಟಿ | ಕೌಶಿಕನನ್ನು ಸುಟ್ಟಿಬಿಟ್ಟಿ |
ಕಲ್ಯಾಣಕ್ಕೆ ಹೊರಟು ಬಿಟ್ಟಿ | ಎಲ್ಲಾ ಶರಣರಿಗಾದೆ ಭೆಟ್ಟಿ | ಮನೆಗೆ ಬಾರಮ್ಮ......... |3|
ಕನ್ನಡದೊಳು ವಚನವ ಕಟ್ಟಿ | ಅನುಭವಗೋಷ್ಠಿಯೊಳು ಹಾಡಿಬಿಟ್ಟಿ |
ಮಲ್ಲಿಕಾರ್ಜುನನ ಹುಡುಕುತ ಹೊಂಟಿ (ಹೊರಟಿ) | ತರುಗಳ ಪಶುಗಳ ಕೆಳೆಬಿಟ್ಟಿ | ಮನೆಗೆ ಬಾರಮ್ಮ......... |4|
ಗಂಗೆಯೋಳು ಜಳಕವ ಮಾಡಿ | ಲಿಂಗಕ್ಕೆ ಮಂಗಲ ಪಾಡಿ |
ಚೆನ್ನಮಲ್ಲಿಕಾರ್ಜುನಂಗೆ ನಿನ್ನ ಪ್ರಾಣವ ಅರ್ಪಿತ ಮಾಡಿ | ಮನೆಗೆ ಬಾರಮ್ಮ......... |5|
- ಜನಪದ
ಲಿಂಗಪೂಜೆಯ ಮಾಡಿರೋ | ಶರಣರಿಗೆ ಶರಣು |