Previous ನೆನಹ ನೆನೆಯಲೆ ಮನವೇ ಲಿಂಗದೇವ ಸ್ತೋತ್ರ - 108 Next

ನೆನೆಯೆ ನೆನೆಯೆಲೆ ಮನವೇ ಮಹಲಿಂಗ ದೇವನ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ನೆನೆಯೆ ನೆನೆಯೆಲೆ ಮನವೇ ಮಹಲಿಂಗ ದೇವನ

ನೆನೆಯೆ ನೆನೆಯೆಲೆ ಮನವೇ ಮಹಲಿಂಗ ದೇವನ
ನೆನೆದು ನೆನೆಯಲೆ ನೀ ಸದ್ಭಕ್ತಿ ಸುಜಲದಿ || ಪ ||

ಎಣ್ಣೆ ತೀರುವ ಮುನ್ನ, ಕಣ್ಣು ನಂದುವ ಮುನ್ನ
ಹಣ್ಣು ಜಾರುವ ಮುನ್ನ, ಬನ್ನ ಬೀಳುವ ಮುನ್ನ
ಒಡಲು ನಡುಗುವ ಮುನ್ನ, ಸೊಡರು ಆರುವ ಮುನ್ನ
ಗಡಿಗೆ ಜಾರುವ ಮುನ್ನ, ಮೃಡನ ನೆನೆಯಲೇ ಮನವೇ || ೧ ||

ತನ್ನ ಭಾರವ ಅನ್ಯ ಜೀವಿಗಳ ಮೇಲ್ಹಾಕಿ
ಜನ್ನದ ಪಶುವಿನೊಲು ಮೃತ್ಯುಶಯ್ಕೆಯೊಳಿರ್ದು
ಕಾಲನಪ್ಪುಗೆಗ್ಹೆದರಿ ಕುನ್ನಿಯೊಲು ಕುಂಯ್ಗುಡುತ
ಕಾಲಾಂತಕನನಾಗ ಬೆದರಿ ನಿಂದಿಸದಿರು || ೨ ||

ಸತ್ವ ದೇಹದೊಳಿರಲು, ತತ್ತ್ವ ಪ್ರಾಣದೊಳಿರಲು
ಗೊತ್ತು ಗುರಿ ಸ್ಥಿರವಿರಲು, ಮತ್ತು ಮುಸುಕದಿರಲು
ಹೊತ್ತು ಹೋಗುವ ಮುನ್ನ, ಕುತ್ತು ಸಾರುವ ಮುನ್ನ
ಸತ್ತು ಚಿತ್ತಾನಂದ ದೇವನ ನೆನೆಯಲೆ ಮನವೆ || ೩ ||

ಪರಿವಿಡಿ (index)
Previous ನೆನಹ ನೆನೆಯಲೆ ಮನವೇ ಲಿಂಗದೇವ ಸ್ತೋತ್ರ - 108 Next