ಚೆನ್ನಬಸವಣ್ಣನವರ ಜೋಗುಳ ಪದ

*

ಚೆನ್ನಬಸವಣ್ಣನವರ ಜೋಗುಳ ಪದ

ಜೋ ಜೋ (ಶಿವ) ಶರಣರು ಕೂಡಿ
ಜೋ ಎಂದು ತೂಗಿರಿ ಹರುಷದಿ ಪಾಡಿ
ಬಸವಾದಿ ಪ್ರಮಥರ ನಾಮವ ಕೋಡಾಡಿ
ಹಿಂಗಾ ತೂಗಿರಿ ಚೆನ್ನಬಸವನ ಕೋಂಡಾಡಿ ಜೋ ಜೋ (1)

ಶಿವಸ್ವಾಮಿ ನಾಗಾಲಾಂಬಿಕೆ ಗರ್ಭದೊಳು
ಸುವಿಚ್ಯಾರಿ ಸುಜ್ಞಾನಿ ಮಗನು ಜನಿಸಿ
ಕೂಡಲ ಸಂಗಮನಾಥ ಕರುಣಿ ತೋರಿಸಿ
ಹಿಂಗಾ ಚೆನ್ನಬಸವನೆಂದು ಪಾಡಿ ಜೋ ಜೋ (2)

ಹುಣ್ಣಿಮೆ ಚಂದ್ರನಂತೆ ದಿನ ದಿನಕ್ಕೆ ಬೆಳೆದ
ಬಸವಕಲ್ಯಾಣಕ್ಕೆ ಆತುರದಿ ಬಂದು
ಸೋದರ ಮಾವನ ಆಶ್ರಯ ಪಡೆದು
ಹಿಂಗಾ ಶರಣರ ಬಳಗವ ಬೆಳೆಸಿದರಂದು ಜೋ ಜೋ (3)

ಹನ್ನೆರಡು ವರುಷದ ಎಳೆಯ ವಯಸ್ಸಿನಲ್ಲಿ
ಶಾಸನ ಬರೆದರು ವಚನ ಶಾಸ್ತ್ರದಲ್ಲಿ
ಅಧ್ಯಕ್ಷರಾದರು, ಅನಭವ ಮಂಟಪದಲ್ಲಿ
ಹಿಂಗಾ ಸಿದ್ಧರಾಮೇಶ್ವರಗೆ ದೀಕ್ಷೆ ಕೊಟ್ಟಿದರಲ್ಲಿ ಜೋ ಜೋ (4)

ಕಲ್ಯಾಣ ಸುತ್ತೆಲ್ಲ ತಿರುಗಿ ನೋಡಿದರು
ದೇವರ ಹಾಲಳ್ಳಿಯಲ್ಲಿ ಬಂದು ನಿಂತಿದರು
ಗುಡ್ಡ ನೋಡಿ ಗವಿ ಕೊರೆದು ಕುಳಿತಿಹರು
ಹಂಗಾ ಪೂಜಾ ಅನುಷ್ಠಾನ ಭವ್ಯ ನಡೆಸಿದರು ಜೋ ಜೋ. (5)

ಕಲ್ಯಾಣ ಕ್ರಾಂತಿಗೆ ಕಹಳೆ ಊದಿದರು
ಲಿಂಗವಂತ ಧರ್ಮ ಜಗದಿ ಬೆಳಗಿದರು
ಉಳಿವಿಯಲ್ಲಿ ಲಿಂಗಮಯವಾದರು
ಹಿಂಗಾ ಚೆನ್ನಬಸವನೆಂದು ಜೋಗುಳ ಪಾಡಿ ಜೋ ಜೋ (6)

-ವೀರಶೆಟ್ಟಿ ಇಮಡಾಪೂರ

*
ಪರಿವಿಡಿ (index)
Previousಅಲ್ಲಮ ಪ್ರಭುದೇವರ ಜೋಗುಳ ಪದಸಿದ್ಧರಾಮೇಶ್ವರ ಜೋಗುಳ ಪದNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.