ಜಯ ಜಯ ಘನಲಿಂಗ | ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು |
ಅನುಭವದಡಿಗೆ |
-ಶ್ರೀ ಸರ್ಪಭೂಷಣ ಶಿವಯೋಗಿಗಳು
ಅನುಭಾವದಡಿಗೆಯ ಮಾಡಿ ಅದ
ಕ್ಕನುಭಾವಿಗಳು ಬಂದು ನೀವೆಲ್ಲ ಕೂಡಿ ||ಪ||
ತನುವೆಂಬ ಭಾಂಡವ ತೊಳೆದು| ಕೆಟ್ಟ
ಮನದ ಜಂಜಡವೆಂಬ ಮುಸುರೆಯ ಕಳೆದು
ಘನವೆಂಬ ಮನೆಯನೆ ಬಳಿದು| ಅಲ್ಲಿ
ಬಿನುಗು ತ್ರಿಗುಣವೆಂಬುವೊಲೆಗುಂಡ ತುಳಿದು ||೧||
ವಿರತಿಯೆಂಬುವ ಮಡಿಯುಟ್ಟು| ಪೂರ್ಣ
ಹರಭಕ್ತಿಯೆಂಬ ನೀರನೆ ಎಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು| ಮಾಯಾ
ಮರೆವೆಯೆಂಬುವ ಕಾಷ್ಠಗಳನ್ನೆಲ್ಲ ಸುಟ್ಟು || ೨ ||
ಪರವೆಂಬ ಸಾಮಗ್ರಿಗೂಡಿ| ಸಾರ
ತರ ಮೋಕ್ಷವೆಂದೆಂಬ ಪಾಕವ ಮಾಡಿ
ಹರ ಶರಣರು ಸವಿದಾಡಿ| ನಮ್ಮ
ಗುರುಸಿದ್ಧದೇವನ ಚರಣವ ಪಾಡಿ || ೩ ||
ಜಯ ಜಯ ಘನಲಿಂಗ | ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು |