Previous ಜ್ಯೋತಿ ಬೆಳುಗುತಿದೆ ಬಸವನ ನೆನೆ ಮನವೆ Next

ಜ್ಞಾನಪೂರ್ಣಂ ಜಗನ್-ಜ್ಯೋತಿ

*

ಜ್ಞಾನಪೂರ್ಣಂ ಜಗನ್-ಜ್ಯೋತಿ
ನಿರ್ಮಲವಾದ ಮನವೇ ಕರ್ಪೂರದಾರತಿ |ಪ|

ಅನುದಿನ ಗುರುವಿನ ಅನುರಾಗ ಭಕ್ತಿಯಲಿ
ಜನನ ಮರಣ ರಹಿತ ಜಂಗಮಗೆ ಬೆಳಗಿರಿ |1|
ಜ್ಞಾನಪೂರ್ಣಂ ಜಗನ್-ಜ್ಯೋತಿ. . . . . .

ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿಲಿ
ಸ್ವಾನುಭಾವದ ಸುಖ ತಾನೇ ಕೈ ಸೇರುವುದು
ಅನಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ |2|
ಜ್ಞಾನಪೂರ್ಣಂ ಜಗನ್-ಜ್ಯೋತಿ . . . . .

ನಾ ನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
ಅಷ್ಟವರ್ಣದ ಸ್ಥೂಲವು ಮಾನವ ಜನ್ಮಹುಟ್ಟಿ
ಬರುವುದು ದುರ್ಲಭವು ಕೊಟ್ಟಾನು ಗುರು
ಎಮಗೆ ಮಾಡಿದ ಫಲದಿಂದೆ
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ |3|

ಜ್ಞಾನಪೂರ್ಣಂ ಜಗನ್-ಜ್ಯೋತಿ . . . . .

ಪರಿವಿಡಿ (index)
Previous ಜ್ಯೋತಿ ಬೆಳುಗುತಿದೆ ಬಸವನ ನೆನೆ ಮನವೆ Next