Previous ಅನುಭವದಡಿಗೆ ತಾಯಿ ಮಡಿಲ ತುಂಬಿ ಬಂದ Next

ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು

*

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಲಿಂಗಾಯತ ಧರ್ಮದ ಸಪ್ತ ಪ್ರಮಥರಲ್ಲಿ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಒಬ್ಬರು. ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮ ಪುರುಷನ ಆತ್ಮವಾದರೆ, ಚನ್ನಬಸವಣ್ಣನವರು ಪ್ರಾಣ ಸ್ವರೂಪರು, ಶೂನ್ಯ ಪೀಠಾಧೀಶ ಅಲ್ಲಮಪ್ರ ಶಿರಸ್ವರೂಪರಾದರೆ ಅಕ್ಕಮಹಾದೇವಿ ನಾಸಿಕದಂತೆ. ಸಿದ್ದರಾಮೇಶ್ವರ - ಮಡಿವಾ ಮಾಚಿದೇವರು ನೇತ್ರ ಸ್ವರೂಪರು, ಶ್ರೀ ಗುರು ಬಸವಣ್ಣನವರ ನೇತೃತ್ವದ ರೂಪಗೊಂಡ ಈ ಧರ್ಮಕ್ಕೆ ತಾತ್ವಿಕವಾಗಿ ಒಂದು ಚೌಕಟ್ಟನ್ನು, ವಿಚಾರಕ್ಕೆ ಒಂದು ಆಚಾರಕ್ರಮವನ್ನು ಒದಗಿಸಿಕೊಂಡ ಮಹಾಪುರುಷ ಚನ್ನಬಸವಣ್ಣನವರು.

ಶ್ರೀ ಚನ್ನಬಸವೇಶ


ಶ್ರೀ ಚನ್ನಬಸವೇಶ ಭಕ್ತರನು ಪೊರೆವೀಶ
ಜಯ ಭಜಕ ಜನ ಬಂಧು ಕಾರುಣ್ಯ ಸಿಂಧು

ಪರಮಗುರು ಬಸವನ ಕರಕಮಲ ಜನಿತನ
ಶರಣ ಹೃತ್ಸರಸಿಯ ಶ್ರೀ ಪರಮಹಂಸೆಯ

ಕಾರ್ತಿಕ ಪ್ರತಿಪದೆಯ ದೀವಳಿಗೆಯಂದು
ಮಾತೆಯ ಗರ್ಭದಿಂ ನೀ ಬಂದೆಯಂದು |
ಅವ್ವ ನಾಗಲಾಂಬಿಕೆಯ ಅಕ್ಕರೆಯ ಚಿಣ್ಣನೆ
ಅಯ್ಯ ಶಿವದೇವನ ಮಮತೆಯ ತನುಜನೆ

ಷಟಸ್ಥಲದ ಚೌಕಟ್ಟ ವಚನ ಶಾಸ್ತ್ರಕ್ಕೆ ಇತ್ತೆ
ಸಟೆಯ ಮಾಯಿಯ ಗೆಲಿದು ವಿರಾಗಿ ಏನಿಸಿದೆ |
ಉನ್ಮನಿಯ ಉಯ್ಯಾಲೆಯಲ್ಲಿ ತೂಗಿ ನಲಿದು
ಅನುಭವ ಮಂಟಪದ ಹೊಂಗಳ ನೀನಾದೆ

ವಚನ ವಾಹ್ಮಯಕ್ಕಂದು ಸಂಕಷ್ಟ ಎರಗಿರಲು
ಕಾಷಾಯ ಧರಿಸಿಯೂ ಖಡ್ಗವನು ನೀ ಹಿಡಿದೆ |
ಮುನ್ನಡೆಸಿ ಶರಣರನು ವಾಹ್ಮಯವ ರಕ್ಷಿಸಿದೆ
ಚನ್ನ ಹುಣ್ಣಿಮೆಯಂದು ಉಳಿವೆಯಲಿ ಬಯಲಾದೆ

ನೀ ಪಾದವಿಟ್ಟುದು ಸುಕ್ಷೇತ್ರ ತಾನಾಯ್ತು
ನೀ ನುಡಿದ ಮಾತೆಲ್ಲ ದಿವ್ಯ ಶಾಸ್ತ್ರವದಾಯ್ತು
ಶರಣ ಧರ್ಮದ ಉಳಿವು ನಿನ್ನಿಂದಲೇ ಆಯ್ತು
ವರ ಸಚ್ಚಿದಾನಂದನ ಮೆಚ್ಚುಗೆಯ ಮಗನಾದೆ

ಪುಸ್ತಕ: ಶರಣ ರತ್ನಗಳು, ಪುಟ, 19,

*
ಪರಿವಿಡಿ (index)
Previous ಅನುಭವದಡಿಗೆ ತಾಯಿ ಮಡಿಲ ತುಂಬಿ ಬಂದ Next