Previous ಲಿಂಗದೇವ ಮಂಗಳ ಗೀತೆ ಜ್ಞಾನಪೂರ್ಣಂ ಜಗನ್-ಜ್ಯೋತಿ Next

ಜ್ಯೋತಿ ಬೆಳುಗುತಿದೆ.

*

ಜ್ಯೋತಿ ಬೆಳುಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ

ಜ್ಯೋತಿ ಬೆಳುಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ.
ಮಾತುಮನಂಗಳಿಂದತ್ತತ್ತ ಮೀರಿದ
ಸಾತಿಶಯದ ನಿರುಪಾಧಿಕ ನಿರ್ಮಲ |ಪ|

ಶಿವಧರ್ಮನಾಳವೆಂತೆಂಬ ಕಂಬದ ಮೇಲೆ
ಸುವಿವೇಕ ಹೃದಯೊಬ್ಜ ಪ್ರಣತೆಯೊಳು
ಸವೆಯದ ಸದ್ಭಕ್ತಿ ರಸತೈಲ ತೀವಿದ
ಪ್ರವಿಮಲ ಕಳೆಯೆಂಬ ಬತ್ತಿವಿಡಿದು ದಿವ್ಯ |1|

ಮುಸುಕಿದ ವಿಷಯಪತಂಗ ಬಿದ್ದುರುಳೆ ತಾ-
ಮಸಬುದ್ಧಿಯೆಂಬ ಕತ್ತಲೆಯಳಿಗೆ
ಮುಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೊರ್ದದನುಪಮ |2|

ಪ್ರಣವಾಕಾರದ ಗುಣ ಮೂರು ಮುಟ್ಟದ
ಗಣಗೆಗತೀತಾರ್ಥವನೆ ತೋರುವ
ಅಣುಮಾತ್ರ ಚಲನೆಯಿಲ್ಲದ ಮೋಕ್ಷಚಿಂತಾ
ಮಣಿಯೆನಿಸುವ ಶಂಭುಲಿಂಗವೆ ತಾನಾದ |3|

-ಶ್ರೀ ನಿಜಗುಣ ಶಿವಯೋಗಿಗಳು

ಪರಿವಿಡಿ (index)
Previous ಲಿಂಗದೇವ ಮಂಗಳ ಗೀತೆ ಜ್ಞಾನಪೂರ್ಣಂ ಜಗನ್-ಜ್ಯೋತಿ Next