ಬಸವ ಬಸವಾಯೆಂದು......

*

ಬಸವ ಬಸವಾಯೆಂದು ಬಿಸಿಗಣ್ಣವನ ನೋಡು
ಬಸವ ಬಸವಾಯೆಂದು ಕೂಡೇಕವಾಗು
ಬಸವ ಬಸವಾ ಎನೆ ಶಶಿಧರ ನೀನಾಗಿ
ಬಸವ ಬಸವಾಯೆಂದು ತಿಳಿದೊಮ್ಮೆ ನೆನೆಯೆ |1|

ಬಸವನ ಮಹಿಮೆಯ ಪಶುಜೀವರು ಬಲ್ಲರೆ
ಬಸವನ ಮಹಿಮೆಯ ಬಲ್ಲ ಶಶಿಧರನು
ಬಸವ ಬಸವಾಯೆಂದು ನೆನೆದವರಿಗೆಲ್ಲಯೆಲ್ಲ
ಅಸುವಿಲ್ಲ ಅವರೆಲ್ಲ ಬಸವನೊಳಗಿಹರು |2|

ದಿನಕ್ಕೊಮ್ಮೆಯಾದಡೆಯು ಬಸವನೆನ್ನಲುಬೇಕು
ಅನಿತಲ್ಲದೊಡೆ ದಿನಕರಡನೆನಬೇಕು
ಇನಿತು ಬಸವಯೆಂಬ ನುಡಿಯಿಲ್ಲದಿದ್ದರೆ
ದಿನಕರನುಳ್ಳ ಪರಿಯಲು ನರಕವವಗೆ |3|

ಬಸವಯೆನ್ನದವನರ ಬಾಯಿ ಬಿಲಬಾಯಿಯಾಯಿತು
ಬಸವಯೆನ್ನದವನ ಬಾಯಿ ಪಾಕುಳವು
ಬಸವಯೆನ್ನದವನ ಕಂಡರೆ ಪಾಪವು
ಬಸವಯೆನ್ನದವನೊಡಗೊಡೆ ನರಕ |4|

ಬಸವಯೆಂಬವನ ಕಂಡರೆ ಪಾಪ ಹರಿವುದು
ಬಸವಯೆಂಬವನ ನೋಡಿದರೆ ಭಯವಿಲ್ಲ
ಬಸವಯೆಂಬವನ ತಾನೆ ಗುರುಬಸವನುಯೆಂಬೆ
ಬಸವಯೆಂಬವನ ಶಿವನತ್ತಣವಯೆಂಬೆ |5|

- ಶ್ರೀ ಗುರು ಬಸವಾರ್ಯರು

ಪರಿವಿಡಿ (index)
Previousಸಾರೆ ಚಲ್ಯಾದೆ ಮುಕುತಿಎಲ್ಲ ಶರಣರ ನೆನೆದು ಎಲ್ಲರಲಿ ಒಂದೊಂದು ಬೇಡಿಕೊಂಬೆNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.